ETV Bharat / state

ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದರಾ ಮೋದಿ? - ಕೆಂಪೇಗೌಡರ ಕಂಚಿನ ಪ್ರತಿಮೆ

ಐದು ತಿಂಗಳಿನಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಮೋದಿ ಭೇಟಿ ನೀಡಿದ್ದಾರೆ. ಈವರೆಗಿನ ಪ್ರವಾಸದ ವೇಳೆ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಮತದಾರರ ಸೆಳೆಯುತ್ತಿದ್ದ ಪ್ರಧಾನಿ ಮೋದಿ, ಈ ಬಾರಿ ಪ್ರಮುಖ ನಾಲ್ಕು ಸಮುದಾಯಗಳ ಮತಬುಟ್ಟಿಗೆ ಕೈ ಹಾಕಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್
ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್
author img

By

Published : Nov 11, 2022, 6:08 PM IST

ಬೆಂಗಳೂರು: 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಸಮುದಾಯಗಳ ಮತಗಳನ್ನು ಸೆಳೆಯಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಆರಂಭಿಕ ಹಂತವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ನಾಲ್ಕು ಸಮುದಾಯಗಳ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್​ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.

ನಾಲ್ಕು ಸಮುದಾಯಗಳ ಮತಬುಟ್ಟಿಗೆ ಕೈ ಹಾಕಿದ ಮೋದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಆರೇಳು ತಿಂಗಳು ಬಾಕಿ ಉಳಿದಿದ್ದು, ರಾಜ್ಯಕ್ಕೆ ಬಿಜೆಪಿ ವರಿಷ್ಠರು ಹೆಚ್ಚಿನ ಗಮನ ನೀಡಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಐದು ತಿಂಗಳಿನಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಭೇಟಿ ನೀಡಿದರು. ಈವರೆಗಿನ ಪ್ರವಾಸದ ವೇಳೆ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಮತದಾರರ ಸೆಳೆಯುತ್ತಿದ್ದ ಪ್ರಧಾನಿ ಮೋದಿ ಈ ಬಾರಿ ಪ್ರಮುಖ ನಾಲ್ಕು ಸಮುದಾಯಗಳ ಮತ ಬುಟ್ಟಿಗೆ ಕೈ ಹಾಕಿದ್ದಾರೆ.

Bronze statue of Kempegowda
ಕೆಂಪೇಗೌಡರ ಕಂಚಿನ ಪ್ರತಿಮೆ

ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮೋದಿ ಮಾಡಿದ ಮೊದಲ ಕೆಲಸ ಎಂದರೆ ದಾಸ ಶ್ರೇಷ್ಟ ಕನಕದಾಸರ ಜಯಂತಿ ನಿಮಿತ್ತ ಕನಕರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಮಹರ್ಷಿ ವಾಲ್ಮೀಕಿ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ಇದರ ಜೊತೆಗೆ ವೀರ ವನಿತೆ ಒನಕೆ ಓಬವ್ವ ಸ್ವರಣೆಯನ್ನೂ ಮಾಡಿದರು.

ಕುರುಬ ಸಮುದಾಯ ಟಾರ್ಗೆಟ್​ ಮಾಡಿದ ಮೋದಿ: ಈ ಮೂಲಕ ಸಿದ್ದರಾಮಯ್ಯ ಬೆನ್ನಿಗಿರುವ ಕುರುಬ ಸಮುದಾಯವನ್ನು ಮೋದಿ ಟಾರ್ಗೆಟ್ ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ಜೊತೆಗೆ ಮಹರ್ಷಿ ಸ್ಮರಿಸುವ ಮೂಲಕ ಎಸ್ಟಿ ಸಮುದಾಯವನ್ನೂ ಭದ್ರಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಇದು ಮುಂಬರಲಿರುವ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?

ನಂತರ ವಂದೇ ಭಾರತ್ ಮತ್ತು ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿ ಕಾಶಿ ಯಾತ್ರಾತ್ರಿಗಳಿಗೆ ಸಂತಸದ ಸುದ್ದಿ ನೀಡಿದ ನರೇಂದ್ರ ಮೋದಿ ನಂತರ ಒಕ್ಕಲಿಗ ಮತಗಳ ಟಾರ್ಗೆಟ್ ಎನ್ನುವಂತೆ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು. ಆ ಮೂಲಕ ಒಕ್ಕಲಿಗ ಮತಕ್ಕಾಗಿ ಪೈಪೋಟಿ ನಡೆಸುತ್ತಿರುವ ಜೆಡಿಎಸ್ ನ ದಳಪತಿಗಳು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮೋದಿ ಮಾಸ್ಟರ್ ಸ್ಟ್ರೋಕ್ ನೀಡುವ ರೀತಿ ಕೆಂಪೇಗೌಡ ಪ್ರತಿಮೆ ಉದ್ಘಾಟಿಸಿದರು.

ಬಿಎಸ್​ವೈ, ಬೊಮ್ಮಾಯಿ ಕೊಡುಗೆಗಳ ಪ್ರಸ್ತಾಪ: ಒಕ್ಕಲಿಗ ಸಮುದಾಯದ ಪರಮೋಚ್ಚ ಸ್ವಾಮೀಜಿಯಾಗಿರುವ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಕೆಂಪೇಗೌಡರ ಕನಸಿನ ಬೆಂಗಳೂರು ಕಟ್ಟುವ ಘೋಷಣೆ ಮಾಡಿ ಒಕ್ಕಲಿಗ ಸಮುದಾಯವನ್ನು ಆಕರ್ಷಿಸುವ ತಂತ್ರ ಅನುಸರಿಸಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಕೊಡುಗೆಯನ್ನು ಪ್ರಸ್ತಾಪಿಸುತ್ತಲೇ ಬಿಜೆಪಿ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯವನ್ನೂ ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನಿಸಿದರು.

