ETV Bharat / state

ಸ್ಥಾನ ಉಳಿಸಿಕೊಳ್ಳಲು ಸಿಎಂ ನಡೆಸಿದ ಕಡೆಯ ಪ್ರಯತ್ನ ವಿಫಲ! ಆಸೆ ಕೈಬಿಟ್ಟ ಮೈತ್ರಿ ನಾಯಕರು!?

ಸರ್ಕಾರ ಉಳಿಸಿಕೊಳ್ಳಲು ಆಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಸಿಎಂ ಕುಮಾರಸ್ವಾಮಿ, ವಿಶ್ವಾಸವನ್ನು ಮತಕ್ಕೆ ಹಾಕುವ ಬದಲು ವಿದಾಯ ಭಾಷಣ ಮಾಡಿ ರಾಜಭವನದತ್ತ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎಂಬ ಮಾಹಿತಿ ಇದೆ.

ಸಿಎಂ ಕುಮಾರಸ್ವಾಮಿ
author img

By

Published : Jul 22, 2019, 5:02 PM IST

ಬೆಂಗಳೂರು: ತಮ್ಮ ಸ್ಥಾನ ಉಳಿಸಿಕೊಳ್ಳಲು ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡೆಸಿದ ಕಡೆಯ ಪ್ರಯತ್ನ ಫಲ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಇಂದು ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಜು. 24ರವರೆಗೆ ವಿಶ್ವಾಸಮತ ಸಾಬೀತು ಪ್ರಕ್ರಿಯೆ ಮುಂದೂಡಿಸುವ ಯತ್ನ ಮಾಡಿದ್ದರು. ಆದರೆ, ಇದು ಫಲ ಕೊಡುವ ಸೂಚನೆ ಇಲ್ಲ ಎಂಬ ಮಾಹಿತಿ ಇದೆ.

ವಿಳಂಬ ಮಾಡಿದರೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎನ್. ಮಹೇಶ್ ಪಕ್ಷಕ್ಕೆ ನೀಡಿದ ಬೆಂಬಲದ ಮಾದರಿಯಲ್ಲೇ ಇನ್ನಷ್ಟು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಬಂದು ಬಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂಬ ಮಾಹಿತಿ ಇದೆ. ಅಲ್ಲದೆ ಇನ್ನಷ್ಟು ಮುಂದೂಡಿದರೆ ನಾನು ವಚನ ಭ್ರಷ್ಟ ಆಗುತ್ತೇನೆ ಎಂಬ ಮಾತನ್ನು ಸದನದಲ್ಲೇ ಹೇಳಿದ್ದು ಸ್ಪಷ್ಟವಾಗಿ ಇಂದು ಸಂಜೆ ವಿಶ್ವಾಸ ಮತಕ್ಕೆ ಹಾಕುವುದು ಖಚಿತ ಎನ್ನಲಾಗುತ್ತಿದೆ.

ಶಾಸಕರಿಗೆ ಬುಲಾವ್

ಈಗಾಗಲೇ ದೋಸ್ತಿ ಪಕ್ಷದ ನಾಯಕರು ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಸಂಜೆ ವೇಳೆಗೆ ಅದರಲ್ಲೂ ಸಂಜೆ 5-6 ಗಂಟೆ ಒಳಗೆ ಎಲ್ಲರೂ ಸದನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಮೂರೂ ಪಕ್ಷದವರು ಕೆಲ ಶಾಸಕರು ಸದನದಿಂದ ಹೊರಗಿದ್ದು, ಅವರೆಲ್ಲರೂ ಸಮಯ ಮಿತಿ ಒಳಗೆ ಆಗಮಿಸುವಂತೆ ಸೂಚಿಸಲಾಗಿದೆ. ಬಿಜೆಪಿ ಶಾಸಕರೊಬ್ಬರು ಅನಾರೋಗ್ಯ ಪೀಡಿತರಾಗಿದ್ದು ಅವರನ್ನೂ ಕರೆಸಲಾಗಿದೆ. ಅಲ್ಲದೆ ಮೂವರು ಶಾಸಕೀಯರು ಇನ್ನೂ ಆಗಮಿಸಿಲ್ಲ. ಇವರಿಗೂ ಬರಲು ತಿಳಿಸಲಾಗಿದೆ.

CM HDK
ಚರ್ಚೆಯಲ್ಲಿ ತೊಡಗಿರುವ ಸಿಎಂ ಕುಮಾರಸ್ವಾಮಿ

ಒಟ್ಟಾರೆ ಊಟದ ವಿರಾಮದ ಥರ ವಿಧಾನಸಭೆಯಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆ ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದ ಮಾಹಿತಿ ದಟ್ಟವಾಗಿದೆ.

