ETV Bharat / state

ಕೊರೊನಾ ಎಫೆಕ್ಟ್​: ಐಟಿ ಕ್ಷೇತ್ರದ ನೌಕರರ ಕೆಲಸದ ಸ್ಥಿತಿಗತಿ ಹೇಗಿದೆ ಗೊತ್ತಾ.? - The Corona Effect

ಪ್ರಾರಂಭಿಕ ಹಂತದಲ್ಲಿ ವಿ ಎಂ ವೇರ್ ಸಂಸ್ಥೆ 200 ನೌಕರರನ್ನ ವಜಾಗೊಳಿಸಲಾಗಿದೆ. ಅಕ್ಸೆಂಚರ್ ಸಂಸ್ಥೆ ಭಾರತದಲ್ಲಿ 10,000 ಉದ್ಯೋಗಿಗಳನ್ನ ಹಾಗೂ ವಿಶ್ವದಲ್ಲಿ 25,000 ಉದ್ಯೋಗಿಗಳನ್ನ ವಜಾಗೊಳಿಸಲಿದೆ ಎಂದು ತಿಳಿಸಿದೆ. ಇದರ ಜೊತೆಗೆ ಸಂಬಳಕ್ಕೂ ಕತ್ತರಿ ಬೀಳಲಿದ್ದು, ಟೆಕ್ಕಿಗಳಿಗೆ ಆತಂಕ ಮನೆ ಮಾಡಿದೆ.

ಐಟಿ ಕ್ಷೇತ್ರದ ನೌಕರರ ಕೆಲಸದ ಸ್ಥಿತಿಗತಿ ಹೇಗಿದೆ ಗೊತ್ತಾ.?

author img

By

Published : Aug 26, 2020, 10:56 PM IST

ಬೆಂಗಳೂರು: ಕೊರೊನಾ ಅಂದ್ರೆ ಸಾಕು ಆರೋಗ್ಯ ಹಾಗೂ ಆರ್ಥಿಕತೆ ನೆನಪಾಗುತ್ತೆ. ಈ ಸಂದರ್ಭದಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳ ಕೆಲಸದ ಮೇಲೆ ಸಂಸ್ಥೆಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಕೆಲಸದ ಒತ್ತಡದ ಜೊತೆಗೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಭಾರತದ ಐಟಿ/ಬಿಟಿ ವಲಯ ವಿಶ್ವಕ್ಕೆ 2000 ವರ್ಷದಿಂದ ಮಾದರಿಯಾಗಿದೆ. ಅತ್ಯುನ್ನತ ಎಂಜಿನಿಯರಿಂಗ್ ಪಟುಗಳನ್ನು ನೀಡಿದ ಈ ಕ್ಷೇತ್ರದಲ್ಲಿ ಈಗ ಕೋಟ್ಯಂತರ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.

ಕೊರೊನಾ ನಂತರದ ಜಗತ್ತಿನಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳ ಸಮಸ್ಯೆಗಳೇನು?

ಕೆಲಸಕ್ಕೆ ಬೇಡಿಕೆ ಕ್ಷೀಣಿಸಿದೆ: ಐಟಿ ವಲಯದ ಗ್ರಾಹಕರು ಐಟಿ ಸೇವೆಗಳ ಆಯವ್ಯಯವನ್ನು ಕ್ಷೀಣಿಸುವುದರ ಜೊತೆಗೆ ಹೊಸ ಸೇವೆಗಳ ಖರೀದಿಯನ್ನು ಕಡಿತಗೊಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಐಟಿ ಸಂಸ್ಥೆಗಳಿಗೆ ದಿನದ 24 ಗಂಟೆಯು ಉತ್ತಮ ಇಂಟರ್ನೆಟ್ ಸೌಲಭ್ಯ ಅತ್ಯಗತ್ಯ. ಈಗ ಮನೆಯಿಂದ ಕೆಲಸ ಮಾಡುತ್ತಿರುವ ನೌಕರರಿಗೆ ಸಾಮಾನ್ಯವಾಗಿ ಇಂಟರ್ನೆಟ್ ಕಡಿತ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಯಾವುದೇ ಅಡೆತಡೆಯಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಪ್ಪಂದದ ಆಧಾರದಂತೆ ಸಮಯಕ್ಕೆ ಸರಿಯಾಗಿ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನು ಕ್ಲೈಂಟ್ ಗಳು ಒಪ್ಪದ ಕಾರಣ ಹಲವು ಪ್ರಾಜೆಕ್ಟ್ ಗಳನ್ನ ಬೇಡ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಟಿ ಕ್ಷೇತ್ರದ ನೌಕರರ ಕೆಲಸದ ಸ್ಥಿತಿಗತಿ

