ETV Bharat / state

ಉದ್ಯೋಗ ಯೋಜನೆ ಮೂಲಕ ಲಕ್ಷ ಕೌಶಲಯುತ ಕಾರ್ಮಿಕರ ಸೃಷ್ಟಿಸುವ ಗುರಿ: ಸಿಎಂ ಘೋಷಣೆ - ಸಿಎಂ ಬಿ.ಎಸ್.ಯಡಿಯೂರಪ್ಪ

ಕೋವಿಡ್​ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡಿರುವವರಿಗೆ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ಯತ್ನಿಸುತ್ತಿದೆ. ಈ ಮೂಲಕ ಉದ್ಯೋಗ ಯೋಜನೆಯಡಿ ಒಂದು ಲಕ್ಷ ಯೋಜನೆ ಸೃಷ್ಟಿಸಲು ಸರ್ಕಾರ ಮುಂದಾಗಿದೆ.

CMSKILLDEVELOPMEN
CMSKILLDEVELOPMEN
author img

By

Published : Jul 15, 2021, 2:24 PM IST

ಬೆಂಗಳೂರು: ಯುವಜನತೆಗೆ ಉದ್ಯೋಗವಕಾಶಗಳಿಗಾಗಿ ‘ಉದ್ಯೋಗ ಯೋಜನೆ’ ಆರಂಭಿಸಲಾಗಿದ್ದು, ವಾರ್ಷಿಕ 1 ಲಕ್ಷ ಕೌಶಲ್ಯ ಪೂರ್ಣ ಕಾರ್ಮಿಕರನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಸಿಎಂ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಟಾಟಾ ಟೆಕ್ನಾಲಜೀಸ್ ಹಾಗೂ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ 150 ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. 4,636 ಕೋಟಿ ರೂ. ಯೋಜನೆ ಇದಾಗಿದ್ದು, ಈ ಮೂಲಕ ವಾರ್ಷಿಕ 1 ಲಕ್ಷ ಕೌಶಲ್ಯಯುತ ಕಾರ್ಮಿಕರನ್ನು ಸೃಷ್ಟಿಸಲಾಗುತ್ತದೆ. ದೇಶದ ಹಾಗೂ ರಾಜ್ಯದ ಏಳಿಗೆಗೆ ಯುವಕರ ಕೊಡುಗೆ ಮಹತ್ವದ್ದಾಗಿದೆ. ಇದಕ್ಕಾಗಿ ರಾಜ್ಯದ 155 ಸರ್ಕಾರಿ‌ ಐಟಿಐಗಳನ್ನು ಉನ್ನತೀಕರಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಅಶ್ವತ್ಥ ನಾರಾಯಣ್, ಇಂದು ಎಲ್ಲರೂ ವೈಟ್ ಕಾಲರ್ ಕೆಲಸ‌ ಬಯಸುತ್ತಿದ್ದಾರೆ. ಬ್ಲೂ ಕಾಲರ್ ಕೆಲಸದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ. ಶ್ರಮವಿಲ್ಲದ ಕೆಲಸ‌ ಮಾಡುವ ಕಲ್ಪನೆ ಈಗಿನ ಜನರಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಶ್ರಮಿಕ ವರ್ಗದವರಿಗೆ ಕೌಶಲ್ಯ ವೃದ್ಧಿ ಮಾಡಲು ಯೋಜಿಸಲಾಗಿದೆ ಎಂದರು.

ನನೆಗುದಿಗೆ ಬಿದ್ದಿದ್ದ ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಪುನರುಜ್ಜೀವನ‌ ನೀಡಲಾಗಿದೆ. 155 ಐಟಿಐ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ಕೋಟಿ ಆರ್ಥಿಕ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಈ ಸಂಬಂಧ ಎಲ್ಲ ಇಲಾಖೆ ಜೊತೆ ಸಮನ್ವಯತೆ ಸಾಧಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಬೆರಳ ತುದಿಯಲ್ಲಿ ಸಿಗುವ ನಿಟ್ಟಿನಲ್ಲಿ ಆನ್​​ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಯುವಕರಿಗೆ ಅಲ್ಪಾವಧಿ ತರಬೇತಿ ನೀಡುವ ಸಲುವಾಗಿ ಟೊಯೊಟಾ, ವಿಪ್ರೊ, ನಾರಾಯಣ ಹೃದಯಾಲಯ, ಆದಿತ್ಯ ಬಿರ್ಲಾ, ಹೋಮ್ ಲೋನ್ ಇತ್ಯಾದಿ ಸಂಸ್ಥೆಗಳ ಜತೆ ಅಧಿಕಾರಿಗಳು ಒಪ್ಪಂದಗಳಿಗೆ ಸಹಿ ಹಾಕಿದರು. ಒಟ್ಟು ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಕ್ರಮಗಳೇನು!
ರಾಜ್ಯದ ಯುವ ಜನತೆಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯಡಿ ವಿವಿಧ ಜಾಬ್ ರೋಲ್ ಗಳಲ್ಲಿ Future Skills ತರಬೇತಿ ಒಳಗೊಂಡಂತೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯ ನಿರ್ವಹಿಸುತ್ತಿದೆ.

ಈ ಎರಡು ಯೋಜನೆಗಳಡಿ ಕಳೆದ ಸಾಲಿನಲ್ಲಿ ಕೋವಿಡ್​​ ನಂತರದ ಅವಧಿಯಲ್ಲಿ 40,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಿ ಸುಮಾರು 7,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗಿದೆ.

Skill Connect Portal ಮುಖಾಂತರ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ಸೂರಿನಡಿ ತಂದು, 50ಕ್ಕೂ ಹೆಚ್ಚಿನ ಕಂಪನಿಗಳಿಂದ Virtual ಉದ್ಯೋಗ ಮೇಳಗಳನ್ನ ನಡೆಸಿ, 4,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗಿದೆ.

ಇದನ್ನೂ ಓದಿ:ನನಗೆ ಅಧಿಕಾರದ ಆಸೆ ಇಲ್ಲ, ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ: HDK ಘೋಷಣೆ

ಕೋವಿಡ್‌ನ ಪರಿಣಾಮದಿಂದಾಗಿ ಶಿಕ್ಷಕರು ಪ್ರವಾಸಿ ಮಾರ್ಗದರ್ಶಿಗಳು ಸೇರಿದಂತೆ, ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡವರಿಗಾಗಿ ಉದ್ಯೋಗಕ್ಕಾಗಿ ಕೌಶಲ್ಯ ಕಾರ್ಯಕ್ರಮದ ಮೂಲಕ 'ಹೊಸ ಕೌಶಲ್ಯ ಕಲಿಕೆ' ಹಾಗೂ ಉಚಿತ ತರಬೇತಿಯನ್ನು ನಿಗಮವು ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.