ETV Bharat / state

ಬೆಂಗಳೂರಿನಲ್ಲಿ ಪಾರ್ಕಿಂಗ್ ಅವ್ಯವಸ್ಥೆ: ಸಂಚಾರಿ ಆಯುಕ್ತರಿಗೆ ಪತ್ರ ರವಾನಿಸಿದ ಟೆಕ್ಕಿ

ಬೆಂಗಳೂರಿನ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಟೆಕ್ಕಿಯೊಬ್ಬರು ಸಂಚಾರ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ನಗರದಲ್ಲಿ ಸಿಕ್ಕ ಸಿಕ್ಕ ಕಡೆ ವಾಹನ ಪಾರ್ಕ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಪತ್ರದಲ್ಲಿ ವಿವರಿಸಲಾಗಿದೆ.

Techie wrote letter to Traffic Commissioner
ಬೆಂಗಳೂರು
author img

By

Published : Jan 14, 2023, 2:31 PM IST

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪಾರ್ಕಿಂಗ್ ಅವ್ಯವಸ್ಥೆಯ ಕುರಿತು ಟೆಕ್ಕಿಯೊಬ್ಬರು ಸುದೀರ್ಘ ಪತ್ರ ಬರೆದಿದ್ದಾರೆ. ಈ - ಮೇಲ್ ಮೂಲಕ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂರಿಗೆ ರವಾನಿಸಿದ್ದಾರೆ. ಜೆಪಿ ನಗರದ ನಿವಾಸಿಯಾಗಿರುವ ಸಾಫ್ಟ್‌ವೇರ್ ಉದ್ಯೋಗಿ ಧನಂಜಯ ಪದ್ಮನಾಭಾಚಾರ್ ಎಂಬುವವರು ಬರೆದಿರುವ ಪತ್ರದಲ್ಲಿ ಬೆಂಗಳೂರಿನಲ್ಲಿ ಸಿಕ್ಕ ಸಿಕ್ಕ ಕಡೆ ವಾಹನ ಪಾರ್ಕ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ವಿವರಿಸಲಾಗಿದೆ.

Techie wrote letter to Traffic Commissioner
ಸಂಚಾರ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದ ಟೆಕ್ಕಿ

ನಾಗರಿಕರು ಯಾಕೆ ಶಿಕ್ಷೆ ಅನುಭವಿಸಬೇಕು?: ಸರ್ಕಾರ ಮತ್ತು ಮಹಾನಗರ ಪಾಲಿಕೆ ಸರಿಯಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿಲ್ಲ. ವಾಣಿಜ್ಯ ಮತ್ತು ವಸತಿ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಪ್ರತ್ಯೇಕವಾಗಿಲ್ಲ. ಶಾಪಿಂಗ್ ಗೆ ಹೋಗುವ ಗ್ರಾಹಕರು ತಮ್ಮ ವಾಹನಗಳನ್ನ ಅಂಗಡಿಗಳ ಮುಂದೆ ನಿಲ್ಲಿಸುತ್ತಿದ್ದಾರೆ. ಸರ್ಕಾರ ಮತ್ತು ಪಾಲಿಕೆ ಮಾಡುವ ಈ ತಪ್ಪಿನಿಂದಾಗಿ ನಾಗರಿಕರು ಯಾಕೆ ಶಿಕ್ಷೆ ಅನುಭವಿಸಬೇಕು? ಎಂದು ಪ್ರಶ್ನಿಸಲಾಗಿದೆ.

'ಬಿಬಿಎಂಪಿಯ ಪ್ರಕಾರ ವಾಣಿಜ್ಯ ಕಟ್ಟಡ ಮತ್ತು ಅಂಗಡಿ ಮುಂದೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಆದರೆ ಬಿಬಿಎಂಪಿ ಕಚೇರಿ ಹಾಗೂ ಸರ್ಕಾರಿ ಕಚೇರಿಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಖಾಸಗಿ ಕಂಪನಿಗಳಿಗೆ ಭೇಟಿ ನೀಡಿದಾಗ ಮಾಡಿದಾಗ ಅಲ್ಲಿಯೂ ಪಾರ್ಕಿಂಗ್ ಇರಲ್ಲ. ಇದೆಲ್ಲದರ ಪರಿಣಾಮ ಸಾರ್ವಜನಿಕರ ಮೇಲೆ ಆಗುತ್ತಿದೆ. ತೆರಿಗೆ ಕಟ್ಟಿದರೂ ವಾಹನ ಸವಾರರು ಬಹುದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಭ್ರಷ್ಟಾಚಾರ ತಡೆ ಸಾಧ್ಯವಾಗುತ್ತಿಲ್ಲ: ಅಲ್ಲದೇ ಹೆಚ್ಚು ಜನ ಪೊಲೀಸರು ಬಾಡಿವೋರ್ನ್ ಕ್ಯಾಮರಾ ಧರಿಸುತ್ತಿಲ್ಲ. ಇದರಿಂದ ಭ್ರಷ್ಟಾಚಾರ ತಡೆ ಸಾಧ್ಯವಾಗುತ್ತಿಲ್ಲ ಎಂದು ಸಹ ಪತ್ರದಲ್ಲಿ ಉಲ್ಲೇಖಿಸಿರುವ ಧನಂಜಯ್ ಪದ್ಮನಾಭಾಚಾರ್ ಇ-ಮೇಲ್ ಮೂಲಕ ಸಂಚಾರಿ ವಿಶೇಷ ಆಯುಕ್ತ ಎಂ.ಎ. ಸಲೀಂ ಅವರಿಗೆ ಮನವಿ ಮಾಡಿದ್ದಾರೆ.

