ETV Bharat / state

ಅಪಘಾತದಲ್ಲಿ ಬೈಕ್​ ಸವಾರನ ಶೇ.50ರಷ್ಟು ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಎಂಎಸಿಟಿ ಆದೇಶ ಎತ್ತಿಹಿಡಿದ ಹೈಕೋರ್ಟ್​ - MACT order

ಅಪಘಾತದಲ್ಲಿ ಬೈಕ್​ ಸವಾರನ ಶೇ.50ರಷ್ಟು ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಎಂಎಸಿಟಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದೆ.​

High Court
ಹೈಕೋರ್ಟ್
author img

By

Published : May 18, 2023, 9:35 PM IST

ಬೆಂಗಳೂರು: ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್‌ನಲ್ಲಿ ಟ್ರಿಪಲ್ ರೈಡ್ ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್‌ಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರರ ಮೇಲೆ ಶೇ.50 ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ (ಎಂಎಸಿಟಿ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ನಿರ್ಲಕ್ಷ್ಯದ ಹೊಣೆಯನ್ನು ತಮ್ಮ ಮೇಲೆ ಹೊರಿಸಿದ್ದ ಎಂಎಸಿಟಿ ಆದೇಶ ರದ್ದುಪಡಿಸಿ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿ ಮೂವರು ಬೈಕ್ ಸವಾರರು ಹಾಗೂ ಸಂಪೂರ್ಣ ನಿರ್ಲಕ್ಷ್ಯದ ಹೊಣೆಯನ್ನು ಬೈಕ್ ಸವಾರರ ಮೇಲೆಯೇ ಹೊರಿಸಬೇಕೆಂದು ಕಾರ್‌ನ ವಿಮಾ ಕಂಪನಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್‌ಗೌಡ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಬೈಕ್ ಸವಾರರು ಹಾಗೂ ಕಾರು ಚಾಲಕ ಪರಸ್ಪರ ದೂರುಗಳನ್ನು ದಾಖಲಿಸಿದ್ದು, ಕಾರು ಚಾಲಕ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೋಟಾರ್ ಸೈಕಲ್ ಸವಾರರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಿ ವರದಿ ಸಲ್ಲಿಸಲಾಗಿದೆ. ಹೀಗಿರುವಾಗ, ಬೈಕ್ ಸವಾರರ ನಿರ್ಲಕ್ಷ್ಯ ಸಾಬೀತುಪಡಿಸಬೇಕೆಂದರೆ, ಕಾರು ಚಾಲಕನನ್ನು ವಿಚಾರಣೆಗೊಳಪಡಿಸಬೇಕಾಗುತ್ತದೆ.

