ETV Bharat / state

ಈ ವರ್ಷ ಮನೆಗಳ್ಳತನ, ದರೋಡೆ, ಅತ್ಯಾಚಾರ‌‌‌ ಪ್ರಕರಣಗಳು ಏರಿಕೆ: ಸರಗಳ್ಳತನ, ಡಕಾಯಿತಿ ಕೇಸ್​ಗಳ ಸಂಖ್ಯೆ ಇಳಿಮುಖ

ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ನಡೆದ ಅಪರಾಧ ಪ್ರಕರಣಗಳು - 2022 ಅಂತ್ಯಗೊಳ್ಳುತ್ತಿರುವ ಹಿನ್ನೆಲೆ ಈ ವರ್ಷದ ಪ್ರಕರಣಗಳ ಮೇಲೊಂದು ಹಿನ್ನೋಟ - ಸಂಖ್ಯೆಗಳ ಸಮೇತ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ

author img

By

Published : Dec 27, 2022, 12:31 PM IST

The crime Cases data of the 2022 in Bangalore
ಬೆಂಗಳೂರಿನಲ್ಲಿ 2022ರಲ್ಲಿ ದಾಖಲಾದ ಕ್ರೈಂ ಕೇಸ್​ಗಳು

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾತ್ರಿ ವೇಳೆ ಮನೆಗಳ್ಳತನ, ದರೋಡೆ, ಆತ್ಯಾಚಾರ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸರಗಳ್ಳತನ, ಡಕಾಯಿತಿಗೆ ಸಂಚು ಪ್ರಕರಣಗಳು ಕಡಿಮೆಯಾಗಿವೆ. ಕಳೆದ 11 ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 145 ಆತ್ಯಾಚಾರ ಪ್ರಕರಣ ದಾಖಲಾಗಿವೆ. 2021ರಲ್ಲಿ 116 ಪ್ರಕರಣಗಳು ದಾಖಲಾಗಿತ್ತು.‌ ಪರಿಚಯಸ್ಥರಿಂದಲೇ ಆತ್ಯಾಚಾರ‌ ನಡೆದಿವೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಅಕ್ರಮ ಸಂಬಂಧ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬಲತ್ಕಾರ ಮಾಡಿರುವ ಪ್ರಮಾಣವೇ ಅಧಿಕವಾಗಿದೆ.

ಮಹಿಳೆಯರ ಮೇಲಿನ ಕ್ರೌರ್ಯ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಈ ವರ್ಷ 539 ಕೇಸ್ ದಾಖಲಾದರೆ ಕಳೆದ ವರ್ಷ 422 ಕೇಸ್ ದಾಖಲಾಗಿತ್ತು. ಇನ್ನೂ ಮಕ್ಕಳ‌ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಈ ವರ್ಷ ಏರಿವೆ. ಈ ವರ್ಷ 408 ಪ್ರಕರಣ ದಾಖಲಾದರೆ ಈ ಪೈಕಿ 395 ಕೇಸ್​ಗಳನ್ನು ಭೇದಿಸಲಾಗಿದೆ. 2021 ರಲ್ಲಿ 399 ಪೋಕ್ಸೋ ಕೇಸ್ ದಾಖಲಾಗಿತ್ತು.

ರಾತ್ರಿ ವೇಳೆ ಮನೆಗಳ್ಳತನ ಹೆಚ್ಚು: ನಗರದಲ್ಲಿ ಈ ವರ್ಷ ರಾತ್ರಿ ವೇಳೆ ಕನ್ನ ಕಳವು ಪ್ರಕರಣಗಳ‌ ಸಂಖ್ಯೆ ಹೆಚ್ಚಳವಾಗಿದೆ. ಒಂಟಿ ಮನೆ ಅಥವಾ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಖದೀಮರು ತಮ್ಮ ಕೈ ಚಳಕ ತೋರಿದ್ದಾರೆ. ಪೊಲೀಸ್ ಗಸ್ತು ಹೆಚ್ಚಿಸಿದರೂ ಚೋರರು ಮಾತ್ರ ತಾವು ಅಂದುಕೊಂಡ ಕೆಲಸವನ್ನು ಸಲೀಸಾಗಿ ಎಸಗಿ ಪಾರಮ್ಯ ಮೆರೆದಿದ್ದಾರೆ.

