ETV Bharat / state

ಲಸಿಕೆ ಗ್ಲೋಬಲ್ ಟೆಂಡರ್​ನಲ್ಲಿ ಭಾಗವಹಿಸಿದ್ದ ಎರಡು ಸಂಸ್ಥೆಗಳ ಟೆಂಡರ್ ಪ್ರಸ್ತಾಪ ರದ್ದು: ಡಿಸಿಎಂ ಅಶ್ವತ್ಥ್ ನಾರಾಯಣ್

ಟೆಂಡರ್​ನಲ್ಲಿ ಎರಡೇ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ ಅವರು ಯಾರೂ ಲಸಿಕೆ ತಯಾರಕರಲ್ಲ. ಅವರು ಲಸಿಕೆ ಸರಬರಾಜು ಮಾಡುವವರಾಗಿದ್ದಾರೆ.‌ ಹೀಗಾಗಿ ಅವರ ಟೆಂಡರನ್ನು ತಿರಸ್ಕಾರ ಮಾಡಿದ್ದೇವೆ ಎಂದು‌ ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

dcm
dcm
author img

By

Published : May 29, 2021, 4:53 PM IST

Updated : May 29, 2021, 5:13 PM IST

ಬೆಂಗಳೂರು: ಲಸಿಕೆ ಖರೀದಿಗಾಗಿ ಕರೆದ ಜಾಗತಿಕ ಟೆಂಡರ್​ನಲ್ಲಿ ಭಾಗವಹಿಸಿದ್ದ ಎರಡು ಸಂಸ್ಥೆಗಳ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸ್ಪುಟ್ನಿಕ್ ಲಸಿಕೆ ಪೂರೈಸಲು ಮುಂಬೈ, ದೆಹಲಿ ಸಂಸ್ಥೆ ಮುಂದೆ ಬಂದಿತ್ತು. ಆದರೆ ಅವರು ನೀಡಿದ ದರ ಸೇರಿ ಇತರ ಅಂಶಗಳು ಕಾರ್ಯಸಾಧುವಾಗಿಲ್ಲ. ಹೀಗಾಗಿ ಅದನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ. ಟೆಂಡರ್​ನಲ್ಲಿ ಎರಡೇ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ, ಅವರು ಯಾರೂ ಲಸಿಕೆ ತಯಾರಕರಲ್ಲ. ಅವರು ಲಸಿಕೆ ಸರಬರಾಜು ಮಾಡುವವರಾಗಿದ್ದಾರೆ.‌ ಹೀಗಾಗಿ ಅವರ ಟೆಂಡರನ್ನು ತಿರಸ್ಕಾರ ಮಾಡಿದ್ದೇವೆ ಎಂದು‌ ಸ್ಪಷ್ಟಪಡಿಸಿದರು.

ಡಿಸಿಎಂ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ

ರಾಜ್ಯ ಸರ್ಕಾರದ ಗ್ಲೋಬಲ್ ಟೆಂಡರ್ ಕರೆಯುವ ಪ್ರಕ್ರಿಯೆಗೆ ತೀವ್ರ ಹಿನ್ನಡೆಯಾಗಿದೆ. ಎರಡು ಸಂಸ್ಠೆಗಳ ಟೆಂಡರನ್ನು ತಿರಸ್ಕರಿಸಿದ‌ ಕಾರಣ ಟೆಂಡರ್ ಅವಧಿಯನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.

ಲಾಕ್​ಡೌನ್ ವಿಚಾರ ಚರ್ಚೆಯಾಗಿಲ್ಲ:

ಜೂನ್ 7ರವರೆಗೂ ಲಾಕ್​ಡೌನ್ ಇದೆ. ಸದ್ಯಕ್ಕೆ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಚರ್ಚೆ ಆಗಿಲ್ಲ. ಇತ್ತ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆಗ್ತಿದೆ. ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿದೆ. ಬಹಳ ವೇಗವಾಗಿ ವರದಿ ನೀಡಲು ಆರ್.ಟಿ.ಪಿ.ಸಿ.ಆರ್ ಕಡಿಮೆ ಮಾಡಿ ರ್ಯಾಟ್ ಟೆಸ್ಟ್ ಹೆಚ್ಚಳ ಮಾಡಲಾಗಿದೆ. ಈಗ ಎರಡೂ ಟೆಸ್ಟ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಮರಣ ಪ್ರಮಾಣ ಕಡಿಮೆ ಮಾಡೋ ಕೆಲಸ ಮಾಡಲಾಗಿದೆ. ಇದಕ್ಕಾಗಿ ಹಳ್ಳಿ ಹಳ್ಳಿಗೂ ವೈದ್ಯರ ನಡೆ ಕಾರ್ಯಕ್ರಮ ಮಾಡಲಾಗ್ತಿದೆ. ಹೆಚ್ಚು ಸೋಂಕಿರೋ ಕಡೆ ಕ್ಯಾಂಪ್ ಹಾಕಿ ತಪಾಸಣೆ ಮಾಡಲಾಗುತ್ತಿದೆ ಎಂದರು.

ಪಿಎಂ ಕೇರ್ ವೆಂಟಿಲೇಟರ್ ಬಳಕೆಯಾಗದಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಿಎಂ ಕೇರ್ ವೆಂಟಿಲೇಟರ್ ಕೆಲಸ ಮಾಡ್ತಿದೆ. ಕೆಲವೆಡೆ ಬಳಕೆ ಆಗದೇ ಇರಬಹುದು. ಶೇಕಡಾ ತೊಂಬತ್ತರಷ್ಟು ಬಳಕೆ ಆಗುತ್ತಿದೆ. ಅವರಿಗೆ ಟ್ರೈನಿಂಗ್ ನೀಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಳಕೆ ಮಾಡಲು ಸೂಚಿಸಲಾಗುವುದು ಎಂದರು.

ಶಾಸಕ ರವಿ ಸುಬ್ರಹ್ಮಣ್ಯ ಮೇಲಿನ ಹಣ ಪಡೆದು ಲಸಿಕೆ ಪೂರೈಸುತ್ತಿರೋ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋವಿಶೀಲ್ಡ್ 600ರೂ.ಗೆ ಖರೀದಿಯಾಗುತ್ತಿದೆ. ಕೋವ್ಯಾಕ್ಸಿನ್ 880 ರೂ.ಗೆ ಖರೀದಿಯಾಗುತ್ತದೆ. ಜೊತೆಯಲ್ಲಿ 200 ರೂ. ವ್ಯಾಕ್ಸಿನೇಟಿಂಗ್ ಶುಲ್ಕ ವಿಧಿಸಲಾಗುವುದು. ಈ ದರಕ್ಕೆ ಕಂಪನಿಯವರು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾರಿಗೆ ಲಸಿಕೆ ಹಾಕಿಸಿದ್ರೂ 200ರೂ. ತೆಗೆದುಕೊಳ್ತೇವೆ ಎಂದು ಶಾಸಕ ರವಿ ಸುಬ್ರಹ್ಮಣ್ಯ ನಡೆಯನ್ನು ಡಿಸಿಎಂ ಸಮರ್ಥಿಸಿಕೊಂಡರು.

Last Updated : May 29, 2021, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.