ETV Bharat / state

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಪೊಲೀಸ್​ ಬಾತ್ಮೀದಾರನ ಕೊಲೆ.. - ಬೆಂಗಳೂರು ಅಪರಾಧ ಸುದ್ದಿ

ಅಪರಾಧ ಎಸಗುವವರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದ ಮಾಹಿತಿದಾರನನ್ನು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

informant was murdered
ಕೊಲೆಯಾದ ವ್ಯಕ್ತಿ
author img

By

Published : Jan 26, 2020, 4:40 PM IST

ಬೆಂಗಳೂರು: ಅಪರಾಧ ಎಸಗುವವರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದ ಮಾಹಿತಿದಾರನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪ್ರಭು ಅಲಿಯಾಸ್‌ ಅಪ್ಪು ಕೊಲೆಯಾದ ದುರ್ದೈವಿಯಾಗಿದ್ದು, ಬಸವೇಶ್ವರ ನಗರದ ಕಮಲಾನಗರದಲ್ಲಿ ಈ ಘಟನೆ ನಡೆದಿದೆ. ಸಿದ್ದೇಶ್ವರ ಕೋ- ಆಪರೇಟಿವ್ ಬ್ಯಾಂಕ್​ನಲ್ಲಿ ಚೆಕ್ ಕಲೆಕ್ಟರ್​ ಆಗಿ ಕೆಲಸ ಮಾಡ್ತಿದ್ದ ಪ್ರಭು, ಪೊಲೀಸರಿಗೆ ಕಳ್ಳರ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಹಿಂದೆ ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದು ಕೊಟ್ಟಿದ್ದರು. ನಿನ್ನೆ ರಾತ್ರಿ ಕೆಲಸ‌‌ ಮುಗಿಸಿ ಮನೆಗೆ ಹೋಗುವಾಗ ದುರ್ಷ್ಕಮಿಗಳು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

ದುಷ್ಕರ್ಮಿಗಳಿಂದ ಬಾತ್ಮೀದಾರನ ಕೊಲೆ

ಇನ್ನು ಸ್ಥಳಕ್ಕೆ ಬಂದು ಪರಿಶೀಲನೆ‌ ನಡೆಸಿದ ಪೊಲೀಸರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Intro:Body:ಕಳ್ಳರ ಬಗ್ಗೆ ಮಾಹಿತಿ ನೀಡುತ್ತಿದ್ದ ಬಾತ್ಮೀಯದಾರನ ಕೊಲೆ‌ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಆಪರಾಧ ಎಸಗುವವರ ಬಗ್ಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಮಾಹಿತಿದಾರನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ..
ಪ್ರಭು ಆಲಿಯಾಸ್‌ ಅಪ್ಪು ಕೊಲೆಯಾದ ದುರ್ದೈವಿ.. ಬಸವೇಶ್ವರ ನಗರದ ಕಮಲಾನಗರದಲ್ಲಿ ಈ ಘಟನೆ ನಡೆದಿದೆ.. ಸಿದ್ದೇಶ್ವರ ಕೋ- ಆಪರೇಟಿವ್ ಬ್ಯಾಂಕ್ ನಲ್ಲಿ ಚೆಕ್ ಕಲೆಕ್ಟ್ ಕೆಲಸ ಮಾಡ್ತಿದ್ದ ಪ್ರಭು, ಪೊಲೀಸರಿಗೆ ಕಳ್ಳರ ಬಗ್ಗೆ ಮಾಹಿತಿ ನೀಡುತ್ತಿದ್ದರು.. ಈ ಹಿಂದೆ ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದರು. ನಿನ್ನೆ ರಾತ್ರಿ ಕೆಲಸ‌‌ ಮುಗಿಸಿ ಮನೆಗೆ ಹೋಗುವಾಗ ದುರ್ಷ್ಕಮಿಗಳ ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.. ಸ್ಥಳಕ್ಕೆ ಬಂದು ಪರಿಶೀಲನೆ‌ ನಡೆಸಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.