ETV Bharat / state

ಫ್ಲ್ಯಾಟ್ ಖರೀದಿಗೆ ಬಂದು ಮಹಡಿಯಿಂದ ಜಿಗಿದು ವೈದ್ಯ ಆತ್ಮಹತ್ಯೆ - committed suicide in bangalore

ಪರಿಶೀಲನೆ ನಡೆಸಿದ ಬಳಿಕ‌ 15ನೇ ಮಹಡಿ ಬಳಿ ಹೋಗಿ ಏಕಾಏಕಿ ಕೆಳ ಬಿದ್ದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

ವೈದ್ಯ ಆತ್ಮಹತ್ಯೆ
ವೈದ್ಯ ಆತ್ಮಹತ್ಯೆ
author img

By

Published : Jun 1, 2021, 5:02 PM IST

ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧ ವೈದ್ಯನೋರ್ವ ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ವಿವೇಕ್ ಮಧುಸೂಧನ್‌ (60) ಮೃತ ವೈದ್ಯ. ವಿವೇಕನಗರದ ನಿರ್ಮಾಣ ಹಂತದ ಜಿ ಕಾರ್ಪೊರೇಷನ್ ರೆಸಿಡೆನ್ಸ್ ಹೆಸರಿನ‌ ಅಪಾರ್ಟ್​ಮೆಂಟ್​ನ 15ನೇ‌ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ‌.

ಕೋರಮಂಗಲ ನಿವಾಸಿಯಾಗಿರುವ ವಿವೇಕ್, ಕೌಟುಂಬಿಕ ಕಲಹದಿಂದ ಪತ್ನಿಗೆ ವಿಚ್ಛೇದನ ನೀಡಿದ್ದರು. ಲಾಕ್​ಡೌನ್​ನಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಅಪಾರ್ಟ್​ಮೆಂಟ್​ನ ಫ್ಲ್ಯಾಟ್ ಖರೀದಿ ಸೋಗಿನಲ್ಲಿ ಸ್ಥಳಕ್ಕೆ ಬಂದಿದ್ದಾರೆ‌.

ಪರಿಶೀಲನೆ ನಡೆಸಿದ ಬಳಿಕ‌ 15ನೇ ಮಹಡಿ ಬಳಿ ಹೋಗಿ ಏಕಾಏಕಿ ಕೆಳ ಬಿದ್ದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.