ETV Bharat / state

ಕಬ್ಬಿಣದ ಅದಿರು ರಫ್ತು ರದ್ದು ನೀತಿ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ

ಕಬ್ಬಿಣದ ಅದಿರು ರಫ್ತು ರದ್ದು ನೀತಿಯನ್ನು ಮುಂದುವರಿಸಲು, ಠೇವಣಿದಾರರ ಮೇಲಿನ ಪ್ರಕರಣಗಳ ಕಾಯ್ದೆ ತಿದ್ದುಪಡಿಗೆ ಅನುಮೋದನೆ ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ.

ಮಾಧುಸ್ವಾಮಿ
ಮಾಧುಸ್ವಾಮಿ
author img

By

Published : Apr 18, 2022, 10:51 PM IST

ಬೆಂಗಳೂರು: ಕಬ್ಬಿಣದ ಅದಿರು ರಫ್ತು ರದ್ದು ನೀತಿಯನ್ನು ಮುಂದುವರಿಸಲು ನಿರ್ಧಾರ, ಠೇವಣಿದಾರರ ಮೇಲಿನ ಪ್ರಕರಣಗಳ ಕಾಯ್ದೆ ತಿದ್ದುಪಡಿಗೆ ಅನುಮೋದನೆ ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ರಾಜ್ಯದಿಂದ ಕಬ್ಬಿಣದ ಅದಿರು ರಫ್ತು ನಿರ್ಬಂಧ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು, ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಪ್ರಸ್ತಾಪಿಸಿದ ಅಂಶಗಳು ಅಬಾಧಿತವೆಂದು ಸುಪ್ರೀಂಕೋರ್ಟ್‌ಗೆ ತಿಳಿಸಲಿದೆ. ರಾಜ್ಯದ ಗಣಿಗಾರಿಕೆ ಕರಾಳ ಇತಿಹಾಸ ಹೊಂದಿರುವ ಹಿನ್ನೆಲೆ ಇಲ್ಲದ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡವೆಂಬ ನಿಲುವಿಗೆ ಸರ್ಕಾರ ಬಂದಿದೆ.

ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ನಂತರ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ರಫ್ತು ನಿಷೇಧ ಪುನರ್ ಪರಿಶೀಲನೆ ಬಗ್ಗೆ ಅಫಿಡವಿಟ್ ಮೂಲಕ ನಿಲುವು ಸ್ಪಷ್ಟಪಡಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿ ನಾಳೆ ಈ ಪ್ರಕರಣ ವಿಚಾರಣೆಗೆ ಬರಲಿದ್ದು, ರಫ್ತಿಗೆ ನಿರ್ಬಂಧ ವಿಧಿಸಿ 2013ರಲ್ಲಿ ಸಲ್ಲಿಸಿದ್ದ ಅಫಿಡವಿಟ್‌ಗೆ ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಮತ್ತೊಂದು ಅಫಿಡವಿಟ್ ಮೂಲಕ ಸ್ಪಷ್ಟಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಆಡಳಿತಕ್ಕೆ ಮೇಜರ್ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ

ರಫ್ತು ನಿಷೇಧ ಪುನರ್ ಪರಿಶೀಲಿಸಲು ಕೇಂದ್ರ ಸರ್ಕಾರ ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ನಿಲುವು ತಿಳಿಯಬಯಸಿತ್ತು. ರಫ್ತು ನಿಷೇಧಿಸಲು ಸೂಚಿಸಿದ್ದ ಕೇಂದ್ರ ಸರ್ಕಾರವೇ ಅನುಮತಿ ಕೋರಿಕೆ ಪರಿಗಣಿಸಬೇಕೆಂದು ನೀಡಿದ್ದ ಸಲಹೆ ಬಗ್ಗೆ 2021ರಲ್ಲೂ ಚರ್ಚೆಯಾಗಿತ್ತು. ಆದರೆ ಇಲ್ಲದ ಉಸಾಬರಿಗೆ ಹೋಗುವುದು ಬೇಡ. ರಫ್ತು ನಿಷೇಧ ನಿರ್ಧಾರ ಮುಂದುವರಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಿರು ಉತ್ಪಾದಿಸುವ ಕಂಪನಿಗಳು ಮತ್ತು ಸ್ಟೀಲ್ ಉದ್ಯಮಕ್ಕೂ ನೆರವಾಗಲಿದೆ ಎಂಬ ವಾದವಿದ್ದರೂ ಅಕ್ರಮದ ದುಃಸ್ವಪ್ಪಕ್ಕೆ ರಾಜ್ಯ ಸರ್ಕಾರ ಬೆಚ್ಚಿ ಬಿದ್ದಿದ್ದು, ಕೇಂದ್ರ ಸರ್ಕಾರದ ಪುನರ್ ಪರಿಶೀಲನೆ ಸಲಹೆಯನ್ನು ಪರಿಗಣಿಸಲು ಹಿಂದೇಟು ಹಾಕುತ್ತಿದೆ.