ಇತರೆ ವಲಯ ಇಳಿಮುಖ, ಐಟಿ ವಲಯಕ್ಕೂ ಸಮಸ್ಯೆ: ಐಟಿ ಸೇವೆಗಳು ಸಾಮಾನ್ಯವಾಗಿ ಇತರೆ ವಲಯದ ಸದೃಢತೆಗೆ ತಂತ್ರಜ್ಞಾನ ನೀಡುತ್ತದೆ. ಪ್ರಸ್ತುತವಾಗಿ ಆರೋಗ್ಯ ಸೇವೆ ಹಾಗೂ ಇ ಕಾಮರ್ಸ್ ಬಿಟ್ಟರೆ ಇನ್ನುಳಿದ ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ನೇರ ಪರಿಣಾಮ ಐಟಿ ವಲಯಕ್ಕೆ ಸಮಸ್ಯೆ ಉಂಟು ಮಾಡಿದೆ. ಅಂಗಡಿಗಳ ಬಿಲ್ಲಿಂಗ್ ತಂತ್ರಜ್ಞಾನದಿಂದ ವಿಮಾನದ ಬುಕ್ಕಿಂಗ್​ವರೆಗೂ ಸೇವೆ ನೀಡುತ್ತಿದ್ದ ಐಟಿ ಈಗ ಲಾಕ್ ಡೌನ್ ಹಾಗೂ ಹೆಚ್ಚು ಜನರ ಓಡಾಟವಿಲ್ಲದೆ ನಲುಗಿದೆ. ಇಷ್ಟೆಲ್ಲ ಸಮಸ್ಯೆ ಐಟಿ ವಲಯಕ್ಕೆ ಇರುವ ಕಾರಣ ಸಂಸ್ಥೆಯ ನೌಕರರನ್ನ ಕೆಲಸದಿಂದ ವಜಾಗೊಳಿಸುವ ನಿರ್ಧಾರಕ್ಕೆ ಆಡಳಿತ ಅಧಿಕಾರಿಗಳು ಬರುತ್ತಿದ್ದಾರೆ.

ಪ್ರಾರಂಭಿಕ ಹಂತದಲ್ಲಿ ವಿ ಎಂ ವೇರ್ ಸಂಸ್ಥೆ 200 ನೌಕರರನ್ನ ವಜಾಗೊಳಿಸಲಾಗಿದೆ. ಅಕ್ಸೆಂಚರ್ ಸಂಸ್ಥೆ ಭಾರತದಲ್ಲಿ 10,000 ಉದ್ಯೋಗಿಗಳನ್ನ ಹಾಗೂ ವಿಶ್ವದಲ್ಲಿ 25,000 ಉದ್ಯೋಗಿಗಳನ್ನ ವಜಾಗೊಳಿಸಲಿದೆ ಎಂದು ತಿಳಿಸಿದೆ. ಇದರ ಜೊತೆಗೆ ಸಂಬಳಕ್ಕೂ ಕತ್ತರಿ ಬೀಳಲಿದ್ದು, ಟೆಕ್ಕಿಗಳಿಗೆ ಆತಂಕ ಮನೆಮಾಡಿದೆ.

