ಬೆಂಗಳೂರು: ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಬೋಧನೆಯನ್ನು ಈ ವರ್ಷದಿಂದಲೇ ಮಾಡು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಸಮಿತಿ ರಚಿಸಲಾಗುವುದು ಎಂದು ಸದನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸದಸ್ಯ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದರು.
ವಿಧಾನ ಪರಿಷತ್ನಲ್ಲಿ ಈ ವಿಚಾರವನ್ನು ಸದಸ್ಯ ಎಂ ಕೆ ಪ್ರಾಣೇಶ್ ಕೇಳಿದರು. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ?. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಮೊದಲು ಇದ್ದ ಆಸಕ್ತಿ ಈಗ ಯಾಕೆ ಇಲ್ಲ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಾಬಾ ಬುಡನ್ ಗಿರಿ ಎಂಬ ಹೆಸರನ್ನು ದತ್ತಾತ್ರೇಯ ಪೀಠ ಎಂದು ಪಠ್ಯ ಪುಸ್ತಕದಲ್ಲಿ ಬದಲಾಯಿಸ ಬೇಕು ಇತಿಹಾಸದ ಹೆಸರು ಮುಂದುವರೆಸಬೇಕು ಎನ್ನುವ ಪ್ರಸ್ತಾಪ ಇದೆ. ಇತಿಹಾಸದ ತಪ್ಪುಗಳನ್ನು ಪಠ್ಯದಲ್ಲಿ ಸರಿಮಾಡುವ ಕೆಲಸ ಮಾಡುತ್ತೇವೆ. ಬಾಬಾ ಬುಡನ್ ಗಿರಿ ಹೆಸರನ್ನು ಈಗ ಬದಲಾವಣೆ ಮಾಡಲಾಗಿದೆ ಎಂದರು.
ಇದನ್ನೂ ಓದಿ : 'ನಾನು ಆಣೆ ಪ್ರಮಾಣ ಮಾಡಲು ಸಿದ್ದ': ಸುಮಲತಾ ಸವಾಲು ಸ್ವೀಕರಿಸಿದ ಶಾಸಕ ಪುಟ್ಟರಾಜು