ಬೆಂಗಳೂರು: ರೈಲ್ವೆ ಸಚಿವಾಲಯವು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ಕ್ಲೋನ್( ತದ್ರೂಪಿ) ರೈಲುಗಳನ್ನು ಆರಂಭಿಸಲಿದೆ. ಸೆಪ್ಟೆಂಬರ್ 21 ರಿಂದ ಕ್ಲೋನ್ ರೈಲುಗಳು ಸಂಚಾರ ನಡೆಸಲಿದ್ದು, ಅದರ ಮಾಹಿತಿ ಇಲ್ಲಿದೆ.
1) ಕೆ.ಎಸ್.ಆರ್ ಬೆಂಗಳೂರು- ದಾನಾಪುರ- ಕೆಎಸ್ಆರ್ ವಿಶೇಷ ಸಾಪ್ತಾಹಿಕ ರೈಲು: ರೈಲು ಸಂಖ್ಯೆ 06509 ಕೆಎಸ್ಆರ್ ಬೆಂಗಳೂರು- ದಾನಾಪುರ ಸಾಪ್ತಾಹಿಕ ವಿಶೇಷ ರೈಲು ಸೆಪ್ಟೆಂಬರ್ 21 ರಿಂದ ಪ್ರತಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಬುಧವಾರ ಬೆಳಗ್ಗೆ 8 ಗಂಟೆಗೆ ದಾನಾಪುರ ತಲುಪುತ್ತದೆ. ಮರಳಿ, ದಾನಪುರ - ಬೆಂಗಳೂರಿಗೆ ಸೆಪ್ಟೆಂಬರ್ 23 ರಿಂದ ಪ್ರತಿ ಬುಧವಾರ ಸಂಜೆ 6:10 ಗಂಟೆಗೆ ದಾನಾಪುರದಿಂದ ಹೊರಟು ಶುಕ್ರವಾರ ಸಂಜೆ 6:20ಕ್ಕೆ ಬೆಂಗಳೂರು ತಲುಪುತ್ತದೆ.
*ನಿಲುಗಡೆ* ಜೋಲಾರಪೇಟೆ, ಕಾಟ್ಪಾಡಿ, ಚೆನ್ನೈ, ವಿಜಯವಾಡ, ವಾರಂಗಲ್, ಬಾಲ್ಹರ್ಷ, ನಾಗಪುರ, ಇಟಾರ್ಸಿ, ಜಬಲ್ ಪುರ, ಸಾತ್ನ, ಪ್ರಯಾಗ್‌ರಾಜ್ ಚೌಕಿ, ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ಆರಾ.
2) ಯಶವಂತಪುರ - ನಿಜಾಮುದ್ದೀನ್ ದ್ವಿಸಾಪ್ತಾಹಿಕ ರೈಲು: ಸೆಪ್ಟೆಂಬರ್ 23 ರಿಂದ ಪ್ರತಿ ಬುಧವಾರ- ಶನಿವಾರ ಮಧ್ಯಾಹ್ನ 1:55 ಗಂಟೆಗೆ ಯಶವಂತಪುರದಿಂದ ಹೊರಟು ಶುಕ್ರವಾರ ಮತ್ತು ಸೋಮವಾರ ಮಧ್ಯಾಹ್ನ 1:20ಕ್ಕೆ ನಿಜಾಮುದ್ದೀನ್ ತಲುಪುತ್ತದೆ. ಮರಳಿ ನಿಜಾಮುದ್ದೀನ್ - ಯಶವಂತಪುರ ವಿಶೇಷ ದ್ವಿಸಾಪ್ತಾಹಿಕ ರೈಲು 26 ರಿಂದ ಪ್ರತಿ ಶನಿವಾರ ಮತ್ತು ಮಂಗಳವಾರ ಬೆಳಿಗ್ಗೆ 7 ಗಂಟೆಗೆ ನಿಜಾಮುದ್ದೀನ್‌ನಿಂದ ಹೊರಟು ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 4:20ಕ್ಕೆ ಯಶವಂತಪುರ ತಲುಪುತ್ತದೆ.
3) ವಾಸ್ಕೋಡಗಾಮ - ನಿಜಾಮುದ್ದೀನ್ ಸಾಪ್ತಾಹಿಕ ರೈಲು: ವಾಸ್ಕೋಡಗಾಮ - ನಿಜಾಮುದ್ದೀನ್ ಸಾಪ್ತಾಹಿಕ ವಿಶೇಷ ರೈಲು ಸೆಪ್ಟೆಂಬರ್ 25 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 12:30 ಕ್ಕೆ ವಾಸ್ಕೋಡಗಾಮದಿಂದ ಹೊರಟು ಭಾನುವಾರ ಬೆಳಿಗ್ಗೆ 4:20 ಗಂಟೆಗೆ ನಿಜಾಮುದ್ದೀನ್ ತಲುಪುತ್ತದೆ. ಮರಳಿ, ನಿಜಾಮುದ್ದೀನ್ - ವಾಸ್ಕೋಡಗಾಮ ಸಾಪ್ತಾಹಿಕ ಸೆಪ್ಟೆಂಬರ್ 27 ರಿಂದ ಪ್ರತಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಹೊರಟು ಮಂಗಳವಾರ ಬೆಳಿಗ್ಗೆ 4:45 ಗಂಟೆಗೆ ವಾಸ್ಕೋಡಗಾಮ ತಲುಪುತ್ತದೆ.