ETV Bharat / state

ಬುಧವಾರ ಸಚಿವ ಸಂಪುಟ ಸಭೆ.. ಪಕ್ಷೇತರರಿಗೆ ಮೊದಲೆರಡು, 3ನೇ ಸ್ಥಾನಕ್ಕೆ ಬಿ ಎಂ ಫಾರೂಕ್ ?!

ಜೆಡಿಎಸ್ ವರಿಷ್ಠರ ನಿರ್ಧಾರದಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಚಿವರಾಗುವ ಆಸೆ ಕಮರಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳು
author img

By

Published : Jun 9, 2019, 12:35 PM IST

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬುಧವಾರ (ಜೂನ್​ 12) ಬೆಳಗ್ಗೆ ನಡೆಯಲಿದ್ದು, ಜೆಡಿಎಸ್ ತನ್ನ ಎರಡೂ ಸಚಿವ ಖಾತೆಯನ್ನು ತುಂಬಲು ತೀರ್ಮಾನಿಸಿದೆ. ಈಗಾಗಲೇ ಖಾಲಿಯಿರುವ ಕಾಂಗ್ರೆಸ್​ನ ಒಂದು ಹಾಗೂ ಜೆಡಿಎಸ್​ನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕರಿಗೆ ನೀಡಲು ತೀರ್ಮಾನಿಸಲಾಗಿದ್ದು, ಪಕ್ಷೇತರರಾದ ರಾಣಿಬೆನ್ನೂರು ಕ್ಷೇತ್ರದ ಶಾಸಕ ಆರ್‌.ಶಂಕರ್​ಗೆ ಕಾಂಗ್ರೆಸ್​ ಕಡೆಯಿಂದ ಹಾಗೂ ಮುಳುಬಾಗಿಲು ಕ್ಷೇತ್ರದ ಶಾಸಕ ನಾಗೇಶ್​ಗೆ ಜೆಡಿಎಸ್ ಕಡೆಯಿಂದ ಸಚಿವರಾಗುವುದು ಪಕ್ಕಾ ಆಗಿದೆ.

ಜೆಡಿಎಸ್ ತನ್ನ ಇನ್ನೊಂದು ಸಚಿವ ಸ್ಥಾನವನ್ನೂ ಕಾಂಗ್ರೆಸ್​ಗೆ ಬಿಟ್ಟುಕೊಡಲಿದ್ದು, ಆ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರನ್ನು ತುಂಬುತ್ತಾರೆ ಎಂಬ ಮಾಹಿತಿಯಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ತೀರ್ಮಾನಿಸಿರುವ ಜೆಡಿಎಸ್ ನಾಯಕರು, ಇದಕ್ಕೆ ತಮ್ಮ ಶಾಸಕರನ್ನೇ ಸಚಿವರನ್ನಾಗಿ ಮಾಡುವುದಾಗಿ ತೀರ್ಮಾನಿಸಿದ್ದಾರೆ.

ಅಪ್ಪ ಒಪ್ಪಲಿಲ್ಲ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಳಿಯಿರುವ ಸಚಿವ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ತೀರ್ಮಾನಿಸಿದ್ದರು. ಈ ಸಂಬಂಧ ಕೈ ನಾಯಕರ ಜತೆ ಸಭೆ ಕೂಡ ನಡೆಸಿದ್ದರು. ಆದರೆ, ಕಡೆಯ ಕ್ಷಣಗಳಲ್ಲಿ ಈ ತೀರ್ಮಾನ ಬದಲಾಗಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಕಾರಣ ಎನ್ನಲಾಗುತ್ತಿದೆ. ತಮ್ಮ ಖಾತೆಯನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲ ಎನ್ನಲಾಗುತ್ತಿದೆ.

