ಬೆಂಗಳೂರು: ಲಾಕೌಡೌನ್ ಹಿನ್ನೆಲೆ ಅಗತ್ಯ ಸೇವೆ ಹೆಸರಲ್ಲಿ ಓಡಾಡುವವರಿಗೆ ಪೊಲೀಸ್ ಇಲಾಖೆಯಿಂದ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇನ್ಮುಂದೆ ಬೇಕಾಬಿಟ್ಟಿ ಸುತ್ತಿದರೆ ದಂಡ ಕಟ್ಟೋಕೆ ರೆಡಿಯಾಗಿರಿ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.
![swdd](https://etvbharatimages.akamaized.net/etvbharat/prod-images/6853671_vish.jpg)
ಈ ಬಗ್ಗೆ ಟ್ವೀಟ್ ಮಾಡಿರುವ ಸೂದ್, ಇನ್ನು ಮುಂದೆ ಯಾವುದಕ್ಕೂ ಪಾಸ್ ಕೊಡುವುದಿಲ್ಲ. ಈಗಾಗಲೇ ನೀಡಿರುವ ಪಾಸ್ ಮೇ 3 ವರೆಗೆ ಚಾಲ್ತಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ಓಡಾಟ ಮಾಡುವವರೆಗೆ ಪೊಲೀಸ್ ಇಲಾಖೆಯ ಡಿಸಿಪಿ ಅಥವಾ ಇನ್ಸ್ಪೆಕ್ಟರ್ ಮಟ್ಟದಲ್ಲಿ ಪಾಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಸಧ್ಯ ಸಿಲಿಕಾನ್ ಸಿಟಿಯಲ್ಲಿ ಒಂದುವರೆ ಲಕ್ಷ ಮಂದಿ ಪಾಸ್ ಪಡೆದು ಬೇಕಾಬಿಟ್ಟಿ ಓಡಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇದಕ್ಕೆಲ್ಲ ಕಡಿವಾಣ ಹಾಕಲು ಡಿ.ಜಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.