ETV Bharat / state

ಆಲೋಕ್ ಕುಮಾರ್​ ಅವರನ್ನು ಎಡಿಜಿಪಿ ಹುದ್ದೆಯಿಂದ ವಜಾಗೊಳಿಸಲು ಕೋರಿದ್ದ ಅರ್ಜಿ ರದ್ದು - ಎಡಿಜಿಪಿ ಅಲೋಕ್ ಕುಮಾರ್

ಆಲೋಕ್ ಕುಮಾರ್​ನ್ನು ಎಡಿಜಿಪಿ ಹುದ್ದೆಯಿಂದ ವಜಾಗೊಳಿಸಲು ಕೋರಿದ್ದ ಅರ್ಜಿ ಹೈಕೋರ್ಟ್ ರದ್ದುಪಡಿಸಿದೆ.

High Court
ಹೈಕೋರ್ಟ್
author img

By

Published : Apr 12, 2023, 11:01 PM IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ಹಿನ್ನೆಲೆಯಲ್ಲಿ ಅವರನ್ನು ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಿ.ಎಂ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ಸಚಿವ ಆನಂದ್‌ ಸಿಂಗ್ ಪುತ್ರನಿಗೆ ಟಿಕೆಟ್ ನೀಡಿದ್ದು ಬೇಸರ ತರಿಸಿದೆ: ಬಿಜೆಪಿ ನಾಯಕಿ ರಾಣಿ ಸಂಯುಕ್ತ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ, ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಇದು ಕೇವಲ ನಿಸ್ಪ್ರಯೋಜಕ ಅರ್ಜಿಯಾಗಿದ್ದು, ವಜಾಗೊಳಿಸವುದಾಗಿ ತಿಳಿಸಿತು. ಇದರಿಂದ ಅರ್ಜಿಯನ್ನು ಹಿಂಪಡೆಯಲಾಗುವುದು ಎಂದು ಮಲ್ಲಿಕಾರ್ಜುನ ಪರ ವಕೀಲರು ತಿಳಿಸಿದರು. ಅದಕ್ಕೆ ಸಮ್ಮತಿಸಿದ ನ್ಯಾಯಪೀಠ, ಅರ್ಜಿ ಹಿಂಪಡೆದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿತು.

ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಅಸಮಾಧಾನಿತರು ಯಾರೇ ಬಂದ್ರೂ ಮುಕ್ತ ಸ್ವಾಗತ: ಜನಾರ್ದನ ರೆಡ್ಡಿ

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಭಾರತೀಯ ಚುನಾವಣಾ ಆಯೋಗ 2022ರ ಡಿ.8ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಯಾವುದೇ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿಯಿದ್ದರೆ, ಅಂತಹವರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ. ಆದ್ದರಿಂದ, ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ ಅಲೋಕ್ ಕುಮಾರ್ ಅವರನ್ನು ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಸಬಾರದು. ಅವರನ್ನು ಚುನಾವಣಾ ಕಾರ್ಯಕ್ಕೂ ನಿಯೋಜಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ನೀಡುವಂತೆ ಕೋರಿ ಮಲ್ಲಿಕಾರ್ಜುನ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ರದ್ದು ಪಡಿಸಿತು.

ಇದನ್ನೂ ಓದಿ: ಕೆಪಿಎಸ್​​ಸಿ ಅಧ್ಯಕ್ಷ, ಸದಸ್ಯರ ನೇಮಕ ರದ್ದು ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಆದೇಶ ಪ್ರಕಟಿಸುವುದಕ್ಕೂ ಮುನ್ನ ನ್ಯಾಯಮೂರ್ತಿಗಳು, ರೌಡಿ ಶೀಟ್‌ನಲ್ಲಿ ''ಫೈಟರ್ ರವಿ'' ಎಂಬ ಹೆಸರು ಬಳಸದಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತಲ್ಲವೇ? ಎಂದು ಮಲ್ಲಿಕಾರ್ಜುನಯ್ಯ ಪರ ವಕೀಲರನ್ನು ಪ್ರಶ್ನಿಸಿದರು. ಅದಕ್ಕೆ ವಕೀಲರು ಹೌದೆಂದು ತಿಳಿಸಿದಾಗ, ನೀವು ಅರ್ಜಿಯನ್ನು ಬಹಳ ಜಾಣ್ಮೆಯಿಂದ ಸಿದ್ಧಪಡಿಸಿದ್ದೀರಿ. ಮತ್ತೊಂದು ಅರ್ಜಿಯಲ್ಲಿ ಫೈಟರ್ ರವಿ ಹೆಸರು ಬಳಸದಂತೆ ತಡೆ ಆದೇಶ ಪಡೆದುಕೊಂಡಿದ್ದೀರಿ. ಅದರಲ್ಲಿ ಅರ್ಜಿದಾರರು ಬಿಜೆಪಿಯ ಸಂಭವನೀಯ ಅಭ್ಯರ್ಥಿ ಎಂದು ಹೇಳಿದ್ದಿರಿ. ಇಂದು ಬಿ.ಎಂ.ಮಲ್ಲಿಕಾರ್ಜುನಯ್ಯ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಅರ್ಜಿದಾರರು ಪಕ್ಷೇತರರಾಗಿ ಸ್ಪರ್ಧಿಸಬಹುದು ಎಂದು ಹೇಳುತ್ತಿದ್ದೀರಿ. ಏನೇ ಆಗಲಿ ನಿಮ್ಮ ಅರ್ಜಿದಾರರ ಫೈಟರ್ ರವಿ ಎಂಬ ಹೆಸರು ತುಂಬ ಚನ್ನಾಗಿದೆ ಎಂದು ಮೌಖಿಕವಾಗಿ ಅಭಿಭಪ್ರಾಯ ಪಟ್ಟಿತು.

ಇದನ್ನೂ ಓದಿ: ಅಮೆರಿಕ ಸಂವಿಧಾನದಲ್ಲಿ ವಿದೇಶಿ ಪ್ರಜೆಗಳಿಗೆ ನ್ಯಾಯಾಂಗದ ಮೊರೆ ಹೋಗಲು ಅವಕಾಶವಿದೆ: ಟ್ವಿಟರ್

ಇದನ್ನೂ ಓದಿ: ಖರ್ಗೆಯವರು ಮುಖ್ಯಮಂತ್ರಿ ಆಗ್ತಾರಂದ್ರೆ ನಮ್ದು ಫುಲ್ ಸಪೋರ್ಟ್: ಶಾಮನೂರು ಶಿವಶಂಕರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.