ETV Bharat / state

ಅಧಿಕಾರಿಗಳ ವೇತನ ಕಡಿತಕ್ಕೆ ರಾಜ್ಯಪಾಲರು ಆದೇಶ ದಯಪಾಲಿಸಬೇಕಿತ್ತು; ಆಯನೂರು - BJP member Ayanur Manjunath

ನಮಗೆ ಗೋವು ಪೂಜನೀಯ ಪ್ರಾಣಿ, ನಾವು ಗೋವನ್ನು ಮಾತೆ ಎಂದು ಪೂಜಿಸುತ್ತೇವೆ. ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆ ಪರ ನಾನಿದ್ದೇನೆ. ಈ ಸದನದಲ್ಲಿ ಬಿಲ್ ಬರಲಿದೆ, ಅಂಗೀಕಾರವೂ ಆಗಲಿದೆ. ಪೂಜನೀಯ ಗೋವುಗಳನ್ನು ಕಾಪಾಡಿಕೊಳ್ಳುವ ರೀತಿ ನಾವು ಉಪನ್ಯಾಸಕರನ್ನೂ ಕಾಪಾಡಿಕೊಳ್ಳಬೇಕು..

BJP member Ayanur Manjunath
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್
author img

By

Published : Feb 8, 2021, 3:27 PM IST

ಬೆಂಗಳೂರು : ಗೋಹತ್ಯೆ ಬಿಲ್ ಪರ ನಾನಿದ್ದೇನೆ, ಅದು ಪಾಸ್ ಆಗಬೇಕು. ಗೋವುಗಳನ್ನು ಉಳಿಸಿಕೊಳ್ಳುವುದು ಮುಖ್ಯ, ಅದೇ ರೀತಿ ಶಿಕ್ಷಕರ ವರ್ಗವೂ ನನಗೆ ಮುಖ್ಯ. ನಮ್ಮ ಅತಿಥಿ ಉಪನ್ಯಾಸಕರನ್ನು ಉಳಿಸಿಕೊಳ್ಳಬೇಕಿದೆ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ವಿಧಾನಪರಿಷತ್​ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣವನ್ನು ಸಮರ್ಥಿಸಿಕೊಂಡರು. ನಾಲ್ಕು ಬಾರಿ ಸಿಎಂ ಆಗೋ ಯೋಗ ಯಡಿಯೂರಪ್ಪ ಅವರಿಗೆ ಇತ್ತು. ಆದರೆ, ನೆಮ್ಮದಿಯಾಗಿ ಆಡಳಿತ ನಡೆಸುವ ಯೋಗ ಸಿಗಲಿಲ್ಲ.

ಈ ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ನೆರೆಹಾನಿ ಸಂಭವಿಸಿತು. ಒಬ್ಬರೇ ನೆರೆಹಾನಿ ವೀಕ್ಷಣೆ ಮಾಡಿದರು. ಪರಿಹಾರ ಕಾರ್ಯಾಚರಣೆಗೆ ಅಗತ್ಯ ಕ್ರಮಕೈಗೊಂಡರು, ಅದಾಗುತ್ತಿದ್ದಂತೆ ಕೊರೊನಾ ಬಂತು. ಕೊರೊನಾಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಅಸಂಘಟಿತ ವಲಯಕ್ಕೆ ನೆರವು ನೀಡಲಾಯಿತು, ವಲಸೆ ಬಂದ ಕಾರ್ಮಿಕರ ರಕ್ಷಣೆ ಮಾಡಲಾಯಿತು ಎಂದರು.

ಓದಿ:ಚುನಾಯಿತ ಎಂಎಲ್ಎ, ಎಂಎಲ್ಸಿ ವಿರುದ್ಧ ರಾಜ್ಯ ಬಿಜೆಪಿ ಕ್ರಮ ತೆಗೆದುಕೊಳ್ಳುವಂತಿಲ್ಲ: ಕೆ.ಎಸ್.ಈಶ್ವರಪ್ಪ

ಕೊರೊನಾ ವೇಳೆ ಶತ-ಶತಮಾನದ ಅಸ್ಪೃಶ್ಯತೆಯ ಅನುಭವವಾಯಿತು. ನನ್ನ ಮನೆಯಲ್ಲೇ ನಾನು ಪ್ರತ್ಯೇಕವಾಗಿರಬೇಕಾಯಿತು. ಯಾರನ್ನೂ ಮುಟ್ಟುವಂತಿಲ್ಲ, ಮುಟ್ಟಿಸಿಕೊಳ್ಳುವಂತಿಲ್ಲ. ಆಧುನಿಕ ಅಸ್ಪೃಶ್ಯತೆಯನ್ನು ಅನುಭವಿಸಬೇಕಾಯಿತು. ಕೊರೊನಾ ವೇಳೆ ಲಕ್ಷ ಲಕ್ಷ ವೇತನ ಪಡೆದವರನ್ನು ಕೊರೊನಾ ರೋಗಿ ಎಂದು ಮುಟ್ಟಲಿಲ್ಲ. ಆದರೆ, ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಕೆಲಸ ಮಾಡಿದರು.

