ETV Bharat / state

ಐಎಂಎ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ, ತನಿಖೆಗಾಗಿ ಕೇರಳಕ್ಕೆ ತಂಡ.. ಸಚಿವ ಆರ್​​.ಅಶೋಕ್

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್‌ ಅವರು ಐಎಂಎ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿದೆ. ಈ ಪ್ರಕರಣ ಬೆಂಗಳೂರು‌ ಗ್ರಾಮಾಂತರದಲ್ಲಿ ಕಂಡು ಬಂದಿದ್ದು, ತನಿಖೆಗಾಗಿ ಕೇರಳಕ್ಕೆ ತಂಡ ಕಳುಹಿಸಲು‌ ಆದೇಶಿಸಿರುವುದಾಗಿ ಜಿಲ್ಲಾ ಉಸ್ತು ಸಚಿವರೂ ಆಗಿರುವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್‌
author img

By

Published : Sep 25, 2019, 4:24 PM IST

ಬೆಂಗಳೂರು: ರಾಜ್ಯದಲ್ಲಿ ಐಎಂಎ ಕಂಪನಿ ರೀತಿ ಆಮಿಷ ತೋರಿಸಿ ವಂಚಿಸಿರುವ ಮತ್ತೊಂದು ಜಾಲ ಬೆಂಗಳೂರು‌ ಗ್ರಾಮಾಂತ ಜಿಲ್ಲೆಯಲ್ಲಿ ಕಂಡು ಬಂದಿದ್ದು, ತನಿಖೆಗಾಗಿ ಕೇರಳಕ್ಕೆ ತಂಡವನ್ನು ಕಳುಹಿಸಲು‌ ಆದೇಶಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಂಎ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್​​ಪಿ ರವಿ ಡಿ. ಚೆನ್ನಣ್ಣವರ್ ಜೊತೆ ಈ ಸಂಬಂಧ ಮಾತನಾಡಿದ್ದು, ಎಲ್ಲೋ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್, ಫೈನಾನ್ಸ್ ಅಂಡ್ ಅರ್ನಿಂಗ್ಸ್ ಲಿಮಿಟೆಡ್, ಲಾಗ್ ಇನ್ ಇಂಡಿಯಾ ಕಂಪನಿಗಳು ಗ್ರಾಹಕರಿಂದ ಒಬ್ಬೊಬ್ಬರಿಂದ 2.5 ಲಕ್ಷ ರೂ. ವಸೂಲಿ ಮಾಡಿವೆ.

ಪ್ರತಿ ತಿಂಗಳು 20 ರಿಂದ 25 ಲಕ್ಷ ರೂ. ಸಂಗ್ರಹ ಮಾಡಲಾಗಿದೆ. ಈಗಾಗಲೇ 40 ರಿಂದ 50 ಕೋಟಿ ರೂ.‌ ಸಂಗ್ರಹಿಸಲಾಗಿದೆ. ರೆಮಿತ್ ಮಲ್ಹೋತ್ತಾ, ಜೋಜು ಥಾಮಸ್, ನಾಡಿ ನಾಯರ್ ಲಕ್ಷ್ಮಿ ಸುರೇಖಾ, ಆಯಿಷಾ ಸಿದ್ದಿಕಿ ವಂಚನೆ ಮಾಡಿದ್ದಾರೆ. ಈ ಮೂರು ಕಂಪನಿಗಳಿಂದ ಭಾರೀ ವಂಚನೆ ನಡೆದಿದ್ದು, ಕೇರಳಕ್ಕೆ ತಂಡ ಕಳುಹಿಸಲು ಪೊಲೀಸರ ಜೊತೆ ಚರ್ಚೆ ನಡೆಸಿ, ಈಗಾಗಲೇ ಆದೇಶ ಮಾಡಿದ್ದೇನೆ. ನಮ್ಮ ಸರ್ಕಾರ ಇಂತಹ ಜಾಲ ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.

ಐಎಂಎ ರೀತಿ ಮತ್ತೊಂದು ಪ್ರಕರಣ ಪತ್ತೆ.. ಸಚಿವ ಆರ್​.ಅಶೋಕ್

ಐಎಂಎ ಆಸ್ತಿ ಮುಟ್ಟುಗೋಲು:

ಐಎಂಎ ಸಂಸ್ಥೆಗೆ ಸೇರಿದ ಎಲ್ಲ 21,0073,205 (21ಕೋಟಿ ) ರೂ. ಮೌಲ್ಯದ 17 ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಂದಾಯಾಧಿಕಾರಿಗಳಿಗೆ ಆದೇಶಿಸಿದ್ದೇವೆ. ಇಂದಿನಿಂದಲೇ ಆಸ್ತಿಮುಟ್ಟುಗೋಲು ಪ್ರಕ್ರಿಯೆ ಜಾರಿಯಾಗುತ್ತದೆ. ಐಎಂಎ ಸಂಸ್ಥೆಗೆ ಸೇರಿದ 2.85 ಕೋಟಿ ರೂ. ನಗದು ಹಾಗೂ 8 ಕೋಟಿ ರೂ. ಮೌಲ್ಯದ ಡಿಡಿಗಳು ಹಾಗೂ 59 ಲಕ್ಷ ಮೌಲ್ಯದ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ. 300 ಕೆಜಿ ತೂಕದ 5880 ನಕಲಿ ಚಿನ್ನದ ಬಿಸ್ಕತ್ , 2ಕೆಜಿ ಚಿನ್ನ ಹಾಗೂ 374ಗ್ರಾಂ ತೂಕದ ಬಂಗಾರದ ಗಟ್ಟಿ, 300 ಬೆಳ್ಳಿ ನಾಣ್ಯಗಳನ್ನು 91ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ಸಹ ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Intro:

