ETV Bharat / state

ಮತ್ತೆ ಮುಸ್ಲಿಂರಿಗೆ ಕಾಂಗ್ರೆಸ್ ಯಾವ ಒಬಿಸಿಯಿಂದ ಕಿತ್ತು ಮೀಸಲಾತಿ ಕೊಡುತ್ತೀರಿ: ತೇಜಸ್ವಿ ಸೂರ್ಯ ಪ್ರಶ್ನೆ - ಮೋದಿ ಸರ್ಕಾರ

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮೀಸಲಾತಿ ಕುರಿತಾಗಿ ಕಾಂಗ್ರೆಸ್​ ಪಕ್ಷವನ್ನು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

bjp
ಸಂಸದ ತೇಜಸ್ವಿ ಸೂರ್ಯ
author img

By

Published : Mar 28, 2023, 5:09 PM IST

ಮೀಸಲಾತಿ ಕುರಿತು ಮಾತನಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಮತ್ತೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎಂದಿರುವ ಕಾಂಗ್ರೆಸ್ ಯಾವ ಒಬಿಸಿ ಮೀಸಲಾತಿಯಿಂದ‌ ಕಿತ್ತು ವಾಪಸ್​ ಕೊಡ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ವಾಪಸ್​ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿಕೆಶಿ ಹೇಳುತ್ತಿದ್ದಾರೆ. ಆದರೆ ಯಾವ ಒಬಿಸಿ ಮೀಸಲಾತಿಯಿಂದ ಕಿತ್ತು ಮುಸ್ಲಿಂರಿಗೆ ಮೀಸಲಾತಿ ಕೊಡುತ್ತೀರಿ. ಯಾರಿಂದ ಕಿತ್ತು ಮುಸ್ಲಿಂರಿಗೆ 4% ಮೀಸಲಾತಿ ಕೊಡುತ್ತೀರಿ. ಇದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್​ನಿಂದ ಒಬಿಸಿ ವಿರುದ್ಧ ಪಿತೂರಿ- ಸಂಸದ ತೇಜಸ್ವಿ ಸೂರ್ಯ.. ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಆಳಕ್ಕೆ ಕೊಂಡೊಯ್ಯುವ ಐತಿಹಾಸಿಕ‌ ಯತ್ನವನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿದೆ. ಆ ಮೂಲಕ‌ ಕಾಂಗ್ರೆಸ್ ರಾಜಕಾರಣದ ಬಗ್ಗೆ ಅಸಹ್ಯ ತರುತ್ತಿದೆ. ಒಬಿಸಿಗೆ ನೀಡಿದ ಮೀಸಲಾತಿ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಇದ್ದ 4% ರದ್ದು ಮಾಡಿರುವುದನ್ನು ಅವರಿಗೆ ಸಹಿಸಲು, ಜೀರ್ಣ ಮಾಡಿಕೊಳ್ಳು ಸಾಧ್ಯವಾಗುತ್ತಿಲ್ಲ. ನಾವು ಬಂದರೆ 13% ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಆಧಾರದಲ್ಲಿ ಮೀಸಲಾತಿ ನೀಡುತ್ತೇವೆ ಎಂದಿದ್ದಾರೆ. ಇದು ಒಬಿಸಿಗೆ ಮಾಡುವ ಅನ್ಯಾಯವಾಗಿದೆ. ನಿರಂತರವಾಗಿ ಒಬಿಸಿ ಸಮುದಾಯದ ವಿರುದ್ಧ ಕಾಂಗ್ರೆಸ್ ಪಿತೂರಿ ‌ಮಾಡುತ್ತಿದೆ ಎದುರು ಕಿಡಿಕಾರಿದರು.