ಇದನ್ನೂ ಓದಿ: ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಬಿಜೆಪಿ ಜೊತೆಗಿರುವ ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಜೆಡಿಎಸ್ ಬೆನ್ನಿಗಿರುವ ಮತ್ತು ಕಾಂಗ್ರೆಸ್ ಗೆ ವರ್ಗಾವಣೆಯಾಗಬಹುದಾದ ಒಕ್ಕಲಿಗ ಸಮುದಾಯದ ಮತಗಳು, ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಕುರುಬ ಸಮುದಾಯದ ಮತಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಮೋದಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನೂ ಕೇಂದ್ರೀಕರಿಸಿಕೊಂಡಿದ್ದಾರೆ. ದಲಿತ ಹಿಂದುಳಿದ ವರ್ಗಗಳ ಜೊತೆಗೆ ಮೇಲ್ವರ್ಗದ ಮತಗಳನ್ನೂ ತನ್ನಿಂದ ಜಾರದಂತೆ ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಕೇಸರಿಪಡೆ ಅನುಸರಿಸಿದೆ.

ಕರ್ನಾಟಕಕ್ಕೆ ಆದ್ಯತೆ: ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆದ್ಯತೆ ನೀಡಿದ್ದಾರೆ. ಜೂನ್ ತಿಂಗಳಿನಲ್ಲಿ ಉಪನಗರ ರೈಲು ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ರಾಜ್ಯಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದ ಮೋದಿ ಮೈಸೂರಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದರು.

ನಂತರ ಸೆಪ್ಟೆಂಬರ್ ನಲ್ಲಿ ಮಂಗಳೂರಿಗೆ ಆಗಮಿಸಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿ ಕರಾವಳಿಗರನ್ನು ಸೆಳೆದಿದ್ದರು. ಇದೀಗ ಐದು ತಿಂಗಳಿನಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಆಗಮಿಸಿದ ಮೋದಿ ಇಂದು ಮತ್ತೊಮ್ಮೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮತ್ತೊಮ್ಮೆ ರಾಜ್ಯಕ್ಕೆ ಕೇಂದ್ರ ಆದ್ಯತೆ ನೀಡುತ್ತಿದೆ ಎನ್ನುವ ಸಂದೇಶವನ್ನು ಜನತೆಗೆ ರವಾನಿಸಿದ್ದಾರೆ.

ಸಮ್ಮಿಟ್ ಗಳಿಗೆ ವರ್ಚುಯಲ್​ ಮೂಲಕ ಭಾಗಿ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ವರ್ಚುಯಲ್ ಮೂಲಕ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಹೂಡಿಕೆಯಲ್ಲಿ ರಾಜ್ಯ ಮುಂದಿದೆ ಎಂದು ಹಾಡಿ ಹೊಗಳಿದ್ದರು. ಐಟಿ ದಿಗ್ಗಜರು, ಜಾಗತಿಕ ಉದ್ಯಮಿಗಳನ್ನು ರಾಜ್ಯಕ್ಕೆ ಆಗಮಿಸುವಂತೆ ಆಹ್ವಾನಿಸಿ ಗಮನ ಸೆಳೆದಿದ್ದರು.

ಅದರ ಬೆನ್ನಲ್ಲೇ ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ 25 ನೇ ವರ್ಷದ ಐಟಿ ಸಮ್ಮಿಟ್​​​ಗೂ ವರ್ಚುಯಲ್ ಮೂಲಕ ಚಾಲನೆ ನೀಡಲಿದ್ದಾರೆ ಆ ಮೂಲಕ ಐಟಿ ವರ್ಗದ ಸಮುದಾಯವನ್ನೂ ಸೆಳೆಯಲು ಮೋದಿ ಮುಂದಾಗಿದ್ದಾರೆ.

ಡಬ್ಬಲ್ ಇಂಜಿನ್ ಮಂತ್ರ:ಪ್ರಧಾನಿ ಮೋದಿ ರಾಜ್ಯಕ್ಕೆ ಮೂರನೇ ಬಾರಿ ಬಂದರೂ ಮೂರೂ ಬಾರಿಯೂ ಡಬ್ಬಲ್ ಇಂಜಿನ್ ಸರ್ಕಾರದ ಜಪ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇಲ್ಲಿ ಡಬ್ಬಲ್ ಇಂಜಿನ್ ನ ಶಕ್ತಿಯುತ ಸರ್ಕಾರವಿದೆ ಎಂದು ಪದೇ ಪದೇ ಹೇಳಿಕೆ ನೀಡುವ ಮೂಲಕ ರಾಜ್ಯದ ಜನತೆಯನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಅಮಿತ್ ಶಾ, ನಡ್ಡಾ ಭೇಟಿ:ಮೋದಿ ಭೇಟಿ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಹೈಕಮಾಂಡ್ ನಾಯಕರು ಕರ್ನಾಟಕ ರಾಜಕಾರಣದತ್ತ ಚಿತ್ತ ಹರಿಸಲಿದ್ದು, ಎಲ್ಲಾ ತಂತ್ರಗಾರಿಕೆಯನ್ನು ಖುದ್ದು ಹೆಣೆಯಲಿದ್ದಾರೆ. ರಾಜ್ಯಕ್ಕೆ ಪದೇ ಪದೇ ಆಗಮಿಸಿ ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.