ETV Bharat / state

ಮಕ್ಕಳ ಬ್ಯಾಗ್ ತಪಾಸಣೆ ವೇಳೆ ಶಿಕ್ಷಕರಿಗೆ ಆಘಾತ.. ಖಾಸಗಿ ಶಾಲಾ ಸಂಘಟನೆಗಳ ಮುಖ್ಯಸ್ಥರ ಸಲಹೆಯೇನು? - etv bharat kannada

ತರಗತಿಗೆ ಮಕ್ಕಳು ಮೊಬೈಲ್ ತರುತ್ತಿರುವ ಬಗ್ಗೆ ಶಿಕ್ಷಕರು ಇತ್ತೀಚೆಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸೂಚಿಸಿತ್ತು.

teachers-shocked-after-checking-bags-of-students
ಮಕ್ಕಳ ಬ್ಯಾಗ್ ತಪಾಸಣೆ ವೇಳೆ ಶಿಕ್ಷಕರಿಗೆ ಆಘಾತ: ಖಾಸಗಿ ಶಾಲಾ ಸಂಘಟನೆಗಳ ಮುಖ್ಯಸ್ಥರ ಸಲಹೆಯೇನು?
author img

By

Published : Nov 30, 2022, 5:54 PM IST

ಬೆಂಗಳೂರು: ನಗರದಲ್ಲಿ ಶಾಲಾ ಮಕ್ಕಳ ಬ್ಯಾಗ್​ನಲ್ಲಿ ಮೊಬೈಲ್ ತಪಾಸಣೆ ನಡೆಸಿದ ಶಿಕ್ಷಕರಿಗೆ ಆಘಾತ ಎದುರಾಗಿದೆ. ಬ್ಯಾಗ್​ನಲ್ಲಿ ಸಿಕ್ಕ ವಸ್ತುಗಳು ಶಿಕ್ಷಕರನ್ನು ದಂಗುಬಡಿಸಿವೆ.

ನಗರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಲೈಟರ್, ಸಿಗರೇಟ್‌, ವೈಟ್‌ನರ್‌ ಸಿಕ್ಕಿದೆ. ಎಲ್ಲಕ್ಕಿಂತ ಆಘಾತಕಾರಿ ಸಂಗತಿ ಎಂದರೆ ಕೆಲವರ ಬ್ಯಾಗ್​ನಲ್ಲಿ ಗರ್ಭನಿರೋಧಕ ಮಾತ್ರೆ(ಐ-ಪಿಲ್), ನೀರಿನ ಬಾಟಲಿಗಳಲ್ಲಿ ಆಸ್ಕೋಹಾಲ್ ಅಂಶ ಇರುವುದೂ ಬೆಳಕಿಗೆ ಬಂದಿದೆ. ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಇಂತಹ ವಸ್ತುಗಳನ್ನು ಕಂಡು ಶಾಲಾ ಆಡಳಿತ ಮಂಡಳಿ ದಂಗಾಗಿದೆ.

ತರಗತಿಗೆ ಮಕ್ಕಳು ಮೊಬೈಲ್ ತರುತ್ತಿರುವ ಬಗ್ಗೆ ಶಿಕ್ಷಕರು ಇತ್ತೀಚೆಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು.

ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳ ಬ್ಯಾಗ್ ತಪಾಸಣೆ ವೇಳೆ ಪತ್ತೆಯಾದ ವಸ್ತುಗಳ ಬಗ್ಗೆ ಆಯಾ ವಿದ್ಯಾರ್ಥಿಗಳ ಪಾಲಕರಿಗೆ ಅರ್ಥವಾಗುವ ರೀತಿ ಶಿಕ್ಷಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ತಪ್ಪು ಮಾಡಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಬದಲು ಅವರಿಗೆ ಸೂಕ್ತ ಕೌನ್ಸೆಲಿಂಗ್ ಕೊಡಿಸಲು ಶಾಲೆ ಆಡಳಿತ ಮಂಡಳಿಯವರು ಮತ್ತು ಪಾಲಕರು ಮುಂದಾಗಿದ್ದಾರೆ.