1954-2018 ರ ವರೆಗೆ ಒಬಿಸಿ ಆಯೋಗಕ್ಕೆ ಸಂವಿಧಾನದ ದರ್ಜೆ ಕೊಡುವ ಕೆಲಸ ಮಾಡಿರಲಿಲ್ಲ‌‌.‌ ಮೋದಿ ಸರ್ಕಾರ ಬಂದ ಬಳಿಕ ಸಂವಿಧಾನದ ಸ್ಥಾನಮಾನ ನೀಡಿತ್ತು. ಕಾಂಗ್ರೆಸ್ ಗೆ ಹಿಂದೂ ಸಮುದಾಯದ ಮೇಲೆ ಏಕೆ ಇಷ್ಟು ಆಕ್ರೋಶ ಇದೆ?. ಅವರಿಗೆ ಹಿಂದುಳಿದ ಸಮುದಾಯದ ಮೇಲೆ ಏಕೆ ದ್ವೇಷ?. ಮಂಡಲ್ ಕಮಿಷನ್ ಬಗ್ಗೆನೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ದಶಕಗಳಿಂದ ಮೆಡಿಕಲ್ ಶಿಕ್ಷಣದಲ್ಲಿ 27% ಒಬಿಸಿಗೆ ಮೀಸಲಾತಿ ಸಿಗಬೇಕು ಎಂಬ ಬೇಡಿಕೆ ಇದೆ. ಆದರೆ ಕಾಂಗ್ರೆಸ್ ಮಾಡಿರಲಿಲ್ಲ. ಇದನ್ನೂ ಮೋದಿ ಸರ್ಕಾರ ಮಾಡಿದೆ. ಸಾಂವಿಧಾನಿಕವಾಗಿ ಒಬಿಸಿಗೆ ಸಿಗಬೇಕಾದ ಹಕ್ಕನ್ನು ಕಾಂಗ್ರೆಸ್ ಕಿತ್ತು, ಮುಸ್ಲಿಂ‌ ಸಮುದಾಯಕ್ಕೆ ನೀಡುವ ಮೂಲಕ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

2012ರಲ್ಲಿ ಮತ್ತೆ 4.5% ಮುಸ್ಲಿಂಗೆ ಮೀಸಲಾತಿ ಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ಒಬಿಸಿಯಿಂದಲೇ ತರುತ್ತೇವೆ ಎಂದಿದ್ದರು. ಕಾಂಗ್ರೆಸ್ ಪಾರ್ಟಿಯ ಮೆಂಟಾಲಿಟಿ ಒಬಿಸಿ ವಿರುದ್ಧವಾದ ಮೆಂಟಾಲಿಟಿಯಾಗಿದೆ. ಒಬಿಸಿ ನಾಯಕರೆಲ್ಲರೂ ಕಾಂಗ್ರೆಸ್ ನ್ನು ವಿರೋಧಿಸಿದ ನಾಯಕರಾಗಿದ್ದವರು. ಗಾಂಧಿ ಕುಟುಂಬ ಒಬಿಸಿಯನ್ನು ವಿರೋಧಿಸುತ್ತದೆ. ದೇವರಾಜ ಅರಸರನ್ನು ಕಾಂಗ್ರೆಸ್ ಅಪಮಾನಿಸಿತ್ತು. ಕಾಂಗ್ರೆಸ್ ಗೆ ಕೇಳುವ ಮುಖ್ಯ ಪ್ರಶ್ನೆ ಎಸ್ ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂಬ ಬೇಡಿಕೆ ಇತ್ತು. ಆದರೆ ಕಾಂಗ್ರೆಸ್ ಆರು ವರ್ಷ ಆಡಳಿತದಲ್ಲಿ ಇದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಅವರು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಅಹಿಂದದಲ್ಲಿ ಕೇವಲ 'ಅ' ಮಾತ್ರ ಉಳಿದಿದೆ- ತೇಜಸ್ವಿ ಸೂರ್ಯ: ಸಾಮಾಜಿಕ ವಿರೋಧಿ ಮೀಸಲಾತಿ ನೀತಿ ಇತ್ತು. ಅದನ್ನು ಬೊಮ್ಮಾಯಿ ಸರ್ಕಾರ ಸರಿಪಡಿಸಿದೆ. ಅವರ ವೋಟ್ ಬ್ಯಾಂಕ್ ಗೆ ಈಗ ಏಟು ಬಿದ್ದಿದೆ. ಕಾಂಗ್ರೆಸ್ ನ ಅಹಿಂದ ರಾಜಕಾರಣದಲ್ಲಿ ಈಗ 'ಹಿಂ'ನೂ ಉಳಿದಿಲ್ಲ, 'ದ'ನೂ ಉಳಿದಿಲ್ಲ. ಕೇವಲ 'ಅ' ಮಾತ್ರ ಉಳಿದಿದೆ ಎಂದು ವಾಗ್ದಾಳಿ ನಡೆಸಿದರು. ವೋಟ್ ಬ್ಯಾಂಕ್ ಗಟ್ಟಿ ಮಾಡಲು ಕಾಂಗ್ರೆಸ್ ಮುಸ್ಲಿಂರಿಗೆ ಮೀಸಲಾತಿ ಕಲ್ಪಿಸಿದೆ. ಒಬಿಸಿಯಿಂದ ಕಿತ್ತು ಮತ್ತೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಎಲ್ಲರಿಗೂ ಒಂದೇ: ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಸ್ಪಷ್ಟ ಇದೆ. ಯಾವುದೇ ಜನಪ್ರತಿನಿಧಿಗಳಿಗೆ 2 ವರ್ಷ ಸಜೆ ಆದರೆ ಆಟೋಮೇಟಿಕ್ ಆಗಿ ಅನರ್ಹತೆ ಆಗುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಎಂದರು. ಬಿಜೆಪಿ ನೆಹರೂ ಓಲೇಕಾರ ಅನರ್ಹಗೊಳಿಸದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾನೂನು ಸ್ಪಷ್ಟ ಇದೆ. ಅವರನ್ನು ಯಾರು ಅನರ್ಹ ಮಾಡಬೇಕಾಗಿದೆಯೋ ಅವರ ಬಳಿ ನೀವು ಪ್ರಶ್ನೆ ಮಾಡಬೇಕು ಎಂದು ಸಂಸದರು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಪ್ರೇರಿತ ಪ್ರತಿಭಟನೆ- ಛಲವಾದಿ ನಾರಾಯಣಸ್ವಾಮಿ : ಬಿಜೆಪಿ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸದಾಶಿವ ಆಯೋಗ ಒಳಮೀಸಲಾಗಿ ಕೊಡಬೇಕು ‌ಎಂದಿದೆ. ಸ್ಪರ್ಶಿಯರನ್ನು ಎಸ್ ಸಿ ಮೀಸಲಾತಿಯಿಂದ ತೆಗೆಯಬೇಕು ಎಂದು ಆಗ್ರಹ ಇತ್ತು. ಆದರೆ ನಾವು ಅದನ್ನು ಮಾಡಿಲ್ಲ. ನಾವು ಹೆಚ್ಚು ಮಾಡಿ ಒಳಮೀಸಲಾತಿ ಕೊಟ್ಟಿದ್ದೇವೆ. ಬಂಜಾರ ಸಮುದಾಯದವರ ವರ್ತನೆಗೆ ಸಕಾರಣ ಇಲ್ಲ. ಯಾರು ಬೀದಿಗೆ ಇಳಿದಿದ್ದಾರೋ ಅವರು ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿದ್ದಾರೆ ಎಂಬುದದನ್ನು ಹೇಳಬೇಕು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರೇರಿತ ಪ್ರತಿಭಟನೆ ಆಗಿದೆ ಎಂದು ಆರೋಪಿಸಿದರು.

