ETV Bharat / state

ಡಿಕೆಶಿ ಎಂಟ್ರಿ ಕೊಟ್ಟಿದ್ದಾರೆ, ಕಾದು ನೋಡೋಣ: ಸಿದ್ದರಾಮಯ್ಯ

ರಾಜೀನಾಮೆ ಕೊಡಲು ಹೊರಟ ಶಾಸಕರ ಮನವೊಲಿಸಲು ಡಿ.ಕೆ.ಶಿವಕುಮಾರ್​ ಪ್ರಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಏನೂ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜೀನಾಮೆ ಕೊಡಲು ಹೊರಟ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ
author img

By

Published : Jul 6, 2019, 5:01 PM IST

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಾಜೀನಾಮೆ ಕೊಡಲು ಹೊರಟ ಶಾಸಕರನ್ನು ತಡೆಯುವ ಕುರಿತು ಕಡೆಯ ಪ್ರಯತ್ನಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಚರ್ಚಿಸಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಪರಮೇಶ್ವರ್, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಶಿವರಾಜ್ ತಂಗಡಗಿ, ರೋಷನ್ ಬೇಗ್ ಸಭೆಯಲ್ಲಿದ್ದರು. ಸಭೆ ನಂತರ ಮಾತನಾಡಿದ ಸಿದ್ದರಾಮಯ್ಯ, ರಾಜೀನಾಮೆ ಕೊಡಲು ಹೊರಟ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ, ಆದ್ರೆ ಸಿಗುತ್ತಿಲ್ಲ. ಡಿಕೆಶಿ ಎಂಟ್ರಿ‌ ಕೊಟ್ಡಿದ್ದಾರೆ. ಕಾದು ನೋಡೋಣ. ಡಿಕೆಶಿ ನಾಲ್ಕು ಜನ ಶಾಸಕರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸರ್ಕಾರದ ಅಸ್ತಿತ್ವಕ್ಕೆ ಏನೂ ಆಗೋದಿಲ್ಲ. ಯಾರ ರಾಜೀನಾಮೆಯೂ ಅಂಗೀಕಾರ ಆಗಿಲ್ಲ. ವೇಣುಗೋಪಾಲ್ ಬರ್ತಿದ್ದಾರೆ. ಸರ್ಕಾರ ಏನೂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜೀನಾಮೆ ಕೊಡಲು ಹೊರಟ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ: ಸಿದ್ದರಾಮಯ್ಯ

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎಲ್ಲರ ಮನವೊಲಿಸೋ ಪ್ರಯತ್ನ ಮಾಡಿದ್ದೇವೆ. ಶಾಸಕರು ಕೂಡ ಸ್ಪಂದನೆ‌ ಮಾಡಿದ್ದಾರೆ. ನೋಡೋಣ ಏನಾಗುತ್ತೆ ಅಂತ. ರಾಮಲಿಂಗಾರೆಡ್ಡಿ ತಮ್ಮ ಮೇಲೆ ಗರಂ ಆಗಿರೋದು ಊಹಾಪೋಹ. ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಲು ಹೋಗಿದ್ದಾರೆ ಅಂತ ಆಲೋಚನೆ‌ ಮಾಡಬೇಕಾಗಿದೆ. ನಮ್ಮ‌ ಮುಂದೆ ಎಲ್ಲ ಆಯ್ಕೆಗಳು ಇವೆ ಎಂದರು.‌

Intro:ರಾಜೀನಾಮೆ ಕೊಡಲು ಹೊರಟ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ- ಡಿಕೆಶಿ ಎಂಟ್ರಿ ಕೊಟ್ಟಿದಾರೆ ಕಾದು ನೋೋಣ- ಸಿದ್ದರಾಮಯ್ಯ

