ಬೆಂಗಳೂರು: ಕಲಬುರಗಿ ಜನರ ಬಹು ದಿನಗಳ ಕನಸಾದ ವಿಮಾನ ಹಾರಾಟ ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಕಲಬುರಗಿ ದೃಷ್ಟಿಯಿಂದ ಹೇಳುವುದಾದರೆ ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿಂದು ವಿಮಾನಯಾನ ಚಾಲನೆಯ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನ, ಕಲಬುರಗಿ ವಿಮಾನ ಹಾರಾಟದ ಕನಸು ಇಂದು ಕೈಗೂಡುತ್ತಿದೆ ಎಂದರು.
ಮೊದಲನೆಯ ವಿಮಾನಯಾನ ಇಂದು ಬೆಂಗಳೂರಿನಿಂದ ಮ. 12:30ಕ್ಕೆ ಹಾರಾಟ ನಡೆಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಮುಖಂಡು ಕಲಬುರಗಿಗೆ ಇದೇ ವಿಮಾನದಲ್ಲಿ ತೆರಳುತ್ತೇವೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದರು.