ಬೆಂಗಳೂರು : ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಡಬೇಕು ಎಂದು ನಮ್ಮ ತಂದೆ ನಮಗೆ ಹೇಳುತ್ತಿದ್ದರು ಎಂದು ಸಾಹಿತಿ ಚಿದಾನಂದ ಮೂರ್ತಿಯವರ ಪುತ್ರ ವಿನಯ್ ಕುಮಾರ್ ತಂದೆಯನ್ನು ನೆನಪಿಸಿಕೊಂಡರು.
ಅವರ ಅಗಲಿಕೆ ನಮ್ಮ ಸಂಸಾರಕ್ಕೆ ಮಾತ್ರ ನಷ್ಟವಲ್ಲ, ಇಡೀ ರಾಷ್ಟ್ರಕ್ಕೆ ನಷ್ಟವಾಗಿದೆ, ಅವರ ಅಗಲಿಕೆಯಿಂದ ನೋವು ತಂದಿದೆ ಎಂದು ತಿಳಿಸಿದರು. ಅವರು ಹೇಗೆ ಇದ್ದರೋ ಹಾಗೇ ಅವರನ್ನು ಕಳುಹಿಸಿಕೊಡಲಿದ್ದೇವೆ. ಈಗಲೂ ನಾವು ಹಣೆಯಲ್ಲಿ ಇಲ್ಲ ವಿಭೂತಿ ಇಟ್ಟಿಲ್ಲ. ಅವರಿಗೆ ಜಾತಿ ಧರ್ಮದ ಬೇದಭಾವ ಇರಲಿಲ್ಲ. ದೇವರ ಬಗ್ಗೆ ನಂಬಿಕೆಯಿಲ್ಲದೇ ಇದ್ದರೂ, ಅದನ್ನು ಮೀರಿದ ಶಕ್ತಿ ಇದೆ ಎಂದು ನಂಬಿದರು.
ಅವರ ಬಯಕೆಯಂತೆ ನಮ್ಮ ಕುಟುಂಬದಿಂದ ಯಾವುದೇ ಪೂಜೆ ಮಾಡುವುದಿಲ್ಲ. ಆದರೆ ಸರ್ಕಾರದ ಕಡೆಯಿಂದ ಏನು ಮಾಡುತ್ತಾರೆಯೋ ಗೊತ್ತಿಲ್ಲ. ಸುಮನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಹುಟ್ಟೂರಲ್ಲಿ ಅಂತ್ಯಸಂಸ್ಕಾರ ಮಾಡ್ಬೇಕು ಎಂಬು ಯೋಚನೆ ನಮಗೂ ಇತ್ತು. ಆದರೆ ತಂದೆ ಈ ಬಗ್ಗೆ ಏನೂ ಹೇಳಿರಲಿಲ್ಲ ಎಂದು ಹೇಳಿದರು.