ವಿದ್ಯಾರ್ಥಿಗಳು ಇತ್ತೀಚೆಗೆ ಸಾಕಷ್ಟು ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ವಸ್ತುವೂ ತಕ್ಷಣಕ್ಕೆ ಕೈಗೆಟುಕುತ್ತದೆ. ಮೊಬೈಲ್ ಕ್ರಾಂತಿ ಹಾಗೂ ಅನಿಯಮಿತ ಇಂಟರ್​ನೆಟ್ ಬಳಕೆ ಮಕ್ಕಳನ್ನು ಸಾಕಷ್ಟು ವಿಚಾರಗಳ ಮೇಲೆ ಗಮನ ಸೆಳೆಯುವಂತೆ ಮಾಡುತ್ತದೆ. ಈ ಸಂದರ್ಭ ಅವರಿಗೆ ಶಿಕ್ಷೆ ವಿಧಿಸುವುದಕ್ಕಿಂತ, ವಸ್ತುಸ್ಥಿತಿ ಮನವರಿಕೆ ಮಾಡಿಕೊಳ್ಳುವುದು ಉತ್ತಮ ಎಂದು ಕಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಮ್ಯಾನೇಜ್​ಮೆಂಟ್ ಅಸೋಸಿಯೇಷನ್ ​​(RUPSA) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಕಾರ, ಆಧುನಿಕತೆಯ ಅಳವಡಿಕೆಯಿಂದ ಮಕ್ಕಳು ಮನಸ್ಸು ಕೆಡಿಸಿಕೊಳ್ಳುತ್ತಿದ್ದಾರೆ. ಅರಿವು ಮೂಡುವ ಮುನ್ನವೇ ಆಧುನಿಕತೆ ಇವರನ್ನು ಆವರಿಸಿಬಿಡುತ್ತಿದೆ. ಹಿಂದೆಲ್ಲಾ ಮಕ್ಕಳಿಗೆ ಕಾಡುತ್ತಿದ್ದ ವಿಚಾರಗಳು ಬೇರೆ, ಇಂದು ಕಾಡುವ ವಿಚಾರಗಳೇ ಬೇರೆಯಾಗಿವೆ. ಇದರಿಂದ ಪಠ್ಯಕ್ರಮದ ಜತೆ ಬದಲಾಗುವ ಮನೋಭಾವದ ಬಗೆಗೂ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕು ಎಂದಿದ್ದಾರೆ.

ಮಕ್ಕಳ ಮನೋವಿಕಾಸವಾಗುತ್ತಿದೆ. ಸಾಕಷ್ಟು ವಿಚಾರಗಳು ಅವರಿಗೆ ಅಗತ್ಯಕ್ಕೆ ಮುನ್ನವೇ ಲಭಿಸುತ್ತಿದೆ. ವಿವಿಧ ವಿಚಾರಗಳು ಅರ್ಥವಾಗುವ ಮುನ್ನವೇ ಇವರನ್ನು ಅಪಾರವಾಗಿ ಸೆಳೆಯುತ್ತಿವೆ. ಇದರಿಂದ ಶಿಕ್ಷಕರು, ಪಾಲಕರು ತಮ್ಮ ಬೆಳೆಯುವ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು. ವಿದೇಶಕ್ಕೆ ಸ್ಪರ್ಧೆ ನೀಡುವ ರೀತಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಅದರಂತೆ ಜೀವನಶೈಲಿ ಸಹ ಅನ್ನುವುದನ್ನು ಅರಿಯಬೇಕಿದೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಇದನ್ನೂ ಓದಿ: ಬಾಲಕನ ಮೇಲೆ ಪಿಟ್​ಬುಲ್ ನಾಯಿ ದಾಳಿ: ವಿದ್ಯಾರ್ಥಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.