ETV Bharat / state

ಟೆಕ್​ ಸಮ್ಮಿಟ್​ನಲ್ಲಿ ಗಮನಸೆಳೆಯುತ್ತಿರುವ ತಾರೆ ಜಮೀನ್ ಪರ್​ನ ಸಂಚಾರಿ ತಾರಾಲಯ

ಬೆಂಗಳೂರಿನ ಟೆಕ್​ ಸಮ್ಮಿಟ್​ನಲ್ಲಿ ತಾರೆ ಜಮೀನ್ ಪರ್ ಸಂಸ್ಥೆಯು ಆಯೋಜಿಸಿರುವ ಚಂದ್ರಯಾನ–3 ಪೆವಿಲಿಯನ್ ಎಲ್ಲರನ್ನೂ ಆಕರ್ಷಿಸುತ್ತಿದೆ.

ತಾರೆ ಜಮೀನ್ ಪರ್​ನ ಸಂಚಾರಿ ತಾರಾಲಯ
ತಾರೆ ಜಮೀನ್ ಪರ್​ನ ಸಂಚಾರಿ ತಾರಾಲಯ
author img

By ETV Bharat Karnataka Team

Published : Nov 29, 2023, 8:23 PM IST

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಸಂಚಾರಿ ವ್ಯವಸ್ಥೆ ಮೂಲಕ ಶಾಲೆಯ ಬಾಗಿಲಿಗೆ ತಾರಾಲಯ ಕೊಂಡೊಯ್ಯುತ್ತಿರುವ ತಾರೆ ಜಮೀನ್ ಪರ್ ಸಂಸ್ಥೆಯು ಆಯೋಜಿಸಿರುವ ಚಂದ್ರಯಾನ–3 ಪೆವಿಲಿಯನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್​ನಲ್ಲಿ ಇದು ತಂತ್ರಜ್ಞರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇದಕ್ಕಾಗಿ ಜಿಯೋಡೆಸಿಕ್ ಡೋಮ್ ಪ್ಲಾನಿಟೋರಿಯಮ್ ಅಳವಡಿಸಲಾಗಿದ್ದು, ವಿಆರ್ ತಂತ್ರಜ್ಞಾನದ ಮೂಲಕ ಚಂದ್ರಯಾನದ ಅಭೂತಪೂರ್ವ ಅನುಭೂತಿಯನ್ನು ಇದು ನೀಡುತ್ತಿದೆ. ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಈ ಪೆವಿಲಿಯನ್​ಗೆ ಚಾಲನೆ ನೀಡಿ ಸಂತಸ ವ್ಯಕ್ತಪಡಿಸಿದರು.

ತಾರೆ ಜಮೀನ್ ಪರ್​ನ ಸಂಚಾರಿ ತಾರಾಲಯಕ್ಕೆ ಡಿಸಿಎಂ ಭೇಟಿ

ಇಲ್ಲಿ ಚಂದ್ರಯಾನ–3 ಉಪಗ್ರಹ ಮತ್ತು ರೋವರ್ ಪ್ರಮುಖ ಆಕರ್ಷಣೆಯ ಸಂಗತಿಯಾಗಿದೆ. ತಾರೆ ಜಮೀನ್ ಪರ್ ಸಂಸ್ಥೆಯ ಸಂಸ್ಥಾಪಕ ದಿನೇಶ್ ಬಾದಗಂಡಿ ನೇತೃತ್ವದಲ್ಲಿ ಚಂದ್ರಯಾನ–3 ಮಾದರಿ ಅಳವಡಿಸಲಾಗಿದ್ದು, ಇಸ್ರೋದ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ ಅತೀವ ಆಸಕ್ತಿ ವ್ಯಕ್ತವಾಗಿದೆ. ದಿನೇಶ್ ಬಾದಗಂಡಿ ಮೂಲತಃ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಅವರು ಪ್ರಿಸ್ಟೀಜಿಯಸ್ ಎಲೆವೇಟ್ – 100 ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.

ರಾಜ್ಯ ಸರ್ಕಾರದ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ತಾರೆ ಜಮೀನ್ ಪರ್ ಸಂಚಾರಿ ಪ್ರಯೋಗಾಲಯದ ಪರಿಕಲ್ಪನೆ ರೂಪಿಸಿದ್ದಾರೆ.

ಈ ಕುರಿತು ದಿನೇಶ್ ಬಾದಗಂಡಿ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಲ್ಲಿ ತಾರಾಲಯ ಸಂಚರಿಸಿ 21 ಲಕ್ಷ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಸಾಂಪ್ರಾದಾಯಿಕ ವಿಧಾನಗಳನ್ನು ಮೀರಿ ಈ ಸಂಸ್ಥೆಯು ಮೇಕ್ ಇನ್ ಕರ್ನಾಟಕ ನೀತಿಗೆ ಸಾಕ್ಷಿಯಾಗಿದ್ದು, ಇದಕ್ಕೆ ಅನುಗುಣವಾಗಿ ಅರೆ ಶಾಶ್ವತ ಜಿಯೋಡೆಸೆಕ್ ಗುಮ್ಮಟವನ್ನು ಅನಾವರಣಗೊಳಿಸಲಾಗಿದೆ. ಇದರಿಂದ ತಾರಾಲಯದ ವೆಚ್ಚ ಶೇ 50 ರಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ಸಾಂಪ್ರದಾಯಿಕ ತಾರಾಲಯಗಳು ಸಂವಾದಾತ್ಮಕ ಕಲಿಕೆಗೆ ಪೂರಕವಾಗಿಲ್ಲ. ಆದರೆ ಇದು ಸಂವಾದಾತ್ಮಕ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಜಾಯ್ ಸ್ಟಿಕ್ ಮತ್ತು ಕೀಬೋರ್ಡ್ ಬಳಕೆ ಮೂಲಕ ಬಳಕೆದಾರರು ಆಕಾಶಕಾಯಗಳನ್ನು ನಿರ್ವಹಿಸಬಹುದು ಮತ್ತು ಅನ್ವೇಷಿಸಬಹುದು. ಚಂದ್ರಯಾನವನ್ನು ಮುನ್ನಡೆಸುವುದು, ಬಾಹ್ಯಾಕಾಶದಲ್ಲಿ ನ್ಯಾವಿಗೇಟ್ ಮಾಡುವುದು ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡುವುದು, ಡಿಜಿಟಲ್ ತಾರಾಲಯವು ಸಾಟಿಯಿಲ್ಲದ ಆಳವಾದ ಪ್ರಯಾಣದ ಅನುಭವ ನೀಡುತ್ತದೆ. ಇದು ತಾರೆ ಜಮೀನ್ ಪರ್​ನ ಸಾಧನೆ ಮಾತ್ರವಲ್ಲ, ನಾವೀನ್ಯತೆ ಮತ್ತು ಶಿಕ್ಷಣದ ಶಕ್ತಿ ಪ್ರದರ್ಶಿಸುವ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಇದನ್ನೂ ಓದಿ: ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.