ETV Bharat / state

ಹಿಜಾಬ್ ವಿಚಾರವಾಗಿ ಸುಪ್ರೀಂಕೋರ್ಟ್ ಮುಂದೆ ನೀಡುವ ತೀರ್ಪಿಗಾಗಿ ಸರ್ಕಾರ ಕಾಯಲಿದೆ : ನಾಗೇಶ್

ಸುಪ್ರೀಂ ಕೋರ್ಟ್​ ಹಿಜಾಬ್​ ವಿಚಾರದ ಬಗ್ಗೆ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಸರ್ಕಾರ ಹಿಜಾಬ್​ ಕುರಿತ ಮುಂದಿನ ತೀರ್ಪಿನವರೆಗೆ ಕಾಯಲಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್​ ಹೇಳಿದ್ದಾರೆ.

the-government-will-wait-for-the-next-verdict-of-s-c-on-hijab-issue
ಹಿಜಾಬ್ ವಿಚಾರವಾಗಿ ಸುಪ್ರೀಂಕೋರ್ಟ್ ಮುಂದೆ ನೀಡುವ ತೀರ್ಪಿಗಾಗಿ ಸರ್ಕಾರ ಕಾಯಲಿದೆ : ನಾಗೇಶ್
author img

By

Published : Oct 13, 2022, 5:04 PM IST

ಬೆಂಗಳೂರು : ಸುಪ್ರೀಂ ಕೋರ್ಟ್ ಹಿಜಾಬ್​ ವಿಚಾರವಾಗಿ ನೀಡಿರುವ ತೀರ್ಪು ಸ್ವಾಗತಿಸುತ್ತೇವೆ ಮತ್ತು ನ್ಯಾಯಾಲಯದ ಮುಂದಿನ ತೀರ್ಪಿಗಾಗಿ ಕಾಯುತ್ತಿರುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ತ್ರೀ ಸ್ವಾತಂತ್ರ್ಯಕ್ಕೆ ಗೌರವ ನೀಡುವ ರೀತಿ ಉತ್ತಮ ತೀರ್ಪು ಬರುತ್ತದೆ ಎನ್ನುವ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ, ಇದು ವಿಭಿನ್ನ ತೀರ್ಪು ಬಂದಿದೆ. ಮುಂದಿನ ತೀರ್ಪಿಗೆ ಸರ್ಕಾರ ಕಾಯಲಿದೆ. ಇನ್ನು ಸರ್ಕಾರದ ಶಿಕ್ಷಣ ಕಾಯ್ದೆಯ ಪ್ರಕಾರ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ಸರ್ಕಾರಿ ಮತ್ತು ಎಲ್ಲ ಶಾಲೆಗಳು ಅದೇ ಕಾಯ್ದೆಯ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.

ಹಿಜಾಬ್ ವಿಚಾರವಾಗಿ ಸುಪ್ರೀಂಕೋರ್ಟ್ ಮುಂದೆ ನೀಡುವ ತೀರ್ಪಿಗಾಗಿ ಸರ್ಕಾರ ಕಾಯಲಿದೆ : ನಾಗೇಶ್

ಸುಪ್ರೀಂ ಕೋರ್ಟ್ ನಿಂದ ಇನ್ನೊಂದು ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿನ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುತ್ತೇವೆ. ಸದ್ಯ ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಆಚರಣೆ, ಚಿಹ್ನೆಗಳ ಪ್ರದರ್ಶನ ಸಲ್ಲದು ಎಂದು ಸರ್ಕಾರದ ತೀರ್ಮಾನವನ್ನು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಹಿಜಾಬ್​ ವಿರುದ್ಧ ಹೋರಾಟ : ಜಾಗತಿಕ ಮಟ್ಟದಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್​ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಬೀದಿಗಿಳಿದು ಹೋರಾಟ ನಡೆಸುತ್ತಿರುವ ಮಹಿಳೆಯರ ವಿಚಾರ ಅರಿತಿರುವ ಸುಪ್ರೀಂಕೋರ್ಟ್​, ಕರ್ನಾಟಕ ಹೈಕೋರ್ಟ್ ನ ತೀರ್ಪು ಎತ್ತಿಹಿಡಿಯಬಹುದು ಎಂದು ನಿರೀಕ್ಷಿಸಿದ್ದೆ. ಇದು ಕೊಡಲಿಲ್ಲ ಅವರು ಮುಸ್ಲಿಂ ಬಹುಸಂಖ್ಯಾತರ ರಾಷ್ಟ್ರಗಳಲ್ಲಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ರೀತಿಯ ತೀರ್ಪು ನಿರೀಕ್ಷಿಸುವುದು ಸಹಜ.

ಹಾಗಂತ ನಾನು ಸುಪ್ರೀಂಕೋರ್ಟ್ ವಿರುದ್ಧ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಜಾಬ್ ಕುರಿತು ನಮ್ಮ ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯು ಊರ್ಜಿತದಲ್ಲಿ ಇರುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಹೈಕೋರ್ಟ್ ಆದೇಶ ರದ್ದಾಗದ ಕಾರಣ ಹಿಜಾಬ್ ಧರಿಸಲು ಅವಕಾಶವಿಲ್ಲ: ಶಾಸಕ ರಘುಪತಿ ಭಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.