ಬೆಂಗಳೂರು: 2019-20 ನೇ ಸಾಲಿಗೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.30 ರಷ್ಟು ನಾನ್ - ಕ್ಲಿನಿಕಲ್, ಶೇ.45 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು , ಒಟ್ಟಾರೆಯಾಗಿ ಶೇ.75 ಮೀರದಂತೆ ಈ ಹಿಂದಿನ ಟೆಂಡರ್ ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಹೊರಗುತ್ತಿಗೆ ಸಂಪನ್ಮೂಲದ ಟೆಂಡರ್ ಕರೆಯಲು ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
![Tender](https://etvbharatimages.akamaized.net/etvbharat/prod-images/kn-bng-02-24-health-jobs-script-deepa-7201801_24062019211330_2406f_1561391010_620.jpg)
ಕೊರತೆ ಇರುವ ಅನುದಾನವನ್ನು ಪೂರಕ ಅಂದಾಜು-1 ರಲ್ಲಿ ಒದಗಿಸಲಾಗುವುದರ ಜೊತೆಗೆ ನಿಬಂಧನೆಗಳನ್ನ ಹಾಕಲಾಗಿದೆ. ಪ್ರಸ್ತುತ 2018-19 ನೇ ಸಾಲಿಗೆ ಹೊರಗುತ್ತಿಗೆ ಮೇರೆಗೆ ನಾನ್ ಕ್ಲಿನಿಕಲ್ ಹಾಗೂ ಗೂಪ್ -ಡಿ ಸೇವೆಗಳನ್ನು ನೀಡುತ್ತಿರುವ ಹೊರಗುತ್ತಿಗೆ ಸಂಸ್ಥೆಗಳಿಂದಲೇ ಮುಂದಿನ ಜುಲೈ ತಿಂಗಳವರೆಗೆ ಮುಂದುವರೆಸುವಂತೆ ಹಾಗೂ 2019-20ನೇ ಸಾಲಿಗೆ ಕೂಡಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತೆ ಆದೇಶಿಸಲಾಗಿದೆ.
![Tender](https://etvbharatimages.akamaized.net/etvbharat/prod-images/kn-bng-02-24-health-jobs-script-deepa-7201801_24062019211330_2406f_1561391010_60.jpg)
ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಹೊರಗುತ್ತಿಗೆ ಸೇವೆಗಳಿಗೆ ಅಲ್ಪಾವಧಿ ಟೆಂಡರ್ ಕರೆಯಲು ಕೂಡಲೇ ಕ್ರಮ ವಹಿಸಬೇಕಿದೆ. ಹಾಗೂ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಜುಲೈ-2019ರ ಒಳಗೆ ಈ ಹಿಂದಿನಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಅಂತಿಮಗೊಳಿಸಿ, ಆಗಸ್ಟ್ 2019 ರಿಂದ ಹೊಸ ಟೆಂಡರ್ ಜಾರಿಗೆ ತರುವಂತೆ ಸೂಚಿಸಲಾಗಿದೆ.
ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸ್ವ- ವಿವರ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಉಳಿತಾಯ ಖಾತೆ ಕಡ್ಡಾಯವಾಗಿ ಪಡೆಯತಕ್ಕದ್ದು.ವೇತನ / ಪಿಎಫ್/ ಇಎಸ್‌ಐ ಗಳನ್ನು ಗುತ್ತಿಗೆದಾರರು ಪಾವತಿಸಿರುವುದನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ವೇತನವನ್ನು ಕಡ್ಡಾಯವಾಗಿ ಬ್ಯಾಂಕ್ ಮೂಲಕ (ಚೆಕ್ /ಆರ್‌ಟಿಜಿಎಸ್) ನೀಡಲು ಕ್ರಮವಹಿಸಬೇಕು. ಈ ಅಂಶವನ್ನು ಗುತ್ತಿಗೆ ಕರಾರಿನಲ್ಲಿ ನಮೂದಿಸುವಂತೆ ಆದೇಶ ಮಾಡಲಾಗಿದೆ.
ಇನ್ನು ಬಯೋಮೆಟ್ರಿಕ್ ಯಂತ್ರದ ವ್ಯವಸ್ಥೆಯ ಮುಖೇನ ಹಾಜರಾತಿ ಪಡೆಯುವುದು. ಕೆಲಸ ನಿರ್ವಹಿಸುವ ಗುತ್ತಿಗೆದಾರರು ಭಾವಚಿತ್ರ ಒಳಗೊಂಡಂತೆ ಗುರುತಿನ ಚೀಟಿ ನೀಡತಕ್ಕದ್ದು ಹಾಗೂ ಗುತ್ತಿಗೆ ನೌಕರರ ಸ್ವ ವಿವರದ ಕಡತವನ್ನು ಆಸ್ಪತ್ರೆ ಕಚೇರಿಯಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ.