ETV Bharat / state

ಟಿ.ಆರ್. ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಇಂಜಿನಿಯರ್ ಹುದ್ದೆ ವಾಪಸ್​ ಪಡೆದ ಸರ್ಕಾರ - ಮೈತ್ರಿ ಸರ್ಕಾರ ಟಿ.ಆರ್.ಸ್ವಾಮಿ ಅಮಾನತು

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಟಿ.ಆರ್. ಸ್ವಾಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರ ಇದೀಗ ತನ್ನ ನಿರ್ಧಾರವನ್ನು ವಾಪಸ್​ ಪಡೆದಿದೆ.

ಭ್ರಷ್ಟಾಚಾರ ಆರೋಪದಡಿ ವಶಪಡಿಸಿಕೊಂಡ ಹಣ ಹಾಗೂ ಟಿ.ಆರ್​.ಸ್ವಾಮಿ
author img

By

Published : Aug 25, 2019, 1:24 PM IST

ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಟಿ.ಆರ್. ಸ್ವಾಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರ ಇದೀಗ ತನ್ನ ನಿರ್ಧಾರವನ್ನು ವಾಪಸ್​ ಪಡೆದಿದೆ.

ಬಿಜೆಪಿ ಸರ್ಕಾರ ಬಂದ ಮೇಲೆ ಟಿ.ಆರ್.ಸ್ವಾಮಿಯನ್ಬು ಕೆಐಎಡಿಬಿ ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಲಾಗಿತ್ತು. ಟಿ.ಆರ್.ಸ್ವಾಮಿ ನೇಮಕ ಹಿನ್ನೆಲೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಟಿ.ಆರ್. ಸ್ವಾಮಿ ವಿರುದ್ಧ ಭ್ರಷ್ಟಚಾರದ ಆರೋಪ ಹೇಳಿ ಬಂದ ಹಿನ್ನೆಲೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣ ಇದೀಗ ರಾಜ್ಯ ಸರ್ಕಾರ ಟಿ.ಆರ್.ಸ್ವಾಮಿಯವ‌ರ ನೇಮಕವನ್ನು ಹಿಂಪಡೆದಿದೆ ಎಂದು ಹೇಳಲಾಗ್ತಿದೆ.

ಯಾರು ಟಿ.ಆರ್. ಸ್ವಾಮಿ?

ಮುಖ್ಯ ಎಂಜಿನಿಯರ್‌ ದರ್ಜೆಯ ಟಿ.ಆರ್‌. ಸ್ವಾಮಿ ಮನೆ, ಕಚೇರಿ ಮೇಲೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಎಸಿಬಿ ದಾಳಿ ಮಾಡಿತ್ತು. ಈ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿತ್ತು. ಎಸಿಬಿ ದಾಳಿ ವೇಳೆ ಬಾತ್‌ರೂಮ್‌ನ ಕಿಟಕಿಯಿಂದ ಹಣ ಎಸೆದು ಬಚಾವಾಗಲು ಯತ್ನಿಸಿದ್ದರು. ಬಳಿಕ ಸ್ವಾಮಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಮೈತ್ರಿ ಸರ್ಕಾರ ಟಿ.ಆರ್.ಸ್ವಾಮಿಯನ್ನು ಅಮಾನತು ಮಾಡಿತ್ತು. ಆದರೆ, ಈ ಅಧಿಕಾರಿಯ ಪ್ರಾಸಿಕ್ಯೂಷನ್‌ಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಬಳಿಕ ಮೈತ್ರಿ ಸರ್ಕಾರವೇ ಅಮಾನತು ತೆರವುಗೊಳಿಸಿ ಪುನಃ ಕೆಐಎಡಿಬಿಗೆ ಸ್ವಾಮಿ ಅವರನ್ನು ಕಳುಹಿಸಲಾಗಿತ್ತು. ಆದರೆ, ಯಾವುದೇ ಕಾರ್ಯಕಾರಿ ಹುದ್ದೆ ನೀಡಿರಲಿಲ್ಲ.

ಹೀಗಿದ್ದರೂ ಸಿಎಂ ಬಿಎಸ್‌ವೈ ಅವರು ಟಿ.ಆರ್‌. ಸ್ವಾಮಿ ಅವರಿಗೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಎಂಜಿನಿಯರ್‌ 1 ಮತ್ತು 2ರ ಹುದ್ದೆಯಡಿಯ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ವಿಷಯದ ಮೇಲುಸ್ತುವಾರಿ ವಹಿಸಲು ಆದೇಶಿಸುವಂತೆ ಸೂಚಿಸಿದ್ದರು. ಭ್ರಷ್ಟಾಚಾರದ ಆಪಾದನೆ ಹೊಂದಿರುವ ಅಧಿಕಾರಿಗೆ ಇಂಥ ಹೊಣೆ ನೀಡಿದ್ದು, ಸಾಕಷ್ಟು ಅನುಮಾನ ಹಾಗೂ ಟೀಕೆಗೆ ಎಡೆಮಾಡಿ ಕೊಟ್ಟಿತ್ತು.

ಈಗ ಎಚ್ಚೆತ್ತುಕೊಂಡಿರುವ ಸರ್ಕಾರ ಕೆಐಎಡಿಬಿ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿಯವರ ನೇಮಕವನ್ನು ವಾಪಸ್​ ಪಡೆದಿದೆ.