ಸದಾಶಿವ ಆಯೋಗ ಸ್ಪರ್ಶೀಯರಿಗೆ 3% ಒಳಮೀಸಲಾತಿಗೆ ಶಿಫಾರಸು ಮಾಡಿತ್ತು. ಆದರೆ ನಾವು 4.5% ಒಳಮೀಸಲಾತಿ ನೀಡಿದ್ದೇವೆ. ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಬೇರೆಯವರನ್ನು ಪುಸಲಾಯಿಸಿ ಮಾಡಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಸದಾಶಿವ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ‌. ಅವರಿಗೆ ಆತಂಕ ಇರೋದು ಮೀಸಲಾತಿ ಪಟ್ಟಿಯಿಂದ ತಮ್ಮನ್ನ ತೆಗೆಯಲಾಗಿದೆ ಅಂತ. ನಾವು ಸದಾಶಿವ ಆಯೋಗವನ್ನು ಒಪ್ಪಿಲ್ಲ. ಇನ್ನೊಂದು ಗುಂಪು ಬಲಾಢ್ಯರು ನಮ್ಮ ಮೀಸಲಾತಿ ತಿಂತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಹೇಳಿದೆ. ಸದಾಶಿವ ಆಯೋಗ, ನಾಗಮೋಹನ್ ದಾಸ್ ಕಮಿಟಿ ಹೇಳಿರೋದೇ ಬೇರೆ. ಅವರ ಮೀಸಲಾತಿಗಿಂತ ಹೆಚ್ಚಿಗೆಯೇ ಕೊಡಲಾಗಿದೆ‌. ಆದ್ರೂ ಬೀದಿಗಿಳಿದು ಹೋರಾಟ ಮಾಡಲಾಗಿದೆ ಎಂದರು.

ಇದನ್ನೂ ಓದಿ: 'ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಣ ಫಿಕ್ಸ್ ಮಾಡಿ ಸರ್ಕಾರಿ ನೌಕರಿ ಕೊಡುವ ವ್ಯವಸ್ಥೆಗೆ ಇತಿಶ್ರೀ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.