ಐಟಿ ವಲಯದ ಕೆಲಸಗಳ ಸಂಬಂಧಿಸಿದಂತೆ ಮಾತನಾಡಿದ ಆರ್ಥಿಕ ತಜ್ಞ ಮುರಳೀಧರ, ಪ್ರಸ್ತುತವಾಗಿ ದೊಡ್ಡ ಐಟಿ ಸಂಸ್ಥೆಗಳು ನೌಕರರನ್ನ ಕೆಲಸದಿಂದ ವಜಾಗೊಳಿಸುತ್ತಿದ್ದು, ಇದರಿಂದ ಧೃತಿಗೆಡಬೇಕಾದ ಪರಿಸ್ಥಿತಿ ಇಲ್ಲ. ಇಡೀ ವಿಶ್ವದಲ್ಲೇ ಆರ್ಥಿಕ ಸಮಸ್ಯೆಯಿಂದ ಸಂಸ್ಥೆಗಳು ಪರದಾಡುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಕುರಿತ ಕೆಲಸಗಳು ಪ್ರಾರಂಭ ಆಗಲಿದೆ. ಇತ್ತೀಚಿಗೆ ಪ್ರಧಾನಿ ಮೋದಿ ಹೇಳಿಕೆಯಂತೆ ಆದಾಯ ತೆರಿಗೆಯಲ್ಲಿ ಎ ಐ ತಂತ್ರಜ್ಞಾನ ಬಳಿಕೆ ಆಗಲಿದೆ. ಇದೆ ರೀತಿ ವಿವಿಧ ವಲಯಗಳಲ್ಲಿ ತಂತ್ರಜ್ಞಾನದ ಪ್ರವೇಶದಿಂದ ಐಟಿ ವಲಯದಲ್ಲಿ ಆರ್ಥಿಕತೆ ಸುಧಾರಣೆ ಆಗಲಿದೆ ಎಂದರು.

ದೊಡ್ಡ ಸಂಸ್ಥೆಗಳಲ್ಲಿ ಕೆಲಸ ವಜಾ ಆದರೆ ಮಾತ್ರ ಸುದ್ದಿಗೆ ಮಹತ್ವ ಸಿಗುತ್ತದೆ. ಮಾರ್ಚ್ ತಿಂಗಳಿಂದ ಬಹುತೇಕ ಸಣ್ಣ ಸಂಸ್ಥೆಗಳಲ್ಲಿ ಲಕ್ಷಾಂತರ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ. ಅವರಲ್ಲಿ ಬಹುತೇಕರು ಬೇರೆ ರೀತಿ ಉದ್ಯಮ ಹಾಗೂ ಕೆಲಸಗಳಲ್ಲಿ ತೊಡಗಿದ್ದಾರೆ ಅನೇಕರು ಕೆಲಸ ಇಲ್ಲದೆಯೂ ಇದ್ದಾರೆ. ಈಗ ಕೆಲಸ ಕಳೆದುಕೊಂಡಿರುವವರು ನೂತನ ಕುಶಲತೆಯ ಬಗ್ಗೆ ಅರಿವು ಮುಡಿಸಿಕೊಳ್ಳಬೇಕು. ಪ್ರತಿಯೊಂದು ಸಂಕಟ ಪರಿಸ್ಥಿತಿ ಹೊಸ ಪಾಠ ಕಲಿಸುತ್ತದೆ, ವಿವಿಧ ತಜ್ಞರು ಹೇಳುವ ಪ್ರಕಾರ ಹೊಸ ಉದ್ಯೋಗಾವಕಾಶ ಭಾರತದಲ್ಲಿ ಸೃಷ್ಟಿಯಾಗಲಿದೆ ಅದಕ್ಕೆ ಸಂಯಮದಿಂದ ಇರಬೇಕು ಎಂದು ಕಿವಿಮಾತನ್ನ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.