ಸತತ ಮೂರು ಗಂಟೆಗಳ ಕಾಲ ಸಭೆ ನಡೆಸಿ ಹೊರಟ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಮೈತ್ರಿ ಸರ್ಕಾರದ ಮುಂದಿನ ನಡೆಗಳ ಬಗ್ಗೆ ಚರ್ಚಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಬಗ್ಗೆ, ರಾಜಿನಾಮೆ ಕೊಡಲು ಹೊರಟ ಶಾಸಕರನ್ನು ತಡೆಯುವ ಕಡೆಯ ಪ್ರಯತ್ನಗಳ ಬಗ್ಗೆ ಸಭೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಪರಮೇಶ್ವರ್, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಶಿವರಾಜ್ ತಂಗಡಗಿ, ರೋಷನ್ ಬೇಗ್ ಸಭೆಯಲ್ಲಿದ್ದರು.
ಮಾತುಕತೆ ಮುಗಿಸಿ ಹೊರಬಂದ ಸಿದ್ಧರಾಮಯ್ಯ, ಮಾಧ್ಯಮದೊಂದಿಗೆ ಮಾತನಾಡಿ ರಾಜಿನಾಮೆ ಕೊಡಲು ಹೊರಟ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ ಆದ್ರೆ ಸಿಗುತ್ತಿಲ್ಲ. ಡಿಕೆಶಿ ಎಂಟ್ರಿ‌ ಕೊಟ್ಡಿದ್ದಾರೆ, ಕಾದು ನೋಡೋಣ.ಡಿಕೆಶಿ ನಾಲ್ಕು ಜನ ಶಾಸಕರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮುನಿರತ್ನಣ ಎಸ್ ಟಿ ಸೋಮಶೇಖರ್, ರಾಮಲಿಂಗ ರೆಡ್ಡಿಯವರನ್ಮು ತಮ್ಮ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಉಳಿದ ಶಾಸಕರನ್ನ ಸಂಪರ್ಕ ಮಾಡ್ತಾ ಇದೀವಿ ಅವರು ಸಿಗ್ತಾ ಇಲ್ಲ.
ಸರ್ಕಾರ ಅಸ್ತಿತ್ವ ಏನೂ ಆಗೋದಿಲ್ಲ. ಯಾರ
ರಾಜೀನಾಮೆಯೂ ಅಂಗೀಕಾರ ಆಗಿಲ್ಲ, ಸರ್ಕಾರ ಅಸ್ಥಿರ ಹೇಗಾಗುತ್ತೆ. ಸ್ಪೀಕರ್ ಇರಲಿಲ್ಲ. ಸ್ಪೀಕರ್ ಕೂಡಾ ಹೇಳಿಕೆ ಕೊಟ್ಟಿದ್ದಾರೆ, ನನ್ನ ಗಮನಕ್ಕೆ ಯಾರೂ ತರಲಿಲ್ಲ. ಬರುವ ಸೂಚನೆ ಇದ್ದಿದ್ದರೆ ನಾನು ಅಲ್ಲೇ ಇರುತ್ತಿದ್ದೆ ಎಂದಿದ್ದಾರೆ. ಸರ್ಕಾರಕ್ಕೆ ಏನೂ ಆಗೋದಿಲ್ಲ. ವೇಣುಗೋಪಾಲ್ ಬರ್ತಾ ಇದಾರೆ, ಸರ್ಕಾರ ಏನೂ ಆಗಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನು ಈಶ್ವರ್ ಖಂಡ್ರೆ ಮಾತನಾಡಿ, ಎಲ್ಲಾರ ಮನವೊಲಿಸೋ ಪ್ರಯತ್ನ ಮಾಡಿದ್ದೇವೆ..ಶಾಸಕರು ಕೂಡ ಸ್ಪಂದನೆ‌ ಮಾಡಿದ್ದಾರೆ..‌ನೋಡೋಣ ಏನಾಗುತ್ತೆ ಅಂತ, ರಾಮಲಿಂಗಾರೆಡ್ಡಿ ತಮ್ಮ ಮೇಲೆ ಗರಂ ಆಗಿರೋದು ಊಹಾಪೋಹ, ರಾಮಲಿಂಗಾರೆಡ್ಡಿ ಪಕ್ಷಕ್ಕೆ ತುಂಬಾ ನಿಷ್ಟರಾಗಿದ್ದಾರೆ ಹಾಗೆಯೆ ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಲು ಹೋಗಿದ್ದಾರೆ ಅಂತ ಆಲೋಚನೆ‌ ಮಾಡಬೇಕಾಗಿದೆ. ನಮ್ಮ‌ ಮುಂದೆ ಎಲ್ಲ ಆಯ್ಕೆಗಳು ಇವೆ ಎಂದರು.‌ ಜೊತೆಗೆ ಕಾಂಗ್ರೆಸ್ ನ ವರಿಷ್ಟರು ಹಾಗೂ ಹೈ ಕಂಮಾಂಡ್ ತೀರ್ಮಾನ ಮಾಡ್ತಾರೆ, ಸಧ್ಯದ ಬೆಳವಣಿಗೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದರು.
ಸೌಮ್ಯಶ್ರೀ
Kn_Bng_sidhramaiah_byte_script_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.