Intro:Body:KN_BNG_01_TRSWAMYKIADB_WITHDRAWN_SCRIPT_7201951

ಟಿ.ಆರ್.ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಇಂಜಿನಿಯರ್ ಹುದ್ದೆ ವಾಪಸು ಪಡೆದ ಸರ್ಕಾರ

ಬೆಂಗಳೂರು: ಭಷ್ಟಾಚಾರ ಆರೋಪ ಎದುರಿಸುತ್ತಿರುವ ಟಿ.ಆರ್.ಸ್ವಾಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಿದ್ದ ರಾಜ್ಯ ಸರ್ಕಾರ ಇದೀಗ ತನ್ನ ನಿರ್ಧಾರವನ್ನು ವಾಪಸು ಪಡೆದಿದೆ.

ಬಿಜೆಪಿ ಸರ್ಕಾರ ಬಂದ ಮೇಲೆ ಟಿ.ಆರ್.ಸ್ವಾಮಿಯನ್ಬು ಕೆಐಎಡಿಬಿ ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಲಾಗಿತ್ತು. ಟಿ.ಆರ್.ಸ್ವಾಮಿ ನೇಮಕ ಹಿನ್ನೆಲೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಟಿ.ಆರ್. ಸ್ವಾಮಿ ವಿರುದ್ಧ ಭ್ರಷ್ಟಚಾರದ ಆರೋಪ ಹೇಳಿ ಬಂದ ಹಿನ್ನೆಲೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯವಾಗಿ ತೀರ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣ ಇದೀಗ ರಾಜ್ಯ ಸರ್ಕಾರ ಟಿ.ಆರ್.ಮೂರ್ತಿಯವ‌ರ ನೇಮಕವನ್ನು ಹಿಂದಕ್ಕೆ ಪಡೆದುಕೊಂಡಿದೆ.

ಯಾರು ಈ ಟಿ.ಆರ್.ಸ್ವಾಮಿ?:

ಮುಖ್ಯ ಎಂಜಿನಿಯರ್‌ ದರ್ಜೆಯ ಟಿ.ಆರ್‌.ಸ್ವಾಮಿ ಮನೆ, ಕಚೇರಿ ಮೇಲೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಎಸಿಬಿ ದಾಳಿ ಮಾಡಿತ್ತು. ಈ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿತ್ತು. ಎಸಿಬಿ ದಾಳಿ ವೇಳೆ ಬಾತ್‌ರೂಮ್‌ನ ಕಿಟಕಿಯಿಂದ ಹಣ ಎಸೆದು ಬಚಾವಾಗಲು ಯತ್ನಿಸಿದ್ದರು. ಬಳಿಕ ಸ್ವಾಮಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

ಮೈತ್ರಿ ಸರ್ಕಾರ ಟಿ.ಆರ್.ಸ್ವಾಮಿಯನ್ನು ಅಮಾನತು ಮಾಡಿತ್ತು. ಆದರೆ, ಈ ಅಧಿಕಾರಿಯ ಪ್ರಾಸಿಕ್ಯೂಷನ್‌ಗೆ ಸರಕಾರ ಅನುಮತಿ ನೀಡಿರಲಿಲ್ಲ. ಬಳಿಕ ಮೈತ್ರಿ ಸರ್ಕಾರವೇ ಅಮಾನತು ತೆರವುಗೊಳಿಸಿ ಪುನಃ ಕೆಐಎಡಿಬಿಗೆ ಸ್ವಾಮಿ ಅವರನ್ನು ಕಳುಹಿಸಲಾಗಿತ್ತು. ಆದರೆ, ಯಾವುದೇ ಕಾರ್ಯಕಾರಿ ಹುದ್ದೆ ನೀಡಿರಲಿಲ್ಲ.

ಹೀಗಿದ್ದರೂ ಸಿಎಂ ಬಿಎಸ್‌ವೈ ಅವರು ಟಿ.ಆರ್‌.ಸ್ವಾಮಿ ಅವರಿಗೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಎಂಜಿನಿಯರ್‌ 1 ಮತ್ತು 2ರ ಹುದ್ದೆಯಡಿಯ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ವಿಷಯದ ಮೇಲುಸ್ತುವಾರಿ ವಹಿಸಲು ಆದೇಶಿಸುವಂತೆ ಸೂಚಿಸಿದ್ದರು. ಭ್ರಷ್ಟಾಚಾರದ ಆಪಾದನೆ ಹೊಂದಿರುವ ಅಧಿಕಾರಿಗೆ ಇಂಥ ಹೊಣೆ ನೀಡಿದ್ದು, ಸಾಕಷ್ಟು ಅನುಮಾನಕ್ಕೆ ಹಾಗೂ ಟೀಕೆಗೆ ಎಡೆಮಾಡಿ ಕೊಟ್ಟಿತ್ತು.

ಈಗ ಎಚ್ಚೆತ್ತ ಸರ್ಕಾರ ಕೆಐಎಡಿಬಿ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿಯವರ ನೇಮಕವನ್ನು ಹಿಂದಕ್ಕೆ ವಾಪಸು ಪಡೆಯಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.