ಗಣಿಗಾರಿಕೆ ಬಾಧಿತ ಪ್ರದೇಶದ ಪುನರ್ವಸತಿ ಹಾಗೂ ಪುನರುಜ್ಜೀವನ ಉದ್ದೇಶಕ್ಕಾಗಿ ದಂಡದ ಮೂಲಕ ಸಂಗ್ರಹಿಸಿದ್ದ ,18,000 ಕೋಟಿ ರೂ. ಇದೂವರೆಗೆ ಬಳಕೆ ಸಾಧ್ಯವಾಗಿಲ್ಲ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಆರ್‌ಸಿಎಲ್)ದಲ್ಲಿ ಈ ಮೊತ್ತ ಉಳಿದಿದ್ದು, ಪ್ರಸ್ತಾವಿತ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ಬೇಕಾಗಿದೆ. ಕಳೆದ ತಿಂಗಳು ಪ್ರಕರಣ ವಿಚಾರಣೆಗೆ ಬಂದಿತ್ತಾದರೂ ಮತ್ತೆ ಮುಂದೆ ಹೋಗಿದ್ದು, ಮತ್ತೊಮ್ಮೆ ವಿಚಾರಣೆಗೆ ಬರುವಷ್ಟರಲ್ಲಿ ಅನುಮತಿ ಪಡೆಯುವುದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಉಳಿದಂತೆ ಈ ಕೆಳಕಂಡ ವಿಷಯಗಳಿಗೆ ಸಂಪುಟ ಅನುಮೋದನೆ ನೀಡಿದೆ:

  • ಠೇವಣಿದಾರರ ಮೇಲಿನ ಪ್ರಕರಣಗಳ ಕಾಯ್ದೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ.
  • 136 ಕೋಟಿ ರೂ. ಅನುದಾನ ಅಡಿ ಪುತ್ತೂರಿನಲ್ಲಿ ವೆಟರ್ನರಿ ಕಾಲೇಜ್ ಸ್ಥಾಪನೆ.
  • 2 ಲಕ್ಷ ಮನೆಗಳ ನಿರ್ಮಾಣಕ್ಕೆ ಇದ್ದ ಅಡೆತಡೆ ತೆರವು, ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
  • ದಾವಣಗೆರೆ, ಹರಿಹರ ರೈಲ್ವೇ ಮೇಲ್ಸೆತುವೆಗೆ 36.30 ಕೋಟಿ ರೂ. ಅನುಮೋದನೆ.
  • ದತ್ತಾಂಶ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ.‌
  • ಹಾವೇರಿ ಜಿಲ್ಲೆ ಕೆರೆ ತುಂಬಲು 105 ಕೋಟಿ ರೂ. ಮಂಜೂರಾತಿಗೆ ಸಂಪುಟ ಒಪ್ಪಿಗೆ ನೀಡಿದೆ.
  • ಸೋನಿ ವರ್ಲ್ಡ್ ಬಳಿ ಎಲಿವೇಟೆಡ್ ಕಾರಿಡಾರ್ ಮರು ಟೆಂಡರ್​ಗೆ ಒಪ್ಪಿಗೆ.
  • ಇಂದಿರಾ ಕ್ಯಾಂಟಿನ್​ಗಳ ಸ್ಥಳಾಂತರಕ್ಕೆ ಸರ್ವೆ ವರದಿ ಕೇಳಲಾಗಿದೆ. ಸಾರ್ವಜನಿಕ ಸ್ಥಳ ಹಾಗೂ ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್ ಮಾಡುವುದರಿಂದ ಹೆಚ್ಚು ಅನುಕೂಲವಾಗಬಹುದು ಎಂದು ಹೇಳಿದರು.
  • ಲೋಕಾಯುಕ್ತದಲ್ಲಿದ್ದ ಇಬ್ಬರು ಇಂಜಿನಿಯರ್​ಗಳ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

ಸಂಪುಟ ಸಭೆಗೆ ಹಲವು ಸಚಿವರು ಗೈರು: ಇಂದು ನಡೆದ ಸಚಿವ ಸಂಪುಟದ ಸಭೆಗೆ ಹಲವು ಸಚಿವರು ಗೈರಾಗಿದ್ದರು. ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ಇಂದು ಸಂಪುಟ ಸಭೆಗೆ ಹಾಜರಾಗಿರಲ್ಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.