ಬೆಂಗಳೂರು: ರಾಜ್ಯದಲ್ಲಿ ಐಎಂಎ ಕಂಪನಿ ರೀತಿ ಆಮಿಷ ತೋರಿಸಿ ವಂಚಿಸುವ ಜಾಲ ಬೆಂಗಳೂರು‌ ಗ್ರಾಮಾಂತರದಲ್ಲಿ ಕಂಡುಬಂದಿದ್ದು ತನಿಖೆಗಾಗಿ ಕೇರಳಕ್ಕೆ ತಂಡವನ್ನು ಕಳುಹಿಸಲು‌ ಆದೇಶಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಐಎಂಎ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ ಚೆನ್ನಣ್ಣವರ್ ಜೊತೆ ಈ ಸಂವಂಧ ಮಾತಾಡಿದ್ದು, ಯೆಲ್ಲೋ ಎಕ್ಸ್ ಪ್ರೆಸ್ ಪ್ರೈವೇಟ್ ಲಿಮಿಟೆಡ್,ಫೈನಾನ್ಸ್ ಅಂಡ್ ಅರ್ನಿಂಗ್ಸ್ ಲಿಮಿಟೆಡ್, ಲಾಗ್ ಇನ್ ಇಂಡಿಯಾ ಕಂಪನಿಗಳು ಗ್ರಾಹಕರಿಂದ ಒಬ್ಬೊಬ್ಬರಿಂದ 2.5 ಲಕ್ಷ ವಸೂಲಿ ಮಾಡಿವೆ.ಪ್ರತಿ ತಿಂಗಳು 20 ರಿಂದ 25 ಲಕ್ಷ ರೂ. ಸಂಗ್ರಹ ಮಾಡಲಾಗಿದೆ.ಈಗಾಗಲೇ 40 ರಿಂದ 50 ಕೋಟಿ ರೂ.‌ಸಂಗ್ರಹಿಸಲಾಗಿದೆ.ರೆಮಿತ್ ಮಲ್ಹೋತ್ತಾ, ಜೋಜು ಥಾಮಸ್, ನಾಡಿ ನಾಯರ್ ಲಕ್ಷ್ಮೀ ಸುರೇಖಾ, ಆಯಿಷಾ ಸಿದ್ದಿಕಿ ವಂಚನೆ ಮಾಡಿದ್ದಾರೆ.ಈ ಮೂರು ಕಂಪೆನಿಗಳಿಂದ ಭಾರೀ ವಂಚನೆ ನಡೆದಿದ್ದು,ಕೇರಳಕ್ಕೆ ತಂಡ ಕಳುಹಿಸಲು ಪೊಲೀಸರ ಜೊತೆ ಚರ್ಚೆ ನಡೆಸಿ ಈಗಾಗಲೇ ಆದೇಶ ಮಾಡಿದ್ದೇನೆ.ನಮ್ಮ ಸರ್ಕಾರ ಇಂತಹ ಜಾಲ ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.

ಐಎಂಎ ಆಸ್ತಿ ಮುಟ್ಟುಗೋಲು:

ಐಎಂಎ ಸಂಸ್ಥೆಗೆ ಸೇರಿದ ಎಲ್ಲ 21,0073,205(21ಕೋಟಿ ) ಮೌಲ್ಯದ 17 ಸ್ಥಿರಾಸ್ಥಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಂದಾಯಾಧಿಕಾರಿಗಳಿಗೆ ಆದೇಶಿಸಿದ್ದೇವೆ‌. ಇಂದಿನಿಂದಲೇ ಆಸ್ತಿಮುಟ್ಟುಗೋಲು ಪ್ರಕ್ರಿಯೆ ಜಾರಿಯಾಗುತ್ತದೆ. ಐಎಂಎ ಸಂಸ್ಥೆಗೆ ಸೇರಿದ 2.85 ಕೋಟಿ ರೂ.ನಗದು ಹಾಗೂ 8 ಕೋಟಿ ರೂ ಮೌಲ್ಯದ ಡಿಡಿಗಳು ಹಾಗೂ 59ಲಕ್ಷ ಮೌಲ್ಯದ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ.300 ಕೆಜಿ ತೂಕದ 5880ನಕಲಿ ಚಿನ್ನದ ಬಿಸ್ಕತ್ , 2ಕೆಜಿ ಚಿನ್ನ ಹಾಗೂ 374ಗ್ರಾಂ ತೂಕದ ಬಂಗಾರದ ಗಟ್ಟಿ,300ಬೆಳ್ಳಿ ನಾಣ್ಯಗಳನ್ನು91ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ಸಹ ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಜನ ದಯಮಾಡಿ ಈ ರೀತಿಯ ಮೋಸದ ಜಾಲದ ಕಂಪೆನಿಯಲ್ಲಿ ಸಿಲುಕಬೇಡಿ.ಇಂತಹ ಕಂಪೆನಿಗಳು ಕಂಡು ಬಂದರೆ ದಯಮಾಡಿ ಇಂತವುಗಳ ಬಗ್ಗೆ ಮಾಹಿತಿ ನೀಡಿ ಎಂದು‌ ಸಾರ್ವಜನಿಕರಿಗೆ ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.