ETV Bharat / state

ಈ ಬಾರಿ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ.. ರಾಜ್ಯಕ್ಕೆ ಬರೆ ಎಳೆಯಲಿದೆ ಬಿಸಿಲು

author img

By

Published : Mar 13, 2022, 8:28 PM IST

ಕಳೆದ ನವೆಂಬರ್‌ನಲ್ಲಿ ಹೆಚ್ಚು ಮಳೆಯಾದ ಕಾರಣ ಚಳಿಗಾಲದ ಅವಧಿ ಇಳಿಮುಖವಾಯಿತು. ಈ ಹಿನ್ನೆಲೆಯಲ್ಲಿ ವಾಡಿಕೆಗಿಂತ ಮೊದಲೇ ಬೇಸಿಗೆ ಆರಂಭವಾಗಿದೆ. ಹೀಗಾಗಿ, ಮೂರು ತಿಂಗಳ ಬೇಸಿಗೆ ಕಾಲ ಈ ವರ್ಷ 4 ತಿಂಗಳು ಇರಲಿದೆ. ಮಾರ್ಚ್ 1ರಿಂದ ಆರಂಭವಾಗುವ ಬೇಸಿಗೆ ಮೇ 31 ರವರೆಗೆ ಇರುತ್ತಿತ್ತು. ಆದರೆ, ಈ ವರ್ಷ ಫೆಬ್ರವರಿ 2ನೇ ವಾರವೇ ಬೇಸಿಗೆಗೆ ಕಾಲಿಟ್ಟಿದೆ ಎಂದು ಮಾಹಿತಿ ನೀಡಿದೆ.

temperatures-rises-in-the-state
temperatures-rises-in-the-state

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗಿದ್ದು, ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರತೊಡಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ನವೆಂಬರ್‌ನಲ್ಲಿ ಹೆಚ್ಚು ಮಳೆಯಾದ ಕಾರಣ ಚಳಿಗಾಲದ ಅವಧಿ ಇಳಿಮುಖವಾಯಿತು. ಈ ಹಿನ್ನೆಲೆಯಲ್ಲಿ ವಾಡಿಕೆಗಿಂತ ಮೊದಲೇ ಬೇಸಿಗೆ ಆರಂಭವಾಗಿದೆ. ಹೀಗಾಗಿ ಮೂರು ತಿಂಗಳ ಬೇಸಿಗೆ ಕಾಲ ಈ ವರ್ಷ 4 ತಿಂಗಳು ಇರಲಿದೆ. ಮಾರ್ಚ್ 1ರಿಂದ ಆರಂಭವಾಗುವ ಬೇಸಿಗೆ ಮೇ 31 ರವರೆಗೆ ಇರುತ್ತಿತ್ತು. ಆದರೆ, ಈ ವರ್ಷ ಫೆಬ್ರವರಿ 2ನೇ ವಾರವೇ ಬೇಸಿಗೆಗೆ ಕಾಲಿಟ್ಟಿದೆ ಎಂದು ಮಾಹಿತಿ ನೀಡಿದೆ.

ವಾಡಿಕೆಯಂತೆ ಏಪ್ರಿಲ್ 2ನೇ ಅಥವಾ 3ನೇ ವಾರದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿತ್ತು. ಆದರೆ, ಈ ವರ್ಷ ಮಾರ್ಚ್ 3ನೇಯ ವಾರದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಉಷ್ಣಾಂಶ ಹೆಚ್ಚಾದಂತೆ ಮಾರ್ಚ್ 4ನೇ ವಾರದಲ್ಲಿ ಅಥವಾ ಅದಕ್ಕಿಂತ ಮುನ್ನವೇ ಪೂರ್ವ ಮುಂಗಾರು ಶುರುವಾಗಲಿದೆ. ಈ ತಿಂಗಳ ಮೂರನೇ ವಾರ ಅಥವಾ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಹೇಳಿದೆ.

ಉಷ್ಣಾಂಶದಲ್ಲಿ 1 ರಿಂದ 2 ಡಿಗ್ರಿ ಏರಿಕೆ: ಕಲಬುರಗಿ, ಬೀದರ್‌, ವಿಜಯಪುರ ಮತ್ತು ರಾಯಚೂರು ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮುಟ್ಟಲಿದೆ. ಏಪ್ರಿಲ್ ಮತ್ತು ಮೇನಲ್ಲಿ 45-46 ದಾಖಲಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರಾಸರಿ ಗರಿಷ್ಠ ತಾಪಮಾನದಲ್ಲಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದರೆ, ಈ ಬಾರಿ ಗರಿಷ್ಠ ತಾಪಮಾನದಲ್ಲಿ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಓದಿ: ಮಾ. 22ರಂದು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.