ETV Bharat / state

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರ: ತನಿಖೆ ನಡೆಸುವಂತೆ ಪತ್ರ ಬರೆದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ - National Child Rights Commission, which wrote a letter to investigate

ಕ್ಲಾರೆನ್ಸ್ ಹೈಸ್ಕೂಲ್ ಶಾಲೆ ಇದೀಗ ರಾಷ್ಟ್ರೀಯ ಮಕ್ಕಳ‌ ಹಕ್ಕುಗಳ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಸಂಬಂಧ ತನಿಖೆ‌ ನಡೆಸುವಂತೆ ಸೂಚನೆ ನೀಡಿದೆ.

ಕ್ಲಾರೆನ್ಸ್ ಶಾಲೆ
ಕ್ಲಾರೆನ್ಸ್ ಶಾಲೆ
author img

By

Published : Apr 25, 2022, 9:51 PM IST

ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲ್​​ನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳಿಂದ ನಿನ್ನೆ ಆಕ್ರೋಶ ವ್ಯಕ್ತವಾಗಿತ್ತು. ರಿಚರ್ಡ್ಸ್ ಟೌನ್‌ನಲ್ಲಿರುವ ಈ ಶಾಲೆಗೆ ಪ್ರವೇಶಾತಿ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೂ ಬೈಬಲ್ ಓದುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಕ್ರಿಶ್ಚನೇತರ ಮಕ್ಕಳಿಗೆ ಬೈಬಲ್ ಕಲಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಲು ಶಾಲೆಯ ಆಡಳಿತ ಮಂಡಳಿ ಹಿಂದೇಟು ಹಾಕಿತ್ತು.‌ ಹೈಸ್ಕೂಲ್ ಕಾನೂನಿನ ನಿಯಮಗಳಂತೆಯೇ ನಡೆಯುತ್ತಿದ್ದು, ವಕೀಲರ ಜೊತೆ ಈ ಬಗ್ಗೆ ಸಮಾಲೋಚಿಸಲಾಗುವುದು ಅಂತ ಹೇಳಿ ಪ್ರಾಂಶುಪಾಲರು ಕೈತೊಳೆದುಕೊಂಡಿದ್ದರು.

ರಾಷ್ಟ್ರೀಯ ಮಕ್ಕಳ‌ ಹಕ್ಕುಗಳ ಆಯೋಗ ಬರೆದ ಪತ್ರ
ರಾಷ್ಟ್ರೀಯ ಮಕ್ಕಳ‌ ಹಕ್ಕುಗಳ ಆಯೋಗ ಬರೆದ ಪತ್ರ

ಈ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಇದೀಗ ಈ ಶಾಲೆ‌ ರಾಷ್ಟ್ರೀಯ ಮಕ್ಕಳ‌ ಹಕ್ಕುಗಳ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಸಂಬಂಧ ತನಿಖೆ‌ ನಡೆಸುವಂತೆ ಸೂಚನೆ ನೀಡಿದೆ. ಕ್ಲಾರೆನ್ಸ್ ಶಾಲೆ ಮೇಲು‌ನೋಟಕ್ಕೆ ಸಂವಿಧಾನದ ಆರ್ಟಿಕಲ್ 25 ಮತ್ತು 28 (3) ಉಲ್ಲಂಘನೆ ಎದ್ದು ಕಾಣುತ್ತಿದೆ ಎಂದು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್​ಗೆ ಪತ್ರ ಬರೆದಿದ್ದು, ಏಳು ದಿನಗಳ ಒಳಗೆ ತನಿಖೆ ಮತ್ತು ತೆಗೆದುಕೊಂಡಿರುವ ಕ್ರಮದ ವಿವರ ವರದಿ ಸಲ್ಲಿಸಲು ಆಯೋಗ ಸೂಚನೆ ನೀಡಿದೆ.

ಇದನ್ನೂ ಓದಿ: ಕ್ರಿಶ್ಚಿಯನ್ ಅಲ್ಲದ ಮಕ್ಕಳಿಗೂ ಬೈಬಲ್ ಕಲಿಕೆಗೆ ಒತ್ತಾಯ ಆರೋಪ: ಪ್ರಾಂಶುಪಾಲರು ಹೇಳಿದ್ದೇನು ?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.