ETV Bharat / state

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ: ನೂರು ದಿನಗಳಲ್ಲಿ 718 ಮೀಟರ್ ಸುರಂಗ ಕೊರೆದು ಹೊರಬಂದ "ಟಿಬಿಎಂ ರುದ್ರ".... - ನಮ್ಮ ಮೆಟ್ರೋ

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಭಾಗವಾಗಿ ರುದ್ರ ಹೆಸರಿನ ಸುರಂಗ ಕೊರೆಯುವ ಯಂತ್ರ 718 ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿದೆ.

ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯಾಚರಣೆ
ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯಾಚರಣೆ
author img

By ETV Bharat Karnataka Team

Published : Oct 27, 2023, 7:19 AM IST

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ಮತ್ತೊಂದು ಟಿಬಿಎಂ ಯಶಸ್ವಿ ಕಾರ್ಯಾಚರಣೆ ನಡೆಸಿ ಹೊರ ಬಂದಿದೆ. ಮೆಟ್ರೋ ಎರಡನೇ ಹಂತದಲ್ಲಿ 100 ದಿನಗಳ ಕಾಲ ಭೂಗರ್ಭದಲ್ಲಿ ಸುರಂಗ ಕೊರೆದು ಸುರಂಗ ಪ್ರವೇಶಿಸಿದ್ದ ರುದ್ರ ಟಿಬಿಎಂ ಗುರುವಾರ ಯಶಸ್ವಿಯಾಗಿ ತನ್ನ ಮಿಷನ್ ಪೂರೈಸಿದೆ. ಜು.14 ರಂದು ಸುರಂಗ ಕೊರೆಯುವ ಕಾಮಗಾರಿ ಆರಂಭಿಸಿದ್ದ "ಟಿಬಿಎಂ ರುದ್ರ" ಅ.26ರವರೆಗೆ ಸುರಂಗ ಕೊರೆದು ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಲ್ಯಾಂಗ್ ಫೋರ್ಡ್ ನಿಲ್ದಾಣದ ಬಳಿ ಹೊರ ಬಂದಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಮಾಹಿತಿ ನೀಡಿದೆ.

ಲಕ್ಕಸಂದ್ರದಿಂದ ಲ್ಯಾಂಗ್ ಫೋರ್ಡ್ ವರೆಗೆ ಎರಡನೇ ಹಂತದ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಇದು ಏಳನೇ ಟಿಬಿಎಂ ಕಾರ್ಯಾಚರಣೆಯಾಗಿದೆ. ಕಳೆದ ತಿಂಗಳು ಆಗಸ್ಟ್‌ನಲ್ಲಿ ವಮಿಕಾ ಹೆಸರಿನ ಯಂತ್ರ ಕಾಳೇನ ಅಗ್ರಹಾರ-ನಾಗವಾರ ‘ಗುಲಾಬಿ’ ಮಾರ್ಗದ (21.30 ಕಿಲೋ ಮೀಟರ್‌) ಸುರಂಗ ಕಾಮಗಾರಿಯಲ್ಲಿ 721 ಮೀಟರ್‌ ಮೆಟ್ರೋ ಸುರಂಗ ಕೊರೆದು ಹೊರ ಬಂದಿತ್ತು.

ಈ ಹಿಂದೆ ಟಿಬಿಎಂ ಯಂತ್ರವು ಸೌತ್ ರ್ಯಾಂಪ್ ಮತ್ತು ಡೈರಿ ಸರ್ಕಲ್ ನಿಲ್ದಾಣದ ಮಧ್ಯೆ ಒಟ್ಟು 613.2 ಮೀಟರ್ ಸುರಂಗ ಕೊರೆದಿತ್ತು. ನಂತರ ಡೇರಿ ವೃತ್ತದ ನಿಲ್ದಾಣದಿಂದ ಲಕ್ಕಸಂದ್ರ ಮೆಟ್ರೋ ನಿಲ್ದಾಣದ ಮಧ್ಯದವರೆಗಿನ 746.2 ಮೀಟರ್‌ ಉದ್ದದ ಸುರಂಗ ಕೊರೆಯುವಲ್ಲಿ ಟಿಬಿಎಂ ಯಶಸ್ವಿಯಾಗಿತ್ತು.

900 ಮೀ ಸುರಂಗ ಕೊರೆದಿದ್ದ ವಿಂಧ್ಯಾ: ಈ ಹಿಂದೆ ಗೊಟ್ಟಗೆರೆ ಮತ್ತು ನಾಗವಾರ ಮಾರ್ಗವಾಗಿ ನಡೆದಿದ್ದ ಕಾಮಗಾರಿ ವೇಳೆ ಟಿಬಿಎಂ ವಿಂಧ್ಯಾ ಸರಿಸುಮಾರು 900 ಮೀಟರ್ ಉದ್ದ ಕಲ್ಲು ಬಂಡೆಗಳನ್ನು ಕೊರೆದು ಪಾಟರಿ ಟೌನ್ ಬಳಿ ಹೊರ ಬಂದಿತ್ತು. ಇದಕ್ಕೂ ಮೊದಲು ಕಂಟೋನ್‌ಮೆಂಟ್​​​ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗಿನ ಸುರಂಗ ಮಾರ್ಗವನ್ನೂ ವಿಂಧ್ಯಾ ಕೊರೆದಿತ್ತು. ಕಂಟೋನ್​​​ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ವಿಂಧ್ಯಾ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬಂದಿತ್ತು.

2021ರ ಜೂನ್ ತಿಂಗಳಿನಲ್ಲಿ ಮೆಟ್ರೋ ಕಾಮಗಾರಿ ಭಾಗವಾಗಿ ಸುರಂಗ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.‌ ಇದರ ಭಾಗವಾಗಿ ವಾಮಿಕ ಎಂಬ ಯಂತ್ರ ಕೂಡ ಸುರಂಗ ಕೊರೆಯುವ ಕಾರ್ಯಾಚರಣೆ ನಡೆಸಿತ್ತು. ಡೈರಿ ಸರ್ಕಲ್​​ನಿಂದ ಸುರಂಗ ಕೊರೆಯುವ ಕಾರ್ಯ ಪ್ರಾರಂಭಿಸಿದ ವಾಮಿಕ ಹೆಸರಿನ ಯಂತ್ರ ಮೊದಲ ಕಾರ್ಯದಲ್ಲಿ ಸರಿಸುಮಾರು 614 ಮೀಟರ್ ಸುರಂಗ ಕೊರೆದು ಹೊರಬಂದಿತ್ತು.

ಇದನ್ನೂ ಓದಿ: ಸರ್ಕಾರಿ ಕಾಮಗಾರಿಗಳು ಮೂಲ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತಗೊಳ್ಳುವ ಪಟ್ಟಿ ನಿಯಂತ್ರಣಕ್ಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.