ಬೆಂಗಳೂರು: ಮೂರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕು ಕಚೇರಿಯನ್ನು ಮತ್ತೊಮ್ಮೆ ಸೀಲ್ಡೌನ್ ಮಾಡಲಾಗಿದೆ.
ವಿಶೇಷ ತಹಶೀಲ್ದಾರ್, ಆರ್.ಐ ಹಾಗೂ ತಹಶೀಲ್ದಾರ್ ಅವರ ವಾಹನ ಚಾಲಕರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದೆ.
ಕಚೇರಿಗೆ ಬಿಬಿಎಂಪಿ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದ್ದು, ಪರಿಸ್ಥಿತಿ ಅವಲೋಕಿಸಿದ ಬಳಿಕ ಗುರುವಾರದಿಂದ ತಹಶೀಲ್ದಾರ್ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಹಶೀಲ್ದಾರ್ ತೇಜಸ್ ಕುಮಾರ್ ಹೇಳಿದರು.
ತಾತ್ಕಾಲಿಕವಾಗಿ ಬೆಂಗಳೂರು ಪೂರ್ವ ತಾಲೂಕು ಕಚೇರಿಯ ಕಾರ್ಯಗಳನ್ನು ತಾಲೂಕಿನ ಕಾರ್ಯನಿರ್ವಾಹಕ ಕಚೇರಿಯಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.