ಬೆಂಗಳೂರು: ಟಿಡಿಆರ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಚೆಕ್ ಡಿಸ್ಕೌಂಟ್ ಮಾಡುತ್ತಿದ್ದ ಆರೋಪದಡಿ ಏಜೆಂಟ್ ರಾಜೇಶ್ ಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನೆಡೆಸಿ ಪರಿಶೀಲನೆ ನೆಡೆಸಿದ್ದಾರೆ.
ಕಾಟನ್ ಪೇಟೆಯಲ್ಲಿರುವ ರಾಜೇಶ್ ಕುಮಾರ್ ಮನೆ ಮೇಲೆ ಎಸಿಬಿ ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ನೆಡೆಸಿದ್ದ ತಂಡ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದೆ.
ಚೆಕ್ ಡಿಸ್ಕೌಂಟ್ ಮೂಲಕ ಅಕ್ರಮವಾಗಿ ಒಂದೇ ಬ್ಯಾಂಕಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪ ರಾಜೇಶ್ ಕುಮಾರ್ ಮೇಲೆ ಕೇಳಿ ಬಂದಿತ್ತು. ಬನಶಂಕರಿ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ಗೆ ಹಣ ಸಂದಾಯ ಮಾಡುತ್ತಿದ್ದರಿಂದ ನಿನ್ನೆಯಷ್ಟೇ ಬನಶಂಕರಿ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಮೇಲೆಯೂ ದಾಳಿ ನಡೆಸಿದ್ದ ಅಧಿಕಾರಿಗಳು ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂ.ಮೌಲ್ಯದ ದಾಖಲಾತಿಗಳನ್ನ ಪತ್ತೆ ಮಾಡಿದ್ದರು.