ETV Bharat / state

ಶಿಕ್ಷಕರ ನೇಮಕಾತಿ ಗೊಂದಲ: ಮಹಿಳಾ ಅಭ್ಯರ್ಥಿಗಳಿಂದ ಸಿಎಂಗೆ ಮನವಿ - ETV bharat

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ಗೊಂದಲ ವಿಚಾರವಾಗಿ ಮಹಿಳಾ ಅಭ್ಯರ್ಥಿಗಳು ತಮ್ಮ ಪುಟ್ಟ ಮಕ್ಕಳ ಸಮೇತರಾಗಿ ಆರ್.ಟಿ.ನಗರ ಸಿಎಂ ನಿವಾಸಕ್ಕೆ ಬಂದು ಗೊಂದಲವನ್ನು ಪರಿಹರಿಸುವಂತೆ ಅಳಲು ತೋಡಿಕೊಂಡರು.

teachers recruiment confusion
ಶಿಕ್ಷಕರ ನೇಮಕಾತಿ ಗೊಂದಲ: ಮಹಿಳಾ ಅಭ್ಯರ್ಥಿಗಳಿಂದ ಸಿಎಂಗೆ ಮನವಿ
author img

By

Published : Nov 26, 2022, 9:59 PM IST

ಬೆಂಗಳೂರು: ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪ್ರಕ್ರಿಯೆ ಗೊಂದಲ ಸರಿಪಡಿಸುವಂತೆ ಮನವಿ ನೀಡಿ ಅಭ್ಯರ್ಥಿಗಳು ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ಬಳಿ ವಿನಂತಿಸಿಕೊಂಡರು. ವಿವಾಹವಾದ ಮಹಿಳಾ ಅಭ್ಯರ್ಥಿಗಳು ಗಂಡನ ಹೆಸರಿನೊಂದಿಗಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ ನೇಮಕಾತಿ ಅಧಿಸೂಚನೆಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ನೀಡಿರುವ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಳಲು ತೋಡಿದರು.

ಪದವೀದರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರಕ್ಕೆ ಸಿಎಂ ಭೇಟಿಗೆ ಬಂದಿದ್ದೇವೆ. 15 ಸಾವಿರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಸರ್ಕಾರ ಹೊರಡಿಸಿತ್ತು. ಜಾತಿ ಪ್ರಮಾಣಪತ್ರ ಕೊಡಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಿಲ್ಲ. 3000ಕ್ಕಿಂತ ಹೆಚ್ಚು ಮಹಿಳಾ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಿದ್ದಾರೆ. ಮೊದಲ ಲಿಸ್ಟ್‌ ನಲ್ಲಿ ಸೆಲೆಕ್ಟ್ ಆಗಿದ್ದಾರೆ. ಗಂಡನ ಆದಾಯ ಪತ್ರ ಬೇಕು, ತಂದೆಯ ಆದಾಯ ಪತ್ರ ಆಗುವುದಿಲ್ಲ ಎಂದು ಆಯ್ಕೆ ಪಟ್ಟಿಯಿಂದ ಕೈ ಬಿಡಲಾಗಿದೆ. ಡಿಡಿಪಿ ಆಫೀಸ್‌ನಲ್ಲಿ ಮೆರಿಟ್​ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಿದ್ದಾರೆ. ಈಗ ಮದುವೆ ಆಗಿರುವ ಹೆಣ್ಣು ಮಕ್ಕಳು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರಿಂದ ಉಡಾಪೆ ಉತ್ತರ: ಸರಿಯಾಗಿ ಸೂಚನೆ ನೀಡದೇ ಇರುವುದರಿಂದ ಗೊಂದಲ ಉಂಟಾಗಿದೆ. ಇದರಿಂದ 2,500 ಅಭ್ಯರ್ಥಿಗಳಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಮೆರಿಟ್ ಲಿಸ್ಟ್‌ನಲ್ಲಿ ಹೆಸರು ಇದ್ದಾಗಿಯೂ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರದ ಗೊಂದಲದಿಂದ ಅವಕಾಶ ವಂಚಿತರಾಗುತ್ತಿದ್ದೇವೆ. ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಅನೇಕರಿಗೆ ಮನವಿ ಕೊಟ್ಟಿದ್ದೇವೆ. ಶಿಕ್ಷಣ ಸಚಿವರು ಉಡಾಫೆಯಾಗಿ ಮಾತನಾಡಿದ್ದಾರೆ. ಇತ್ತ ಮುಖ್ಯಮಂತ್ರಿಗಳು ನಾನು ಮಧ್ಯಪ್ರವೇಶ ಆಗಲ್ಲ ಎಂದು ಉತ್ತರಿಸಿದ್ದಾರೆ. ಲೀಗಲ್ ಆಗಿ ಏನು ಆಗುತ್ತೋ ನೋಡಿ ಎಂದು ಸಿಎಂ ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೇಮಕಾತಿ ಅಧಿಸೂಚನೆ ಸರಿಯಾಗಿ ಹೊರಡಿಸಿಲ್ಲ. ಮುಂದೆ ಏನೇ ಆದರೂ ಅದಕ್ಕೆ ಸರ್ಕಾರವೇ ಜವಾಬ್ದಾರಿ. ಮುಖ್ಯಮಂತ್ರಿಗಳಿಗೆ ಮನವಿ ಮಾಡೋದು ಕೊನೆಯ ಆಯ್ಕೆಯಾಗಿತ್ತು. ಈಗ ನಮಗೆ ಬೇರೆ ಏನು ಆಯ್ಕೆಇಲ್ಲ. ಫ್ರೀಡಂ ಪಾರ್ಕ‌್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಅಭ್ಯರ್ಥಿಗಳು ಎಚ್ಚರಿಸಿದರು.

ಇದನ್ನೂ ಓದಿ: ಗೃಹ ರಕ್ಷಕದಳ ಸಿಬ್ಬಂದಿಯನ್ನು ನೋಟಿಸ್ ನೀಡದೆಯೂ ಅಮಾನತು ಮಾಡಬಹುದು : ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.