ಸಿಎಂಗೆ ಸಾಥ್ ಕೊಟ್ಟಿಲ್ಲ

ಕಾಂಗ್ರೆಸ್ ಪಕ್ಷ ಸಿಎಂ ಆಶಯಕ್ಕೆ ಬೆಲೆ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಆಸ್ಪತ್ರೆ ಯಲ್ಲಿರುವ ಶಾಸಕ ನಾಗೇಂದ್ರ, ಬೆಂಗಳೂರಿನಲ್ಲಿ ಇರುವ ರಾಜೀನಾಮೆ ನೀಡಿದ ಶಾಸಕರಾದ ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಸದನದಲ್ಲಿ ಉಪಸ್ಥಿತರಿರುವ ಪಕ್ಷೇತರ ಶಾಸಕ ನಾಗೇಶ್ ಹಾಗೂ ಇನ್ನಿತರ ಶಾಸಕರನ್ನು ವಾಪಸ್ ಕರೆಸಬಹುದು ಎನ್ನುವ ವಿಶ್ವಾಸ ಸಿಎಂ ಹೊಂದಿದ್ದರು ಎನ್ನಲಾಗಿದೆ. ಆದರೆ, ವಿಶ್ವಾಸ ಗಳಿಸುವ ಸಾಧ್ಯತೆ ಇಲ್ಲ ಎಂದು ಮನವರಿಕೆಯಾದ ಕಾಂಗ್ರೆಸ್ ನಾಯಕರು ಸಿಎಂ ಗೆ ಸಾಥ್ ಕೊಟ್ಟಿಲ್ಲ. ಇನ್ನಷ್ಟು ಪ್ರಯತ್ನ ಮಾಡಿ ಜನರ ದೃಷ್ಟಿಯಲ್ಲಿ ಕೀಳಾಗಬಾರದು ಅನ್ನುವ ಉದ್ದೇಶದಿಂದ ಸರ್ಕಾರ ಉಳಿಸಿಕೊಕೊಳ್ಳುವ ಪ್ರಯತ್ನ ಕೈ ಬಿಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸರ್ಕಾರ ಉಳಿಸಿಕೊಳ್ಳಲು ಆಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಸಿಎಂ ಕುಮಾರಸ್ವಾಮಿ, ವಿಶ್ವಾಸವನ್ನು ಮತಕ್ಕೆ ಹಾಕುವ ಬದಲು ವಿದಾಯ ಭಾಷಣ ಮಾಡಿ ರಾಜಭವನದತ್ತ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎಂಬ ಮಾಹಿತಿ ಇದೆ.

Intro:newsBody:ಸ್ಥಾನ ಉಳಿಸಿಕೊಳ್ಳಲು ಸಿಎಂ ನಡೆಸಿದ ಕಡೆಯ ಪ್ರಯತ್ನ ವಿಫಲ! ಆಸೆ ಕೈಬಿಟ್ಟ ಮೈತ್ರಿ ನಾಯಕರು!?

