ETV Bharat / state

ಹೈಕೋರ್ಟ್​ಗೆ ಬಾರದ ವಕೀಲರು: ಪ್ರಕರಣಗಳನ್ನು ಮುಂದೂಡಿದ ನ್ಯಾಯಮೂರ್ತಿಗಳು - ಪ್ರಕರಣಗಳನ್ನು ಮುಂದೂಡಿದ ನ್ಯಾಯಮೂರ್ತಿಗಳು ಬೆಂಗಳೂರು

ಕೊರೊನಾ ವೈರಸ್ ತಡೆಗಟ್ಟಲು ಹೈಕೋರ್ಟ್ ಮತ್ತು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಏಪ್ರಿಲ್ 6ರವರೆಗೆ ರಜೆ ನೀಡಲಾಗಿದೆ‌.

High Court
ಹೈಕೋರ್ಟ್​
author img

By

Published : Mar 24, 2020, 6:14 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೈಕೋರ್ಟ್​ಗೆ ವಕೀಲರು ಆಗಮಿಸದೇ ಇದ್ದುದರಿಂದ ವಿಚಾರಣೆಗೆ ನಿಗದಿಪಡಿಸಿದ್ದ ಪ್ರಕರಣಗಳನ್ನು ಮುಂದೂಡಲಾಯಿತು.

ಕೊರೊನಾ ವೈರಸ್ ತಡೆಗಟ್ಟಲು ಹೈಕೋರ್ಟ್ ಮತ್ತು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಏಪ್ರಿಲ್ 6ರವರೆಗೆ ರಜೆ ನೀಡಲಾಗಿದೆ‌. ಹಾಗಿದ್ದೂ ಹೈಕೋರ್ಟ್​ನ ಮೂರು ಪೀಠಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ಹಾಜರಾಗಬೇಕಿದ್ದ ವಕೀಲರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕೋರ್ಟ್​ಗೆ ಬಂದಿರಲಿಲ್ಲ. ಹೀಗಾಗಿ ವಕೀಲರು ಹಾಜರಿರದ ಪ್ರಕರಣಗಳನ್ನು ಖುದ್ದು ನ್ಯಾಯಮೂರ್ತಿಗಳೇ ಕಾಸ್ ಲಿಸ್ಟ್ ಹಿಡಿದು ನಂಬರ್​ಗಳನ್ನು ಕೂಗಿ ವಿಚಾರಣೆ ಮುಂದೂಡಿದರು.

ಇದೇ ವೇಳೆ ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಪ್ರಕರಣದ ವಿಚಾರಣೆ ನಡೆಸಿತು. ಸ್ಕೈಪ್ ಮೂಲಕ ಪ್ರಕರಣದ ವಿಚಾರಣೆಗೆ ಹಾಜರಾದ ವಕೀಲರೊಬ್ಬರು ವಿಡಿಯೋ ಕಾನ್ಫರೆನ್ಸ್​​ನಲ್ಲೇ ತಮ್ಮ ವಾದ ಮಂಡಿಸಿದರು.

ಇನ್ನು ಹೈಕೋರ್ಟ್​ಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ವಕೀಲರು ಮತ್ತು ಕಕ್ಷೀದಾರರ ಸಂಖ್ಯೆ ಇಂದು ತುಂಬಾ ಕಡಿಮೆ ಇತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.