ನವೆಂಬರ್ 31ಕ್ಕೆ ಕೊನೆಗೊಂಡಂತೆ ನಗರದಲ್ಲಿ 635 ರಾತ್ರಿ ಕನ್ನ ಕಳವು ಪ್ರಕರಣ ದಾಖಲಾದರೆ, ಈ‌ ಪೈಕಿ 213 ಕೇಸ್​ಗಳಲ್ಲಿ ಮಾತ್ರ ಚೋರರನ್ನು ಪೊಲೀಸರು ಸದೆಬಡಿದಿದ್ದಾರೆ. 2021ರಲ್ಲಿ ದಾಖಲಾಗಿದ್ದ 654 ಕೇಸ್​ಗಳ‌ಲ್ಲಿ 354 ಕೇಸ್​ಗಳಿಗೆ ಮಾತ್ರ ಪೊಲೀಸರು ಮುಕ್ತಿ ಹಾಡಿದ್ದಾರೆ. ಇನ್ನೂ ಕೊರೊನಾ‌ ಕಾಣಿಸಿಕೊಂಡ ವರ್ಷವಾದ 2020ನೇ ಸಾಲಿನಲ್ಲಿ ಖದೀಮರು 780 ಕೇಸ್​ಗಳಲ್ಲಿ ತಮ್ಮ ಕೈ ಚಳಕ ತೋರಿದ್ದರು. ವ್ಯವಸ್ಥಿತ ಸಂಚು ರೂಪಿಸಿ ಎಸಗುವ ದರೋಡೆ‌‌ ಪ್ರಕರಣಗಳು‌ ಈ ವರ್ಷ ಕೊಂಚ ಅಧಿಕವಾಗಿದೆ. ಈ‌ ವರ್ಷ 415 ಕೇಸ್‌ ದಾಖಲಾದರೆ 2021 ರಲ್ಲಿ 364 ಪ್ರಕರಣ ವರದಿಯಾಗಿತ್ತು.

ಸರಗಳ್ಳತನ, ಡಕಾಯಿತಿ ಕೇಸ್​ಗಳು ಕಡಿಮೆ: ವಾಕಿಂಗ್ ಹೋಗುವ ವೃದ್ಧೆಯರು ಹಾಗೂ ಗೃಹಿಣಿಯರನ್ನು ಟಾರ್ಗೆಟ್ ಮಾಡಿ ದ್ವಿಚಕ್ರ ವಾಹನದಲ್ಲಿ ಸರಗಳ್ಳತನ ಎಸಗುವ ಅಪರಾಧಗಳಿಗೆ ಪೊಲೀಸರು ತಕ್ಕಮಟ್ಟಿಗೆ ಬ್ರೇಕ್ ಹಾಕಿದ್ದಾರೆ. ನಿರಂತರ ಜಾಗೃತಿ, ಕೈಗೊಂಡ ಮುಂಜಾಗ್ರತ ಕ್ರಮಗಳ ಮೂಲಕ ಪೊಲೀಸರು ಸರಗಳ್ಳತನ ಹೆಚ್ಚಾಗದಂತೆ ತಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 143 ಸರಗಳ್ಳತನ ಕೇಸ್ ದಾಖಲಾದರೆ ಕಳೆದ‌ ವರ್ಷ 166 ಕೇಸ್​ಗಳು ದಾಖಲಾಗಿತ್ತು‌‌. ಕಳೆದ ವರ್ಷ 22 ಡಕಾಯಿತಿ ಪ್ರಕರಣ ದಾಖಲಾದರೆ ಈ ವರ್ಷ 22 ಕೇಸ್​ಗಳು ವರದಿಯಾಗಿವೆ. ಅದೇ ರೀತಿ‌ ಹಗಲಿನಲ್ಲಿ‌ ನಡೆಯುವ ಮನೆಗಳ್ಳತನ ಪ್ರಕರಣ‌ಗಳು ಕಳೆದ ವರ್ಷಕ್ಕೆ ಹೋಲಿಸಿದರೆ‌ ಈ ವರ್ಷ ಕೊಂಚ ಇಳಿಕೆಯಾಗಿವೆ. 2022ರಲ್ಲಿ 170 ಹಾಗೂ 2021ರಲ್ಲಿ 294 ಕೇಸ್​ಗಳು ದಾಖಲಾಗಿತ್ತು.

67 ಕೋಟಿ ಮೌಲ್ಯದ ಮಾಲು ರಿಕವರಿ: ವಿವಿಧ ಮಾದರಿಯ ಕಳ್ಳತನ, ದರೋಡೆ, ಡಕಾಯಿತಿ, ಕೊಲೆ ವಂಚನೆ ಸೇರಿದಂತೆ ಎಲ್ಲ ರೀತಿಯ ಅಪರಾಧ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಗ-ನಾಣ್ಯವನ್ನು ದೋಚಿರುವ ಆರೋಪಿಗಳನ್ನು ಸದೆಬಡಿಯಲಾಗಿದೆ‌‌.‌ ಕಳ್ಳತನವಾದ ಮಾಲುಗಳನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವಲ್ಲಿ ಖಾಕಿ ಪಡೆ ವಿಫಲವಾಗಿದೆ. 2022ರಲ್ಲಿ ಆರೋಪಿಗಳ ಪಾಲಾಗಿದ್ದ 116 ಕೋಟಿ ಮೌಲ್ಯದ ಪ್ರಾಪರ್ಟಿ ಪೈಕಿ 67 ಕೋಟಿಯಷ್ಟೇ ಶೇಕಡಾ 58 ರಿಕವರಿ ಮಾಡಿಕೊಳ್ಳಲಾಗಿದೆ. 2021ರಲ್ಲಿ 118 ಕೋಟಿ ರೂ. ಪೈಕಿ 70 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಕ್ರಿಸ್​ಮಸ್​ ಹಬ್ಬಕ್ಕೆ ಕರೆದು ವಿಚ್ಚೇದಿತ ಪತ್ನಿ ಮೇಲೆ ಪತಿ ವಿಷದ ಸಿರಿಂಜ್​ನಿಂದ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.