ಈ ಕಾರಣದಿಂದ ಜೆಡಿಎಸ್ ಖಾಲಿಯಿರುವ ಒಂದು ಸಚಿವ ಸ್ಥಾನಕ್ಕೆ ತಮ್ಮ ಶಾಸಕರನ್ನೇ ಪರಿಗಣಿಸಲು ತೀರ್ಮಾನಿಸಿದೆ. ಈ ಸ್ಥಾನಕ್ಕೆ ಮೊದಲು ಹೆಸರು ಕೇಳಿ ಬಂದಿದ್ದು ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರು. ಆದರೆ, ಹಾಸನ ಜಿಲ್ಲೆಯಿಂದ ಇನ್ನೊಬ್ಬರು ಸಚಿವರಾಗುವುದು ಬೇಡ ಎಂದ ಸಚಿವ ಹೆಚ್ ಡಿ ರೇವಣ್ಣ ಇದಕ್ಕೆ ತಡೆ ಹಾಕಿದರು. ನಂತರ ಮಳವಳ್ಳಿ ಶಾಸಕ ಅನ್ನದಾನಿ ಹೆಸರು ಕೇಳಿಬಂತು. ಈಗಾಗಲೇ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿರುವ ಕಾರಣ ನಿರಾಕರಿಸಲಾಗಿದೆ ಎನ್ನಲಾಗಿದೆ.

ಅಂತಿಮವಾಗಿ ಅಲ್ಪಸಂಖ್ಯಾತರಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್​ಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಫಾರುಕ್ ಈಗಾಗಲೇ ರಾಜ್ಯಸಭೆಗೆ ಜೆಡಿಎಸ್​ನಿಂದ ಸ್ಪರ್ಧಿಸಿ ಶಾಸಕರ ಅಡ್ಡ ಮತದಾನದಿಂದಾಗಿ ಅವಕಾಶ ಕಳೆದುಕೊಂಡಿದ್ದರು. ಅಲ್ಲದೇ ಜೆಡಿಎಸ್​ನಿಂದ ಅಲ್ಪಸಂಖ್ಯಾತ ಮತಗಳು ದೂರವಾಗುತ್ತಿದ್ದು, ಇವೆರಡಕ್ಕೂ ಒಂದೇ ಏಟಿನಲ್ಲಿ ಪರಿಹಾರ ಕಂಡುಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

Intro:newsBody:ಮೊದಲೆರಡು ಸ್ಥಾನ ಪಕ್ಷೇತರರಿಗೆ, ಮೂರನೇ ಸ್ಥಾನಕ್ಕೆ ಫಾರೂಕ್ ಆಯ್ಕೆ?!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬರುವ ಬುಧವಾರ ಬೆಳಗ್ಗೆ ನಡೆಯಲಿದ್ದು, ಜೆಡಿಎಸ್ ತನ್ನ ಎರಡೂ ಸಚಿವ ಖಾತೆಯನ್ನು ತುಂಬಲು ತೀರ್ಮಾನಿಸಿದೆ.
ಈಗಾಗಲೇ ಖಾಲಿರುವ ಕಾಂಗ್ರೆಸ್ನ ಒಂದು ಸ್ಥಾನ ಹಾಗೂ ಜೆಡಿಎಸ್ನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕರಿಗೆ ನೀಡಲು ತೀರ್ಮಾನಿಸಲಾಗಿದೆ. ಪಕ್ಷೇತರರಾದ ಮಾಜಿ ಸಚಿವ ಆರ್. ಶಂಕರ್ ಕಾಂಗ್ರೆಸ್ ಕಡೆಯಿಂದ ಹಾಗೂ ನಾಗೇಶ್ ಜೆಡಿಎಸ್ ಕಡೆಯಿಂದ ಸಚಿವರಾಗುವುದು ಪಕ್ಕಾ ಆಗಿದೆ. ಇದುವರೆಗೂ ಜೆಡಿಎಸ್ ತನ್ನ ಬಳಿಯಿರುವ ಇನ್ನೊಂದು ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಿದೆ. ಅದಕ್ಕೆ ರಾಮಲಿಂಗರೆಡ್ಡಿ ಸಚಿವರಾಗುತ್ತಾರೆ ಎಂಬ ಮಾಹಿತಿ ಇತ್ತು. ಆದರೆ ಕಡೆಯ ಕ್ಷಣದಲ್ಲಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ತೀರ್ಮಾನಿಸಿರುವ ಜೆಡಿಎಸ್ ನಾಯಕರು, ಇದಕ್ಕೆ ತಮ್ಮ ಶಾಸಕರನ್ನೇ ಸಚಿವರನ್ನಾಗಿ ನೇಮಿಸಲು ತೀಮಾನಿಸಿದ್ದಾರೆ.
ಅಪ್ಪ ಒಪ್ಪಲಿಲ್ಲ
ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಬಳಿಯಿರುವ ಸಚಿವ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ತೀರ್ಮಾನಿಸಿದ್ದರು. ಈ ಸಂಬಂಧ ಕೈ ನಾಯಕರ ಜತೆ ಸಭೆ ಕೂಡ ನಡೆಸಿದ್ದರು.ಆದರೆ ಕಡೆಯ ಕ್ಷಣದಲ್ಲಿ ಈ ತೀರ್ಮಾನ ಬದಲಾಗಲು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಕಾರಣ ಎನ್ನಲಾಗುತ್ತಿದೆ. ಸುತಾರಾಂ ತಮ್ಮ ಖಾತೆಯನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲು ಇವರು ಸಮ್ಮತಿಸಿಲ್ಲ. ಇದರಿಂದಾಗಿ ಜೆಡಿಎಸ್ ಖಾಲಿ ಇರುವ ಒಂದು ಸಚಿವ ಸ್ಥಾನಕ್ಕೆ ತಮ್ಮ ಶಾಸಕರನ್ನೇ ಪರಿಗಣಿಸಲು ತೀರ್ಮಾನಿಸಿದೆ.
ಸಚಿವ ಸ್ಥಾನದ ವಿಚಾರ ಬಂದಾಗ ಮೊದಲು ಕೇಳಿಬಂದಿದ್ದು ಎಚ್.ಕೆ. ಕುಮಾರಸ್ವಾಮಿ ಅವರ ಹೆಸರು. ಆದರೆ ಹಾಸನ ಜಿಲ್ಲೆಯಿಂದ ಇನ್ನೊಬ್ಬರು ಸಚಿವರಾಗುವುದು ಬೇಡ ಎಂದ ಸಚಿವ ಎಚ್.ಡಿ. ರೇವಣ್ಣ ಇದಕ್ಕೆ ತಡೆ ಹಾಕಿದರು. ಇದಾದ ಬಳಿಕ ಅನ್ನದಾನಿ ಈ ಸ್ಥಾನಕ್ಕೆ ಕೇಳಿಬಂದರು. ಆದರೆ ಅವರಿಗೆ ಆಗಲೇ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿದ್ದರಿಂದ ಅವಕಾಶ ನಿರಾಕರಿಸಲಾಗಿದೆ. ಅಂತಿಮವಾಗಿ ಅಲ್ಪಸಂಖ್ಯಾತರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.
ಫಾರುಕ್ ಈಗಾಗಲೇ ರಾಜ್ಯಸಭೆಗೆ ಜೆಡಿಎಸ್ನಿಂದ ಸ್ಪರ್ಧಿಸಿ ಶಾಸಕರ ಅಡ್ಡಮತದಾನದಿಂದಾಗಿ ಅವಕಾಶ ಕಳೆದುಕೊಂಡಿದ್ದರು. ಅಲ್ಲದೇ ಜೆಡಿಎಸ್ನಿಂದ ಅಲ್ಪಸಂಖ್ಯಾತ ಮತಗಳು ದೂರವಾಗುತ್ತಿದ್ದು, ಇವೆರಡಕ್ಕೂ ಒಂದೇ ಏಟಿನಲ್ಲಿ ಪರಿಹಾರ ಕಂಡುಕೊಳ್ಳಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಜೆಡಿಎಸ್ ವರಿಷ್ಠರ ನಿರ್ಧಾರದಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಇನ್ನುಳಿದ ಶಾಸಕರಿಗೆ ಸಚಿವರಾಗುವ ನಿರೀಕ್ಷೆ ಹುಸಿಯಾಗಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.