ಆದರೆ, ಕಾರು ಚಾಲಕ ನ್ಯಾಯಾಧೀಕರಣ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಇದರಿಂದ, ಅಪಘಾತಕ್ಕೆ ಯಾರು ಹೊಣೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಬಹುದಾದ ಉತ್ತಮ ಸಾಕ್ಷಿಯೊಂದು ನ್ಯಾಯಾಧಿಕರಣಕ್ಕೆ ಅಲಭ್ಯವಾದಂತಾಗಿದೆ. ಆದ್ದರಿಂದ, ಕಾರಿನ ಮಾಲೀಕ ಹಾಗೂ ಬೈಕ್ ಸವಾರರನ್ನು ಸಮಾನ ಹೊಣೆಗಾರರನ್ನಾಗಿಸಿರುವ ಎಂಎಸಿಟಿ ಕ್ರಮ ಸೂಕ್ತವಾಗಿದೆ. ಪರಿಹಾರದ ಮೊತ್ತದಲ್ಲಿ ಶೇ.50 ಕಡಿತಗೊಳಿಸಿ ಉಳಿದ ಮೊತ್ತವನ್ನು ಗಾಯಾಳುಗಳಿಗೆ ಪಾವತಿಸುವಂತೆ ನ್ಯಾಯಾಧಿಕರಣ ಹೊರಡಿಸಿರುವ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಎಲ್ಲ ಮೇಲ್ಮನವಿಗಳನ್ನೂ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮಂಡ್ಯ ಮೂಲದ ಬಿ.ಸಿ. ಮಹೇಂದ್ರ, ಬಿ.ಎಸ್. ಜಗದೀಶ್ ಹಾಗೂ ಬಿ.ಎಚ್. ವಿಶ್ವಾಸ್ ಬೆಂಗಳೂರಿನ ಮಹದೇವಪುರದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಶಿವಕುಮಾರ್ ರಾಘವನ್ ಎಂಬವರ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರೂ ಗಾಯಗೊಂಡಿದ್ದರು. ಗಾಯಾಳುಗಳು ಪರಿಹಾರ ಕೋರಿ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ಕಾರಿನ ಮಾಲೀಕ ಶಿವಕುಮಾರ್ ವಿಚಾರಣೆಗೆ ಗೈರಾಗಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ವಿಶ್ವಾಸ್‌ಗೆ 2,02,000 ರೂ., ಜಗದೀಶ್‌ಗೆ 1,47,000ರೂ. ಹಾಗೂ ಮಹೇಂದ್ರ ಪ್ರಸಾದ್‌ಗೆ 15 ಸಾವಿರ ರೂ. ಪರಿಹಾರ ಘೋಷಿಸಿ 2018ರ ಜ.17ರಂದು ಆದೇಶಿಸಿತ್ತು. ಆದರೆ, ಅಪಘಾತಕ್ಕೆ ಬೈಕ್ ಸವಾರರ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದ ಎಂಎಸಿಟಿ, ಬೈಕ್ ಸವಾರರು ಹಾಗೂ ಕಾರ್ ಮಾಲೀಕನ ಮೇಲೆ 50:50 ಅನುಪಾತದಲ್ಲಿ ನಿರ್ಲಕ್ಷ್ಯದ ಹೊಣೆ ಹೊರಿಸಿತ್ತಲ್ಲದೇ ಪರಿಹಾರದ ಮೊತ್ತದಲ್ಲಿ ಶೇ. 50 ಪ್ರಮಾಣವನ್ನು ಗಾಯಾಳುಗಳಿಗೆ ಪಾವತಿಸುವಂತೆ ಕಾರ್‌ಗೆ ವಿಮೆ ಪಡೆದುಕೊಂಡಿದ್ದ ಕಂಪನಿಗೆ ನಿರ್ದೇಶಿಸಿತ್ತು.

ಎಂಎಸಿಟಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಗಾಯಾಳುಗಳು, ಬೈಕ್ ಮೇಲೆ ಮೂವರು ಸವಾರಿ ಮಾಡುತ್ತಿದ್ದರು ಎಂದ ಮಾತ್ರಕ್ಕೆ ಅದನ್ನು ನಿರ್ಲಕ್ಷ್ಯವೆನ್ನಲು ಸಾಧ್ಯವಿಲ್ಲ. ಕಾರು ಚಾಲಕ ವಿಚಾರಣೆಗೊಳಪಡದ ಕಾರಣಕ್ಕೆ ಬೈಕ್ ಸವಾರರ ಮೇಲೂ ಶೇ.50 ನಿರ್ಲಕ್ಷ್ಯದ ಹೊಣೆ ನಿಗದಿಪಡಿಸಿರುವ ನ್ಯಾಯಾಧಿಕರಣದ ಕ್ರಮವೇ ಸರಿಯಲ್ಲ. ಆದ್ದರಿಂದ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿದ್ದರು.

ಮತ್ತೊಂದೆಡೆ, ವಿಮಾ ಕಂಪನಿ ಸಹ ಮೇಲ್ಮನವಿ ಸಲ್ಲಿಸಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಒಂದು ಬೈಕ್‌ನ ಮೇಲೆ ಮೂವರು ಸವಾರಿ ಮಾಡುತ್ತಿದ್ದರು. ಪ್ರಕರಣ ಸಂಬಂಧ ಕಾರು ಚಾಲಕ ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಬೈಕ್ ಸವಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಈ ಯಾವ ಅಂಶಗಳನ್ನೂ ಪರಿಗಣಿಸದೆ ನ್ಯಾಯಾಧಿಕರಣ ಬೈಕ್ ಸವಾರರ ಮೇಲೆ ಕೇವಲ ಶೇ.50 ಹೊಣೆಗಾರಿಕೆ ನಿಗದಿಪಡಿಸಿದೆ. ಆದ್ದರಿಂದ, ನಿರ್ಲಕ್ಷ್ಯದ ಹೊಣೆಯನ್ನು ಸಂಪೂರ್ಣವಾಗಿ ಬೈಕ್ ಸವಾರರ ಮೇಲೆ ಹೊರಿಸಬೇಕು ಎಂದು ಮನವಿ ಮಾಡಿತ್ತು.

ಇದನ್ನೂ ಓದಿ: ಕೇವಲ 20 ನಿಮಿಷಕ್ಕೆ ಮುಗಿದ ಸಭೆ: ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.