ETV Bharat / state

ರಸ್ತೆ ಅಪಘಾತ.. ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್​ಗೆ ಗಂಭೀರ ಗಾಯ

author img

By

Published : May 8, 2022, 4:15 PM IST

ರಸ್ತೆ ಅಪಘಾತದಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಟಿ, ಡಬ್ಬಿಂಗ್ ಕಲಾವಿದೆ ಸುನೇತ್ರಾ ಪಂಡಿತ್ ಗಾಯಗೊಂಡಿದ್ದಾರೆ.

television-actress-sunetra-pandit-injured-in-road-accident
ರಸ್ತೆ ಅಪಘಾತ.. ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್​ಗೆ ಗಂಭೀರ ಗಾಯ

ಬೆಂಗಳೂರು: ನಗರದಲ್ಲಿ ಕಳಪೆ ಕಾಮಗಾರಿಗಳಿಂದ ಉಂಟಾದ ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೈಕ್​ನಲ್ಲಿ ತೆರಳುತ್ತಿದ್ದಾಗ ಕನ್ನಡ ಕಿರುತೆರೆಯ ಖ್ಯಾತ ನಟಿ, ಡಬ್ಬಿಂಗ್ ಕಲಾವಿದೆ ಸುನೇತ್ರಾ ಪಂಡಿತ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ.

'ಸಿಲ್ಲಿ ಲಲ್ಲಿ' ಖ್ಯಾತಿಯ ಸುನೇತ್ರಾ ಪಂಡಿತ್ ನಿನ್ನೆ ತಡರಾತ್ರಿ ಶೂಟಿಂಗ್ ಮುಗಿಸಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಗರದ ಬಸವನಗುಡಿ ಬಳಿಯ ಎನ್.ಆರ್ ಕಾಲೋನಿಯಲ್ಲಿ ಹಂಪ್ ಬಳಿಯೇ ಇದ್ದ ರಸ್ತೆ ಗುಂಡಿ ಕಾಣದೆ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

television-actress-sunetra-pandit-injured-in-road-accident
ಆಸ್ಪತ್ರೆಯಲ್ಲಿ ನಟಿ ಸುನೇತ್ರಾ ಪಂಡಿತ್

ಅವೈಜ್ಞಾನಿಕ ಹಂಪ್ ಹಾಗೂ ರಸ್ತೆ ಗುಂಡಿಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಮಕ್ಕಳನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಮೋಹನ್ ಜುನೇಜಾ: ವಿಧಿಯಾಟಕ್ಕೆ ಬಲಿಯಾದ ಹಾಸ್ಯ ನಟನ ಜೀವಮಾನದ ಕನಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.