ETV Bharat / state

ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಕೇಳಿ ಬರುತ್ತಿರುವ ರಾಜಕೀಯ ಕಾರಣಗಳೇನು? - NR Santosh committed suicide

ಎನ್.ಆರ್.ಸಂತೋಷ್ ಪತ್ನಿ ರಾಜಕೀಯ ಒತ್ತಡದ ಆರೋಪ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ವಿಡಿಯೋ ಸಿಡಿಯ ಬಾಂಬನ್ನೂ ಸಿಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.

The political reasons behind the suicide attempt of NR Santosh
ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಕೇಳಿ ಬರುತ್ತಿರುವ ರಾಜಕೀಯ ಕಾರಣಗಳೇನು?
author img

By

Published : Nov 28, 2020, 9:47 PM IST

Updated : Nov 29, 2020, 1:02 AM IST

ಬೆಂಗಳೂರು: ಸಿಎಂ ಆಪ್ತ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರ ಆತ್ಮಹತ್ಯೆ ಯತ್ನದ ಹಿಂದೆ‌ ಹಲವು ರಾಜಕೀಯ ಕಾರಣಗಳು ಕೇಳಿ ಬರುತ್ತಿವೆ.

ಎನ್.ಆರ್.ಸಂತೋಷ್ ಪತ್ನಿ ರಾಜಕೀಯ ಒತ್ತಡದ ಆರೋಪ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ವಿಡಿಯೋ ಸಿಡಿಯ ಬಾಂಬನ್ನೂ ಸಿಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಎನ್.ಆರ್. ಸಂತೋಷ್ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಬ್ಲಾಕ್ ಮೇಲ್ ಮಾಡುತ್ತಿದ್ದರು. ಆ ವಿಡಿಯೋವನ್ನು ದೆಹಲಿ ನಾಯಕರಿಗೂ ಕೊಟ್ಟಿದ್ದಾರೆ. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಆಪ್ತ ಕಾರ್ಯದರ್ಶಿ ಸ್ಥಾನದಿಂದ ಎನ್.ಆರ್.ಸಂತೋಷ್ ರನ್ನು ತೆಗೆದು ಹಾಕಲಾಗುತ್ತದೆ ಎಂಬ ಸುದ್ದಿಯೇ ಹರಿದಾಡುತ್ತಿತ್ತು. ಇದರಿಂದಲೂ ಸಂತೋಷ್ ಹತಾಶೆಗೊಳಗಾಗಿ ಒತ್ತಡಕ್ಕೊಳಗಾಗಿದ್ದರು ಎನ್ನಲಾಗಿದೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಂತೋಷ್‌ ಬಯಸಿದ್ದರು. ಅರಸೀಕೆರೆಯಲ್ಲಿ ಮರಿಸ್ವಾಮಿ ಮತ್ತು ಎನ್.ಆರ್. ಸಂತೋಷ್ ನಡುವೆ ಸಂಘರ್ಷ ಏರ್ಪಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗೆ ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಇಬ್ಬರ ಬೆಂಬಲಿಗರ ಮಧ್ಯೆ ಹಲವು ಸಲ ಕಚ್ಚಾಟ ನಡೆದಿತ್ತು. ತಮಗೆ ಟಿಕೆಟ್ ಕೈ ತಪ್ಪುವ ಭೀತಿ ಸಂತೋಷ್‌ರನ್ನು ಖಿನ್ನತೆಗೆ ಒಳಗಾಗಿಸಿತ್ತು ಎಂಬ ಮಾತುಗಳೂ ಕೇಳಿ ಬರುತ್ತಿದೆ.

ಇನ್ನು ಸ್ಥಳೀಯವಾಗಿ ಸರ್ಕಾರಿ ಆಡಳಿತ ಯಂತ್ರ ಮತ್ತು ಪಕ್ಷದ ಸ್ಥಳೀಯ ವಿದ್ಯಮಾನಗಳಲ್ಲಿ ಮೂಗು ತೂರಿಸುತ್ತಿದ್ದ ಬಗ್ಗೆ ಯಡಿಯೂರಪ್ಪ ಅವರಲ್ಲಿ ಸ್ವಪಕ್ಷೀಯರೇ ದೂರು ನೀಡಿದ್ದರು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಮುಂದೆಯೂ ಅರಸೀಕೆರೆ ಬಿಜೆಪಿ ಘಟಕದವರೂ ಸಂತೋಷ್ ಹಸ್ತಕ್ಷೇಪದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಎಲ್ಲಾ ಕಾರಣಗಳು ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಇಂಬು ನೀಡಿದೆಯಾ ಎಂಬ ಅನುಮಾನ ಮೂಡಿವೆ.

Last Updated : Nov 29, 2020, 1:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.