ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್, ಜೆಡಿಎಸ್ನ ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರ ರಚನೆಯ ಬಿಜೆಪಿ ಕನಸು ಚಿಗುರೊಡೆದಿದೆ.
ಇದರ ಬೆನ್ನಲ್ಲೇ ಬಿಜೆಪಿ ನಾಯಕಿ ತಾರಾ ಅನುರಾಧ ಅವರು ಸಿಂಗಂ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸದೊಂದು ಅಲೆ ಎಬ್ಬಿಸಿದೆ. ದೇಶವನ್ನು ಮುನ್ನಡೆಸುತ್ತಿರೋ ಪಕ್ಷವೇ ರಾಜ್ಯದಲ್ಲೂ ಇದ್ದರೆ ಒಳ್ಳೆಯದು. ಇದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.