3-12 ಸಾವಿರ ವೇತನ ಪಡೆಯುವವರು ಕೊರೊನಾ ವೇಳೆ ಕೆಲಸ ಮಾಡಿದರು. ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕರ್ತರ ವೇತನ ಹೆಚ್ಚಳಕ್ಕೆ ಕ್ರಮ ಆಗಿಲ್ಲ. ಕೊರೊನಾದಿಂದ ಮೃತರಾದ ಕೊರೊನಾ ವಾರಿಯರ್ಸ್​ಗೆ 30 ಲಕ್ಷ ಕೊಟ್ಟಿದ್ದು ಅಭಿನಂದನೀಯ. ಆದರೆ, ಅವರು ಬದುಕಿದ್ದಾಗ ಕೊಡಬೇಕಾಗಿದ್ದನ್ನು ಕೊಡಬೇಕಲ್ಲ ಎಂದರು.

ವೇತನ ಕಡಿತಕ್ಕೆ ರಾಜ್ಯಪಾಲರು ಸೂಚಿಸಬೇಕಿತ್ತು: ಕೊರೊನಾದಿಂದಾಗಿ ಆರ್ಥಿಕತೆಗೆ ಕೊಡಲಿಪೆಟ್ಟು ಬಿದ್ದು, ತೆರಿಗೆ ಸಂಗ್ರಹವಾಗಲಿಲ್ಲ. ಆದಾಯಕ್ಕೆ ಕತ್ತರಿ ಬಿದ್ದರೂ ಸರ್ಕಾರಿ ನೌಕರರ ವೇತನ ಕಡಿತ ಮಾಡಲಿಲ್ಲ. ಆದರೆ, ಶಾಸಕರ ವೇತನ ಕಡಿತವಾಯಿತು. ಸಿಎಂ ಕರೆಗೆ ನಾವೆಲ್ಲಾ ಸ್ಪಂದಿಸಿ ವೇತನ ಕಡಿತಕ್ಕೆ ಒಪ್ಪಿದೆವು.

ಆದರೆ, ಕಾರ್ಯಾಂಗದ ಪ್ರಮುಖನಾಗಿ ಆದೇಶ ಕೊಡುತ್ತೇನೆ,‌ ಶಾಸಕಾಂಗ ವೇತನ ಕಡಿತ ಮಾಡಿಕೊಂಡಿದೆ. ಅದರಂತೆ ನೀವೂ ವೇತನ ಕಡಿತ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ‌ ರಾಜ್ಯಪಾಲರು ಆದೇಶ ದಯಪಾಲಿಸಬೇಕಿತ್ತು. ಅದು ಆಗಲೇ ಇಲ್ಲ, ನಮಗೆ ರಾಜ್ಯಪಾಲರು ಭಾಷಣ ದಯಪಾಲಿಸಬೇಕಾಗಿರಲಿಲ್ಲ, ಅಧಿಕಾರಿಗಳ ವೇತನ ಕಡಿತ ಮಾಡುವ ಸೂಚನೆ ದಯಪಾಲಿಸಬೇಕಿತ್ತು ಎಂದು ಆಯನೂರು ಅಭಿಪ್ರಾಯಪಟ್ಟರು.

ಶಿಕ್ಷಕರನ್ನೂ ಉಳಿಸಿಕೊಳ್ಳಬೇಕಿದೆ : ನಮಗೆ ಗೋವು ಪೂಜನೀಯ ಪ್ರಾಣಿ, ನಾವು ಗೋವನ್ನು ಮಾತೆ ಎಂದು ಪೂಜಿಸುತ್ತೇವೆ. ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆ ಪರ ನಾನಿದ್ದೇನೆ. ಈ ಸದನದಲ್ಲಿ ಬಿಲ್ ಬರಲಿದೆ, ಅಂಗೀಕಾರವೂ ಆಗಲಿದೆ. ಪೂಜನೀಯ ಗೋವುಗಳನ್ನು ಕಾಪಾಡಿಕೊಳ್ಳುವ ರೀತಿ ನಾವು ಉಪನ್ಯಾಸಕರನ್ನೂ ಕಾಪಾಡಿಕೊಳ್ಳಬೇಕು.

ನೆಟ್, ಸ್ಲೆಟ್ ಆದ ಅತಿಥಿ ಉಪನ್ಯಾಸಕರಿಗೆ ನಾವು 13-14 ಸಾವಿರ ಕೊಡುತ್ತಿದ್ದೇವೆ. ಗುರುಬ್ರಹ್ಮ, ಗುರುದೇವ ಎನ್ನುವ ನಾವು ಏನು ಮಾಡುತ್ತಿದ್ದೇವೆ ಎಂದು ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಕನಿಷ್ಠ ವೇತನಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.