ಬೆಂಗಳೂರು : ಬಿಬಿಎಂಪಿ ವತಿಯಿಂದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಇಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕರ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಚಾಲನೆ ನೀಡಿದರು. ಸಮಾರಂಭದಲ್ಲಿ ವಿಶೇಷ ಆಯುಕ್ತ ಶ್ರೀರೆಡ್ಡಿ ಶಂಕರ ಬಾಬು, ಸಹಾಯಕ ಆಯುಕ್ತ ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಅದರಂತೆ ಹೆಚ್ಚು ಅಂಕ ಪಡೆದಿರುವ 12 ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಲಾಯಿತು.
ಇದೇ ಮೊದಲ ಬಾರಿಗೆ ನಗರ ಪಾಲಿಕೆಯಿಂದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ “ಉತ್ತಮ ಶಿಕ್ಷಕ" ಪ್ರಶಸ್ತಿ ಪತ್ರದೊಂದಿಗೆ 50,000 ರೂಪಾಯಿಗಳ ನಗದು ಬಹುಮಾನ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 60 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ 25,000 ರೂ. ನೀಡಲಾಯಿತು. ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 62 ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳನ್ನೊಳಗೊಂಡ ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ನೀಡಲಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಟ್ಟಿ
• ವಿಜಯನಗರ ಪ್ರೌಢಶಾಲೆಯ ಅರವಿಂದ್. ಎಂ ಶೇ.97.44ರಷ್ಟು ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಹೊಂದಿದ್ದಾನೆ. ಹೀಗಾಗಿ, ಆತನಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಗಂಗಾನಗರ ಪ್ರೌಢಶಾಲೆಯಲ್ಲಿ ಯಶಸ್ ಅಲಪ್ಪನವರ್ ಶೇ.96.66ರಷ್ಟು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹೊಂದಿದ್ದಾನೆ. ಹೀಗಾಗಿ, ಈತನಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಶ್ರೀರಾಮಪುರ ಪ್ರೌಢಶಾಲೆಯಲ್ಲಿ ಚಂದನ.ಎಂ ಶೇ. 94.88ರಷ್ಟು ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದರಿಂದ 25,000 ರೂ.ಗಳ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗ
• ಕ್ಲೀವ್‌ಲ್ಯಾಂಡ್ ಟೌನ್ ಪದವಿ ಪೂರ್ವ ಕಾಲೇಜಿನ ದಿವ್ಯಾ.ಪಿ ಶೇ. 98.16ರಷ್ಟು ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ, ಅವರಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಸಿದ್ರಾಬಿಲಾಲ್ ಎಂಬ ವಿದ್ಯಾರ್ಥಿ ಶೇ.97.16ರಷ್ಟು ಅಂಕಗಳನ್ನು ಪಡೆದಿದ್ದಾನೆ. ಹಾಗಾಗಿ, 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಅಲಿಯಾ ಮುಖಾರ್ ಎಂಬ ವಿದ್ಯಾರ್ಥಿ ಶೇ.96.66ರಷ್ಟು ಅಂಕಗಳನ್ನು ಪಡೆದಿದ್ದರಿಂದ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ
• ಬನ್ನಪ್ಪಪಾರ್ಕ್ ಪದವಿ ಪೂರ್ವ ಕಾಲೇಜಿನ ಶಾಲುಸಕ್ತಿ ಶೇ.99.16ರಷ್ಟು ಅಂಕಗಳನ್ನು ಪಡೆದಿದ್ದರಿಂದ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಜೋಗುಪಾಳ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿಯದರ್ಶಿನಿ ಎಸ್ ಹೆಚ್ ಶೇ.96.50ರಷ್ಟು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಬಂದಿದ್ದರಿಂದ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಬನ್ನಪ್ಪಪಾರ್ಕ್ ಪೂರ್ವ ಕಾಲೇಜಿನ ಅರ್ಚನಾ ಶೇ.95.66ರಷ್ಟು ಅಂಕಗಳನ್ನು ಪಡೆದ ತೃತೀಯ ವಿದ್ಯಾರ್ಥಿಗೆ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
ಪದವಿ ಪೂರ್ವ ಕಾಲೇಜು ಕಲಾ ವಿಭಾಗ
• ಬೈರವೇಶ್ವರನಗರ ಪದವಿ ಪೂರ್ವ ಕಾಲೇಜಿನಲ್ಲಿ ಸುಲೋಚನಾ ಸಿಂಹ ಡಿ ಶೇ.95.83ರಷ್ಟು ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ, ಇವರಿಗೆ 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಮಾಗಡಿ ರಸ್ತೆ ಕಾಲೇಜಿನ ನಂಜುಂಡ ಸ್ವಾಮಿ ಶೇ.94.66ರಷ್ಟು ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ, ಇವರಿಗೆ 30,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
• ಬನ್ನಪ್ಪಪಾರ್ಕ್ ಪದವಿ ಪೂರ್ವ ಕಾಲೇಜ್ನ ವಿದ್ಯಾರ್ಥಿ ಕಿರಣ್ ನಾಯಕ್ ಎಸ್ ಜಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ, ಇವರಿಗೆ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಲಾಯಿತು.
ಓದಿ: ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ.. ಬೆಲೆ ಏರಿಕೆ ಬಗ್ಗೆ ಬಾಯಿಬಿಡದ ವಿತ್ತ ಸಚಿವೆ..