ಬೆಂಗಳೂರು: ಪಿಒಪಿ ಗಣೇಶಮೂರ್ತಿ ನಿಷೇಧಿಸಿ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಎಷ್ಟೇ ಕ್ರಮಕೈಗೊಂಡರೂ ಸಾವಿರಾರು ಪಿಒಪಿ ಗಣೇಶಮೂರ್ತಿಗಳನ್ನು ನಗರದಲ್ಲಿ ಬಳಕೆಯಾಗಿವೆ. ಸಂಪೂರ್ಣವಾಗಿ ಪಿಒಪಿ ನಿಷೇಧಿಸುವಲ್ಲಿ ಪಾಲಿಕೆ ವಿಫಲವಾಗಿದ್ದು, ಮೊದಲ ದಿನವೇ 2,962 ಪಿಒಪಿ ಗಣೇಶ ಮೂರ್ತಿಗಳು ನಿಮಜ್ಜನ ಮಾಡಲಾಗಿದೆ.
ಕಲ್ಯಾಣಿ, ತಾತ್ಕಾಲಿಕ ಟ್ಯಾಂಕರ್ಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದರೂ, ಸಾರ್ವಜನಿಕರ ಒತ್ತಾಯದ ಮೇರೆಗೆ ನಿಮಜ್ಜನ ಮಾಡಲಾಗಿದೆ. ಜವಾಬ್ದಾರಿಯಿಂದ ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸುವಲ್ಲಿ ನಾಗರಿಕರೂ ವಿಫಲವಾಗಿದ್ದಾರೆ.
ಒಟ್ಟು ಬೆಂಗಳೂರು ನಗರದಲ್ಲಿ ಮೊದಲ ದಿನವೇ 1,60,781 ಮಣ್ಣಿನ ಗಣೇಶ ಮೂರ್ತಿಗಳು, 2962 ಪಿಒಪಿ ಮೂರ್ತಿಗಳನ್ನೂ ನಿಮಜ್ಜನ ಮಾಡಲಾಗಿದೆ. ವಾರ್ಡ್ವಾರು ಹೇಳುವುದಾದರೆ ಮಣ್ಣಿನ ದಕ್ಷಿಣ ವಾರ್ಡ್ನಲ್ಲಿ 85,838 ಮಣ್ಣಿನ ಗಣೇಶ. 1,113 ಪಿಒಪಿ ಗಣೇಶ, ಬೆಂಗಳೂರು ಪೂರ್ವದಲ್ಲಿ 23,151 ಮಣ್ಣಿನ ಗಣೇಶ, 114 ಪಿಒಪಿ ಗಣೇಶ, ಪಶ್ಚಿಮ ಬೆಂಗಳೂರಿನಲ್ಲಿ 26,863 ಮಣ್ಣಿನ ಗಣೇಶ ಮೂರ್ತಿ, 244 ಪಿಒಪಿ ಗಣೇಶ, ಮಹದೇವಪುರ ವಾರ್ಡ್ನಲ್ಲಿ 5,311 ಮಣ್ಣಿನ ಮೂರ್ತಿ, 8 ಪಿಒಪಿ ಮೂರ್ತಿ, ಆರ್.ಆರ್.ನಗರದಲ್ಲಿ 2, 634 ಮಣ್ಣಿನ ಗಣೇಶ ಮೂರ್ತಿ, 66 ಪಿಒಪಿ ಮೂರ್ತಿ, ಯಲಹಂಕದಲ್ಲಿ 12,165 ಮಣ್ಣಿನ ಗಣೇಶ, 177 ಪಿಒಪಿ, ದಾಸರಹಳ್ಳಿ 1,034, 8 ಪಿಒಪಿ, ಬೊಮ್ಮನಹಳ್ಳಿಯಲ್ಲಿ 3,785 ಮಣ್ಣಿನ ಗನೇಶ ಮೂರ್ತಿ, 5 ಪಿಒಪಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗಿದೆ.
ಪಿಒಪಿ ಗಣೇಶ ಮೂರ್ತಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ರೂ, ಸಂಪೂರ್ಣವಾಗಿ ತಡೆಯುವಲ್ಲಿ ಪಾಲಿಕೆ ವಿಫಲವಾಗಿದೆ.