ಬೆಂಗಳೂರು: ತಮ್ಮ ಸ್ಥಾನ ಉಳಿಸಿಕೊಳ್ಳಲು ಸಿಎಂ ಎಚ್.ಡಿ. ಕುಮಾರಸ್ವಾಮಿ ನಡೆಸಿದ ಕಡೆಯ ಪ್ರಯತ್ನ ಫಲ ಕೊಟ್ಟಿಲ್ಲ ಎಂಬ ಮಾಹಿತಿ ಇದೆ.
ಇಂದು ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಜು. 24ರವರೆಗೆ ವಿಶ್ವಾಸಮತ ಸಾಬೀತು ಪ್ರಕ್ರಿಯೆ ಮುಂದೂಡಿಸುವ ಯತ್ನ ಮಾಡಿದ್ದರು. ಆದರೆ ಇದು ಫಲ ಕೊಡುವ ಸೂಚನೆ ಇಲ್ಲ ಎಂಬ ಮಾಹಿತಿ ಇದೆ. ವಿಳಂಬ ಮಾಡಿದರೆ ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಎನ್. ಮಹೇಶ್ ಪಕ್ಷಕ್ಕೆ ನೀಡಿದ ಬೆಂಬಲದ ಮಾದರಿಯಲ್ಲೇ ಇನ್ನಷ್ಟು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಬಂದುಬಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂಬ ಮಾಹಿತಿ ಇದೆ. ಅಲ್ಲದೆ ಇನ್ನಷ್ಟು ಮುಂದೂಡಿದರೆ ನಾನು ವಚನ ಭ್ರಷ್ಟ ಆಗುತ್ತೇನೆ ಎಂಬ ಮಾತನ್ನು ಸದನದಲ್ಲೇ ಹೇಳಿದ್ದು ಸ್ಪಷ್ಟವಾಗಿ ಇಂದು ಸಂಜೆ ವಿಶ್ವಾಸ ಮತಕ್ಕೆ ಹಾಕುವುದು ಖಚಿತ ಎನ್ನಲಾಗುತ್ತಿದೆ.
ಶಾಸಕರಿಗೆ ಬುಲಾವ್
ಈಗಾಗಲೇ ದೋಸ್ತಿ ಪಕ್ಷದ ನಾಯಕರು ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಸಂಜೆ ವೇಳೆಗೆ ಅದರಲ್ಲೂ ಸಂಜೆ 5-6 ಗಂಟೆ ಒಳಗೆ ಎಲ್ಲರೂ ಸದನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಮೂರೂ ಪಕ್ಷದವರು ಕೆಲ ಶಾಸಕರು ಸದನದಿಂದ ಹೊರಗಿದ್ದು, ಅವರೆಲ್ಲರೂ ಸಮಯ ಮಿತಿ ಒಳಗೆ ಆಗಮಿಸುವಂತೆ ಸೂಚಿಸಲಾಗಿದೆ. ಬಿಜೆಪಿ ಶಾಸಕ ಕೋ್ಯಾನ್ ಅನಾರೋಗ್ಯ ಪೀಡಿತರಾಗಿದ್ದು ಅವರನ್ನೂ ಕರೆಸಲಾಗಿದೆ. ಅಲ್ಲದೆ ಮೂವರು ಶಾಸಕೀಯರು ಇನ್ನೂ ಆಗಮಿಸಿಲ್ಲ. ಇವರಿಗೂ ಬರಲು ತಿಳಿಸಲಾಗಿದೆ.
ಒಟ್ಟಾರೆ ಊಟದ ವಿರಾಮದ ತರ ವಿಧಾನಸಭೆಯಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆ ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದ ಮಾಹಿತಿ ದಟ್ಟವಾಗಿದೆ.
ಸಿಎಂಗೆ ಸಾಥ್ ಕೊಟ್ಟಿಲ್ಲ
ಕಾಂಗ್ರೆಸ್ ಪಕ್ಷ ಸಿಎಂ ಆಶಯಕ್ಕೆ ಬೆಲೆ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಆಸ್ಪತ್ರೆ ಯಲ್ಲಿರುವ ಶಾಸಕ ನಾಗೇಂದ್ರ, ಬೆಂಗಳೂರಿನಲ್ಲಿ ಇರುವ ರಾಜೀನಾಮೆ ನೀಡಿದ ಶಾಸಕರಾದ ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಸದನದಲ್ಲಿ ಉಪಸ್ಥಿತರಿರುವ ಪಕ್ಷೇತರ ಶಾಸಕ ನಾಗೇಶ್ ಹಾಗೂ ಇನ್ನಿತರ ಶಾಸಕರನ್ನು ವಾಪಸ್ ಕರೆಸಬಹುದು ಎನ್ನುವ ವಿಶ್ವಾಸ ಸಿಎಂ ಹೊಂದಿದ್ದರು ಎನ್ನಲಾಗಿದೆ. ಆದರೆ ವಿಶ್ವಾಸ ಗಳಿಸುವ ಸಾಧ್ಯತೆ ಇಲ್ಲ ಎಂದು ಮನವರಿಕೆಯಾದ ಕಾಂಗ್ರೆಸ್ ನಾಯಕರು ಸಿಎಂ ಗೆ ಸಾಥ್ ಕೊಟ್ಟಿಲ್ಲ. ಇನ್ನಷ್ಟು ಪ್ರಯತ್ನ ಮಾಡಿ ಜನರ ದೃಷ್ಟಿಯಲ್ಲಿ ಕೀಳಾಗಬಾರದು ಅನ್ನುವ ಉದ್ದೇಶದಿಂದ ಸರ್ಕಾರ ಉಳಿಸಿಕೊಕೊಳ್ಳುವ ಪ್ರಯತ್ನ ಕೈ ಬಿಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸರ್ಕಾರ ಉಳಿಸಿಕೊಳ್ಳಲು ಆಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಸಿಎಂ ಕುಮಾರಸ್ವಾಮಿ, ವಿಶ್ವಾಸವನ್ನು ಮತಕ್ಕೆ ಹಾಕುವ ಬದಲು ವಿದಾಯ ಭಾಷಣ ಮಾಡಿ ರಾಜಭವನದತ್ತ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎಂಬ ಮಾಹಿತಿ ಇದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.