ETV Bharat / state

ಕಲಾಪಕ್ಕೂ ತಟ್ಟಿದ ಕೊರೊನಾ ಬಿಸಿ.. ಸ್ಯಾನಿಟೈಸರ್​ ಬಳಸಿದ ನಾಯಕರು.. - ಬೆಂಗಳೂರಲ್ಲಿ ಕೊರೊನಾ ವೈರಸ್

ವಿಶ್ವದಾದ್ಯಂತ ಕೊರೊನಾ ಸೃಷ್ಟಿಸಿರುವ ಭೀತಿಯಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್​ ಸೇರಿದಂತೆ ಅಗತ್ಯ ಕ್ರಮಗಳನ್ನು ಹೊಂದಲಾಗಿದೆ.

The political leader used by the sanitizer in session
ಸ್ಯಾನಿಟೈಸರ್​ ಬಳಸಿದ ನಾಯಕರು
author img

By

Published : Mar 10, 2020, 6:02 PM IST

ಬೆಂಗಳೂರು : ವಿಶ್ವದಾದ್ಯಂತ ಕೊರೊನಾ ಸೃಷ್ಟಿಸಿರುವ ಭೀತಿಯಿಂದ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್​ ಸೇರಿದಂತೆ ಅಗತ್ಯ ಕ್ರಮಗಳನ್ನು ಹೊಂದಲಾಗಿದೆ. ವಿಧಾನ ಸಭೆಯ ಒಳಗೂ ಮತ್ತು ಹೊರಗೂ ಕೊರೊನಾ ಚರ್ಚೆ ಏರ್ಪಟ್ಟಿದ್ದು, ರಾಜಕೀಯ ನಾಯಕರಿಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಯಿತು.

ಕೈಗಳನ್ನು ಶುಚಿಯಾಗಿಟ್ಟುಕೊಳ್ಳಲು ಪ್ರತಿಯೊಬ್ಬ ಶಾಸಕರೂ ಸ್ಯಾನಿಟೈಸರ್​ನ ಬಳಸಿ ಸ್ವಚ್ಛ ಮಾಡಿಕೊಳ್ಳುತ್ತಿದ್ದ ದೃಶ್ಯ ವಿಧಾನಸಭೆಯ ಮೊಗಸಾಲೆಯಲ್ಲಿ ಕಂಡು ಬಂತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕ ಡಾ. ಶ್ರೀನಿವಾಸ್‌ಮೂರ್ತಿ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛ ಮಾಡಿಕೊಂಡರು.

ಸ್ಯಾನಿಟೈಸರ್​ ಬಳಸಿದ ನಾಯಕರು

ಛೀಮಾರಿ ಹಾಕಲ್ವ!?: ಕಲಾಪ ಆರಂಭವಾದರೂ ಆಡಳಿತ ಪಕ್ಷದ ನಾಯಕರು ಹಾಜರಾಗದ ಕಾರಣ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಇವರಿಗೆಲ್ಲ ಛೀಮಾರಿ ಹಾಕಲ್ಲವೇ ಎಂದು ಸ್ಪೀಕರ್​ ಅವರನ್ನು ಪ್ರಶ್ನಿಸಿದರು. ಆಡಳಿತ ಪಕ್ಷದವರು ಸದನಕ್ಕೆ ಬೇಗ ಬರಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.