ಪೊಲೀಸ್ ಆಯುಕ್ತರ ಸಭೆ‌: ಬೆಂಗಳೂರು ನಗರದಲ್ಲಿ ವರ್ಷದಿಂದ‌ ವರ್ಷಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಮುಂದಿನ 6 ತಿಂಗಳಲ್ಲಿ ಸಂಚಾರಿ ದಟ್ಟಣೆ ಕಿರಿಕಿರಿಗೆ ಕಡಿವಾಣ ಹಾಕಲು ಪ್ರಧಾನಿ ಸೂಚನೆ‌ ನೀಡಿದ್ದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ‌‌ ನಡೆಸಿದ್ದರು. ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಸೇರಿದಂತೆ ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಸಿಲ್ಕ್ ಬೋರ್ಡ್, ಜಯದೇವ, ಹೆಬ್ಬಾಳ, ಕೆ.ಆರ್‌.ಪುರಂ, ಗೊರಗುಂಟೆಪಾಳ್ಯ ಹಾಗೂ ಮೈಸೂರು ರಸ್ತೆ ಸೇರಿದಂತೆ 10 ಜಂಕ್ಷನ್​ಗಳ‌ ಪಟ್ಟಿ ಸಿದ್ದಪಡಿಸಿ ಪೊಲೀಸ್ ಆಯುಕ್ತರಿಗೆ ಟ್ರಾಫಿಕ್‌ ಆಯುಕ್ತರು​ ಮಾಹಿತಿ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್​ಬಿ, ಬೆಸ್ಕಾಂ, ನಗರ ಪೊಲೀಸರ ಸಭೆ ನಡೆದಿತ್ತು. ‌ಸುಗಮ ಸಂಚಾರ ನಿರ್ಮಾಣ ಕ್ರಮಗಳ ಬಗ್ಗೆ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತರ ಸಭೆ‌

ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ: ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿಯಿಂದ ದಂಪತಿ ಬಳಿ ವಸೂಲಿ ಮಾಡಿ ಅಮಾನತ್ತಾದ ಪ್ರಕರಣ ಬಳಿಕ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು ನೈಟ್ ರೌಂಡ್ಸ್ ಪೊಲೀಸರು ಮಾನಿಟರ್​ಗೆ ಹೊಸ ಪ್ಲಾನ್ ಮಾಡಿದ್ದಾರೆ. ಪದೇ ಪದೆ ನೈಟ್ ಪೊಲೀಸ್ ಸಿಬ್ಬಂದಿ ಮೇಲೆ ಕೇಳಿಬರುತ್ತಿರುವ ಆರೋಪ ಹಿನ್ನೆಲೆ ಈ ಪ್ಲಾನ್ ಮಾಡಿದ್ದು, ಟ್ರಾಫಿಕ್ ಪೊಲೀಸರ ರೀತಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡುತ್ತಿದ್ದಾರೆ. ಪೊಲೀಸರ ಮೇಲಿನ ಆರೋಪಗಳ ಬೆನ್ನಲ್ಲೇ ಇಂತಹದೊಂದು ಚಿಂತನೆ‌ ನಡೆಸಿರುವ ಇಲಾಖೆ ನಗರದ ಎಲ್ಲಾ ನೈಟ್ ಬೀಟ್​ನಲ್ಲಿರೋ ಪೊಲೀಸರಿಗೆ ಬಾಡಿವೋರ್ನ್​ ಕ್ಯಾಮರಾ ನೀಡಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಭ್ರಷ್ಟಾಚಾರ ತಪ್ಪಿಸಲು ಹೊಯ್ಸಳ ಮತ್ತು ಬೀಟ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.