ETV Bharat / state

ಯುಗಾದಿ ಹಬ್ಬಕ್ಕೆ ದೇವರ ದರ್ಶನವಿಲ್ಲ.. ಬಾಗಿಲು ಹಾಕಿಕೊಂಡ ದೇವಾಲಯಗಳು.. - bangalore lockdown latest news

ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ 21 ದಿನಗಳ ಕಾಲ ಇಡೀ ಭಾರತವನ್ನೇ ಲಾಕ್​ಡೌನ್ ಮಾಡಲಾಗಿದೆ. ಸದ್ಯ ನಗರದ ಅನೇಕ ದೇವಾಲಯಗಳಿಗೂ ಬೀಗ ಹಾಕಲಾಗಿದೆ. ಯುಗಾದಿ ಸಂಭ್ರಮ ಬಹುತೇಕ ಮರೆಯಾದಂತಿದೆ.

Temples are closed due to Lockdown...less Ugadi celebration
ಯುಗಾದಿ ಹಬ್ಬಕ್ಕೆ ದೇವರ ದರ್ಶನವಿಲ್ಲ....ದೇವಾಲಯಗಳು ಬಂದ್
author img

By

Published : Mar 25, 2020, 12:11 PM IST

ಬೆಂಗಳೂರು : ಎಲ್ಲೆಡೆ ವೈರಸ್​ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಗರದ ಅನೇಕ ದೇವಾಲಯಗಳಿಗೂ ಬೀಗ ಹಾಕಲಾಗಿದೆ. ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ 21 ದಿನಗಳ ಕಾಲ ಇಡೀ ಭಾರತವನ್ನೇ ಲಾಕ್​ಡೌನ್ ಮಾಡಲಾಗಿದೆ. ಇಂದು ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಸಂಭ್ರಮ-ಸಡಗರ ಮನೆಮಾಡಬೇಕಿತ್ತು. ಆದರೆ, ಎಲ್ಲೆಡೆ ವೈರಸ್​ ಭೀತಿ ಆವರಿಸಿದೆ. ಸದ್ಯ ನಗರದ ಬಹುತೇಕ ದೇವಾಲಯಗಳೂ ಬಾಗಿಲು ಹಾಕಿಕೊಂಡಿವೆ.

ಯುಗಾದಿ ಹಬ್ಬಕ್ಕೆ ದೇವರ ದರ್ಶನವಿಲ್ಲ..

ಪ್ರಮುಖ ದೇವಸ್ಥಾನಗಳಾದ ದೊಡ್ಡ ಗಣೇಶ, ಗವಿಗಾಂಧರೇಶ್ವರ, ಕಾಶೇಶ್ವರ ದೇವಾಲಯದಲ್ಲಿ ಹಬ್ಬದ ಕಳೆಯಿಲ್ಲ. ಹಾಲು, ಅಗತ್ಯ ವಸ್ತುಕೊಳ್ಳಲು ಬಂದವರು ಬಾಗಿಲ ಹೊರಗಿನಿಂದಲೇ ಇಣುಕಿ ದೇವರನ್ನು ನೋಡುವ ಪ್ರಯತ್ನ ಮಾಡ್ತಿದ್ದಾರೆ. ಈ ಯುಗಾದಿ ಏನಿದ್ದರೂ ಜನರ ಮನೆಗಳಲ್ಲಷ್ಟೇ ಸೀಮಿತವಾಗಿದೆ.

ಇತ್ತ ಕರ್ಫ್ಯೂ ನಡುವೆಯೂ ಹಬ್ಬದ ಹಿನ್ನೆಲೆಯಲ್ಲಿ ಗವಿಗಾಂಧರೇಶ್ವರ ದೇವಸ್ಥಾನದ ಬಾಗಿಲು ತೆರೆದಿತ್ತು. ಆದರೆ, ದೇವರಿಗೆ ಅಭಿಷೇಕ ಮಾಡಿ ನಂತರ ದೇವಸ್ಥಾನ ಮುಚ್ಚಲು ತೀರ್ಮಾನ ಮಾಡಲಾಗಿದೆ. ಕೆಲವೇ ಕೆಲ ಭಕ್ತರಿಗೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಯುಗಾದಿ ಸಂಭ್ರಮ ಮರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.