ETV Bharat / state

ಅಶೋಕ್ - ವಿಶ್ವನಾಥ್ ನಡುವಿನ ಸಮಸ್ಯೆ ಇಂದೇ ಪರಿಹಾರವಾಗಲಿದೆ: ರೇಣುಕಾಚಾರ್ಯ - ಕಲ್ಲಡ್ಕ ಪ್ರಭಾಕರ್ ಶಾಲೆಗೆ ಕುಮಾರಸ್ವಾಮಿ ಭೇಟಿ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಅಶೋಕ್, ಸ್ವಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಶಾಸಕ ವಿಶ್ವನಾಥ್ ನಡುವಿನ ಸಮಸ್ಯೆ ಇಂದೇ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ
author img

By ETV Bharat Karnataka Team

Published : Dec 12, 2023, 6:10 PM IST

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ

ಬೆಂಗಳೂರು: ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಉದ್ಭವವಾಗಿಲ್ಲ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಶಾಸಕ ವಿಶ್ವನಾಥ್ ನಡುವೆ ಅಭಿಪ್ರಾಯ ಬೇಧವಿದೆಯೇ ಹೊರತು ಭಿನ್ನಮತವಲ್ಲ, ಯಡಿಯೂರಪ್ಪ ಇಂದು ಬೆಳಗಾವಿಗೆ ತೆರಳುತ್ತಿದ್ದು, ಎಲ್ಲವನ್ನೂ ಸರಿಪಡಿಸಲಿದ್ದಾರೆ. ಇಂದು ರಾತ್ರಿಯೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಅಭಿಪ್ರಾಯದಲ್ಲಿ ಭಿನ್ನನಿಲುವುಗಳಿವೆ ಅಷ್ಟೆ. ಯಡಿಯೂರಪ್ಪ ಬೆಳಗಾವಿಗೆ ಹೋಗುತ್ತಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಲಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಸರಿಯಾಗಲಿವೆ. ಅವರೆಲ್ಲಾ ಸದನದ ಒಳಗೆ ಹೋರಾಟ ನಡೆಸಲಿ, ನಾವು ಹೊರಗೆ ಹೋರಾಡಲಿದ್ದೇವೆ. ಅಶೋಕ್, ವಿಶ್ವನಾಥ್ ನಡುವೆ ಏನೇ ಸಮಸ್ಯೆ ಇದ್ದರೂ ಅದು ಸಮನ್ವಯತೆ ಕೊರತೆ ಮಾತ್ರ ಭಿನ್ನಮತವಲ್ಲ. ಇಂದು ರಾತ್ರಿಯೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಹಾಗೂ ಕೆಲ ತಪ್ಪು ನಿರ್ಧಾರಗಳಿಂದಾಗಿ ಬಿಜೆಪಿ ಸೋಲಿಗೆ ಕಾರಣವಾಯಿತು, ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ದೊಡ್ಡವರಾಗಿಬಿಡುತ್ತೀರಾ? ಉತ್ತರ ಕರ್ನಾಟಕದ ಜನ ವಿಜಯೇಂದ್ರ ಆಯ್ಕೆ ಸ್ವಾಗತ ಮಾಡಿದ್ದಾರೆ. ಯಡಿಯೂರಪ್ಪ ಆ ಭಾಗಕ್ಕೆ ಹೋದಲ್ಲಿ ಜನ ಸ್ವಾಗತ ಮಾಡುತ್ತಾರೆ ವಿನಾಃ ಕಾರಣ ಯಡಿಯೂರಪ್ಪ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಕೈಬಿಡಬೇಕು. ಇದು ಸರಿಯಲ್ಲ. ಇದನ್ನು ನಿಲ್ಲಿಸಬೇಕು, ಇಲ್ಲದೇ ಇದ್ದಲ್ಲಿ, ನಾವೂ ಸಭೆ ಸೇರುತ್ತೇವೆ, ನಮಗೂ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಎಚ್ಚರಿಕೆ ನೀಡಿದರು.

ಒಟ್ಟಾಗಿ ಹೋರಾಟ ಮಾಡೋಣ: ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಿ ಒಟ್ಟಾಗಿ ಒಂದಾಗಿ ಹೋರಾಟ ಮಾಡೋಣ. ನೀವು ಸದನದ ಒಳಗೆ ಹೋರಾಡಿ ನಾವು ಹೊರಗೆ ಹೋರಾಡುತ್ತೇವೆ. ಅದನ್ನು ಬಿಟ್ಟು ಯಡಿಯೂರಪ್ಪ ಕುಟುಂಬದ ಬಗ್ಗೆ ಅನಗತ್ಯ ಆರೋಪ ಬೇಡ ಎಂದು ಸಲಹೆ ನೀಡಿದರು.

ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಶಾಸಕರು, ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎನ್ನುತ್ತೀರಿ, ಸಚಿವ ಸ್ಥಾನ ಕೊಡಲಿಲ್ಲ ಎಂದು ಯಡಿಯೂರಪ್ಪ ವಿರುದ್ಧ ನಿರಂತರವಾಗಿ ಮಾತನಾಡಿದಿರಿ, ಆ ಸಂದರ್ಭದಲ್ಲಿ ವರಿಷ್ಠರು ಕರೆದು ಬುದ್ಧಿವಾದ ಹೇಳಬೇಕಿತ್ತು. ಆದರೆ, ಅದಾಗದ ಕಾರಣ ಇದು ಮುಂದುವರೆದು ಧಾರಾವಾಹಿ ರೀತಿ ಮಾತನಾಡುವಂತಾಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅಲ್ಲಿನ ಜನ ಮಾತನಾಡಿಲ್ಲ. ಬರ, ನೆರೆ ವೇಳೆ ಕೇಂದ್ರವನ್ನು ಕಾಯದೆ ಯಡಿಯೂರಪ್ಪ, ಬೊಮ್ಮಾಯಿ ಉತ್ತರ ಕರ್ನಾಟಕಕ್ಕೆ ನೆರವು ನೀಡಿದ್ದರು. ಇಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಇನ್ನು ಮುಂದಾದರೂ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ನಮಗೂ ಸಭೆ ಮಾಡಲು ಬರಲಿದೆ. ಹಿಂದೆ ನಾನೂ ಮಾತನಾಡಿದ್ದೆ, ಸೋಲಿನ ಕಾರಣ, ವೈಫಲ್ಯ ಮುಂದಿಟ್ಟಿದ್ದೆ ಅಷ್ಟೆ, ಸಚಿವರಾಗಲಿಲ್ಲ. ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಗಲಿಲ್ಲ ಎಂದು ಹೀಗೆ ಆರೋಪ ಮಾಡುವುದು ಸರಿಯಲ್ಲ, ಯತ್ನಾಳ್​ಗೆ ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿರಲಿಲ್ಲ. ನಿಮ್ಮದು ಒಂದೇ ಅಜೆಂಡಾ, ಯಡಿಯೂರಪ್ಪ ವಿಜಯೇಂದ್ರ ಬಿಟ್ಟು ಏನು ಮಾತನಾಡುತ್ತೀರಿ? ಇನ್ನಾದರೂ ಇದನ್ನು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ನಿಲುವಿನಲ್ಲಿ ಬದಲಾವಣೆ ಆಗಿದ್ದನ್ನು ಸ್ವಾಗತಿಸುತ್ತೇನೆ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದನ್ನು ಕಾಂಗ್ರೆಸ್ ಟೀಕಿಸಿವೆ. ಆದರೆ, ಕುಮಾರಸ್ವಾಮಿ ನಿಲುವಿನಲ್ಲಿ ಬದಲಾವಣೆಯಾಗಿದೆ, ಅದನ್ನು ಸ್ವಾಗತ ಮಾಡಲಿದ್ದೇನೆ. ದೇಶದ ಜ್ವಲಂತ ಸಮಸ್ಯೆಯಲ್ಲಿ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ್ ಪಾಲ್ಗೊಂಡಿದ್ದರು. ಹಾಗಾಗಿ, ಅಲ್ಲಿ ಹೋಗಿ ಜೈಶ್ರೀರಾಮ್ ಅಂದರೆ ತಪ್ಪೇನು? ಎಂದು ಕಾಂಗ್ರೆಸ್ ನಡೆ ಟೀಕಿಸಿದ ರೇಣುಕಾಚಾರ್ಯ, ಸಿದ್ದರಾಮಯ್ಯ ನನಗೆ ಕುಂಕುಮ ಹಚ್ಚಬೇಡಿ ಎನ್ನುತ್ತಾರೆ. ಆದರೆ, ಅಲ್ಪಸಂಖ್ಯಾತರ ಟೋಪಿ ಹಾಕಿಕೊಳ್ಳುತ್ತಾರೆ. ಪಕ್ಕದ ರಾಜ್ಯದ ಸಿಎಂ ರೇವಂತ ರೆಡ್ಡಿ ನೋಡಿ ಅವರು ಕುಂಕುಮ ಹಚ್ಚುತ್ತಾರೆ, ಸಂಘ ಪರಿವಾರದ ಹಿನ್ನೆಲೆ ಇದೆ, ಅವರ ಹೇಳಿಕೆಯನ್ನು ಬೆಂಬಲಿಸಿ ಅವರನ್ನು ನೋಡಿ ಕಲಿಯಿರಿ, ವಿನಾಕಾರಣ ಕುಮಾರಸ್ವಾಮಿಯನ್ನು ಟೀಕಿಸಿದಾಕ್ಷಣ ಅವರ ನಿಲುವಿನಲ್ಲಿ ಬದಲಾಗಲ್ಲ. ಆರ್​ಎಸ್​ಎಸ್​ ಸರಿಯಿದೆ ಎಂದು ಅವರು ಆತ್ಮಾವಲೋಕನ ಮಾಡಿಕೊಂಡು ಹೇಳಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಮುಖ್ಯಮಂತ್ರಿಗಳು ಜಮೀರ್ ಅಹ್ಮದ್ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಕೂಡಲೇ ಜಮೀರ್ ಅಹ್ಮದ್​ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಸಿಎಂ ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು, ಮೌಲ್ವಿಗಳ ಸಮಾವೇಶದಲ್ಲಿ 10 ಸಾವಿರ ಕೋಟಿ ಕೊಡುವುದಾಗಿ ಸಿಎಂ ಹೇಳಿದ್ದರು. ಇದೇನು ನಿಮ್ಮ ಮನೆಯ ಆಸ್ತಿಯಾ? ಇದು ಹಿಂದೂ ರಾಷ್ಟ್ರ, ಪಾಕಿಸ್ತಾನದಲ್ಲಿ ಹೋಗಿ ಹಿಂದೂಗಳ ಪರ ಮಾತನಾಡಿದರೆ ಅವರು ಸುಮ್ಮನಿರುತ್ತಾರಾ? ಮತಕ್ಕಾಗಿ ಇವರು ಈ ರೀತಿ ಮಾತನಾಡುತ್ತಿದ್ದಾರೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ಸೋಲಿನಿಂದಾಗಿ ಈ ರೀತಿ ಮಾತನಾಡುತ್ತಿದ್ದಾರೆ. ವೀರ ಸಾವರ್ಕರ್ ಫೋಟೋ ತೆಗೆದುಹಾಕಲು ಪ್ರಿಯಾಂಕ್ ಖರ್ಗೆ ಹೇಳಿದ್ದರು. ರಾಯರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಏನು ಮಾಡಲು ಹೊರಟಿದ್ದೀರಿ? ಇದನ್ನೇನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಕಾಂಗ್ರೆಸ್​ಗೆ ಮತ ಹಾಕುವುದೂ ಒಂದೆ ಪಾಕಿಸ್ತಾನದ ಕೈಗೆ ಆಡಳಿತ ಕೊಡುವುದೂ ಒಂದೆ, ಕಾಂಗ್ರೆಸ್​ನವರು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಾರೆ, ತನ್ವೀರ್ ಪೀರ್ ಜೊತೆ ಸಿಎಂ ವೇದಿಕೆ ಹಂಚಿಕೊಂಡಿದ್ದಲ್ಲದೇ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಸೋತಿರಬಹುದು. ಆದರೆ, ಬಿಜೆಪಿ ಸತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಆದರೆ, ಇವರಂತೆ ನಾವು ಯಾರನ್ನೂ ಓಲೈಕೆ ಮಾಡಲ್ಲ. ಕಾಂಗ್ರೆಸ್ ನಿಲುವು ಏಕಪಕ್ಷೀಯವಾಗಿದೆ. ಜಮೀರ್ ಹೇಳಿಕೆ ಕುರಿತು ಯುಟಿ ಖಾದರ್ ಮಾತನಾಡಲಿಲ್ಲ. ಜಮೀರ್ ಹೇಳಿಕೆ ಖಂಡಿಸಲಿಲ್ಲ. ಇದು ಒಳ್ಳೆಯ ನಡೆಯಲ್ಲ, ಕೂಡಲೇ ಜಮೀರ್ ಅವರನ್ನು ವಜಾ ಮಾಡಬೇಕು ಎಂದರು.

ಮೋದಿ ತೆಗೆದುಕೊಂಡ ತೀರ್ಮಾನವನ್ನು ಸುಪ್ರೀಂಕೋರ್ಟ್ ಕೇಂದ್ರದ ನಿಲುವನ್ನು ಎತ್ತಿ ಹಿಡಿದಿದೆ. ಎಷ್ಟು ಹಿಂದೂಗಳು ಸತ್ತರೂ ಸುಮ್ಮನಿರಬೇಕು ಎನ್ನುವ ನಿಮ್ಮ ಧೋರಣೆ ಸರಿಯಲ್ಲ, ಇನ್ನು ಮುಂದಾದರೂ ನಿಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಿ ಇಲ್ಲದಿದ್ದರೆ ಧೂಳಿಪಟವಾಗಲಿದ್ದೀರಿ, ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ದಿನಕ್ಕೊಂದು ಹೇಳಿಕೆ ಕೊಡಲು ಆಗಲ್ಲ: ಯತ್ನಾಳ್​ ಆರೋಪಕ್ಕೆ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.