ETV Bharat / state

'ಕ್ಷಯ ರೋಗ ಮುಕ್ತ ಭಾರತ ಅಭಿಯಾನ': 300 ಕ್ಷಯ ಪೀಡಿತರನ್ನು ದತ್ತು ಪಡೆದ ಲೆಹರ್ ಸಿಂಗ್

ಕ್ಷಯ ರೋಗ ಪೀಡಿತರನ್ನು ದತ್ತು ಪಡೆಯುವ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್‌ ಅವರು ಸಿರೋಯಾ 'ಕ್ಷಯ ರೋಗ ಮುಕ್ತ ಭಾರತ ಅಭಿಯಾನ'ಕ್ಕೆ ಕೈ ಜೋಡಿಸಿದ್ದಾರೆ.

Lehar Singh adopted tuberculosis patients
ಕ್ಷಯ ಪೀಡಿತರಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್‌ ವಿತರಣೆ
author img

By

Published : Feb 19, 2023, 7:01 AM IST

ಕ್ಷಯ ಪೀಡಿತರಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್‌ ವಿತರಣೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಕ್ಷಯ ರೋಗ ಮುಕ್ತ ಭಾರತ' ಉಪಕ್ರಮಕ್ಕೆ ಸ್ಪಂದಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್‌ ಸಿರೋಯಾ ಅವರು 300 ಕ್ಷಯ ಪೀಡಿತರನ್ನು ದತ್ತು ತೆಗೆದುಕೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮನುಷ್ಯ ಆರೋಗ್ಯದಿಂದ ಇರಬೇಕಾದರೆ ದೈಹಿಕ ಮತ್ತು ಮಾನಸಿಕ ಪರಿಶುದ್ಧತೆ ಅತ್ಯಂತ ಮುಖ್ಯ. ಹೀಗಿದ್ದಲ್ಲಿ ಮಾತ್ರ ನಾವು ಆಧುನಿಕ ಜೀವನ ಪದ್ಧತಿ ಸೃಷ್ಟಿಸಿರುವ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು. ಮಧುಮೇಹ, ರಕ್ತದೊತ್ತಡ ಹಾಗು ಬೊಜ್ಜು ಸೇರಿದಂತೆ ಹಲವು ಕಾಯಿಲೆಗಳಿಗೆ ಇದೇ ಸರಿಯಾದ ಮದ್ದು" ಎಂದರು.

"ಸದೃಢ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಪ್ರಜೆಗಳು ಮುಖ್ಯ. ಹೀಗಾಗಿ ಕಳೆದ 8 ವರ್ಷಗಳಿಂದೀಚೆಗೆ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಪ್ರಧಾನಿ ಅವಿರತ ಶ್ರಮಿಸುತ್ತಿದ್ದಾರೆ. ಕೋವಿಡ್​​ನಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರು ಆರೋಗ್ಯ ಕ್ಷೇತ್ರದ ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸಿದ್ಧಾರೆ" ಎಂದು ತಿಳಿಸಿದರು.

"ಜೀವನದಲ್ಲಿ ಸುಖದ ಹಿಂದೆಯೇ ಕಷ್ಟ ಬರುತ್ತದೆ. ಇದನ್ನು ಬದಲಿಸಲು ಸಾಧ್ಯವಿಲ್ಲ. ಬದಲಿಗೆ, ಕಷ್ಟವನ್ನು ಎದುರಿಸುವ ಛಾತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವ ಕ್ರಮ ನಮ್ಮ ವ್ಯವಸ್ಥೆಗೆ ಅನಿವಾರ್ಯವಾಗಿದೆ. ಆದರೆ ಇದಕ್ಕೂ ಮುನ್ನ ನಾವು ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಬೇಕು. ಈ ಮೂಲಕ ಯಾವುದೇ ಕಾಯಿಲೆ ಬರದಂತೆ ಆದಷ್ಟು ಎಚ್ಚರ ವಹಿಸಬೇಕು" ಎಂದು ಲೆಹರ್ ಸಿಂಗ್‌ ಸಲಹೆ ನೀಡಿದರು.

"ಲೆಹರ್ ಸಿಂಗ್‌ ಅವರ ಈ ಉಪಕ್ರಮ ಮನುಕುಲಕ್ಕೆ ಸಂದ ಸೇವೆಯಾಗಿದೆ. ಇದರಲ್ಲಿ ಮಾನವೀಯತೆ ಮತ್ತು ಸಹಾನುಭೂತಿ ಎರಡೂ ಇವೆ. ಮನುಷ್ಯರು ಅನಾರೋಗ್ಯಕ್ಕೆ ಒಳಗಾಗಿ ಅಸಹಾಯಕವಾಗುತ್ತಿರುವಾಗ ಜನಪ್ರತಿನಿಧಿಯೊಬ್ಬರು ಹೀಗೆ ಸೇವಾ ಮನೋಭಾವದಿಂದ ಸ್ಪಂದಿಸುತ್ತಿರುವುದು ಚೇತೋಹಾರಿ ಬೆಳವಣಿಗೆ" ಎಂದು ಸಚಿವ ಅಶ್ವತ್ಥ ನಾರಾಯಣ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕ್ಷಯ ಪೀಡಿತರಿಗೆ ಪೌಷ್ಟಿಕಾಹಾರ ಪದಾರ್ಥಗಳ ಕಿಟ್‌ ಮತ್ತಿತರ ನೆರವಿನ ಸಾಮಗ್ರಿ ವಿತರಿಸಲಾಯಿತು.

ಕ್ಷಯ ರೋಗಿಗಳ ದತ್ತು: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಕ್ಷಯ ಮುಕ್ತ ಭಾರತ ಅಭಿಯಾನ'ಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೈಜೋಡಿಸಿದ್ದರು. ಇತ್ತೀಚೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ಕ್ಷಯ ರೋಗಿಗಳನ್ನು ದತ್ತು ಪಡೆದು ಕ್ಷಯ ರೋಗ ಮುಕ್ತ ಭಾರತ ಅಭಿಯಾನಕ್ಕೆ ಸಾಥ್​ ನೀಡಿದ್ದರು. ಭಾರತದಲ್ಲಿ ಪ್ರತಿ ವರ್ಷ ಅಂದಾಜು 26 ಲಕ್ಷ ಕ್ಷಯ ರೋಗದ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 4.45 ಲಕ್ಷ ಜನ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂದಿಗೂ ಭಾರತದಲ್ಲಿ ಕ್ಷಯರೋಗ ನಿರ್ಮೂಲನೆ ಸವಾಲಾಗಿ ಪರಿಣಮಿಸಿದೆ.

2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತವನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕ್ಷಯ ರೋಗದ ವಿರುದ್ಧದ ಹೋರಾಟವನ್ನು ಜನಾಂದೋಲನ ಮಾದರಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಟಿಬಿ ಮುಕ್ತ ಭಾರತ ಅಭಿಯಾನ.. 10 ಕ್ಷಯ ರೋಗಿಗಳನ್ನು ದತ್ತು ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.