ETV Bharat / state

ಕೋವಿಡ್: ಅಗತ್ಯ ಮುನ್ನೆಚ್ಚರಿಕೆ ಮತ್ತಷ್ಟು ಸಮಯ ಮುಂದುವರೆಸಬೇಕು: ಸಚಿವ ಡಾ ಸುಧಾಕರ್ - ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ

ಜನದಟ್ಟಣೆ ಮತ್ತು ಒಳಾಂಗಣ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮತ್ತಷ್ಟು ಸಮಯ ಮುಂದುವರೆಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಕರೆ ನೀಡಿದ್ದಾರೆ.

health minister dr sudhakar
ಸಚಿವ ಡಾ.ಸುಧಾಕರ್
author img

By

Published : Nov 4, 2022, 4:20 PM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಇನ್ನು ಸಂಪೂರ್ಣ ಹೋಗಿಲ್ಲ ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದನ್ನು ಮತ್ತಷ್ಟು ಸಮಯ ಮುಂದುವರೆಸಬೇಕು, ಅಗತ್ಯವಿರುವ ಕಡೆ ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊರೊನಾ ನಂತರ ಆರೋಗ್ಯ ಕ್ಷೇತ್ರದ ಸವಾಲುಗಳು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಮಂತ್ರಿಯಾದ ಒಂದು ತಿಂಗಳಲ್ಲೇ ಕೋವಿಡ್ ಸವಾಲು ಎದುರಾಯಿತು. ಕೋವಿಡ್ ನನ್ನಗೆ ಹಲವು ಪಾಠಗಳನ್ನು ಕಲಿಸಿತು ಮತ್ತು ಆ ಸಂದರ್ಭದಲ್ಲಿ ಆರೋಗ್ಯ ಮೂಲಸೌಕರ್ಯ ತಕ್ಷಣ ಹೆಚ್ಚಿಸುವುದು ಸವಾಲಾಗಿತ್ತು.

ಅಗತ್ಯ ಆರೋಗ್ಯ ಸಿಬ್ಬಂದಿ ಇರಲಿಲ್ಲ, ಆರೋಗ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಸಮಯ ಇರಲಿಲ್ಲ. ಟೆಲಿ ಮೆಡಿಸಿನ್, ಟೆಲಿ ಐಸಿಯು ವ್ಯವಸ್ಥೆಗಳು ನಮ್ಮಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು ಎಂದರು.

ಹಲವು ಕೊರತೆಗಳ‌ ಮಧ್ಯೆಯೂ ನಾವು ಕೋವಿಡ್ ಅನ್ನು ಯಶಸ್ವಿಯಾಗಿ ಎದುರಿಸಿದೆವು, ಕೋವಿಡ್ ಕಾರಣದಿಂದ ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ವರ್ಷ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಆಗುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆ ಈಗ ಉತ್ತಮ ಮಟ್ಟಕ್ಕೆ ಬಂದಿದೆ ಮತ್ತು ಆರೋಗ್ಯ ಸಿಬ್ಬಂದಿಯ ಪ್ರಮಾಣ ಹೆಚ್ಚಾಗಿದೆ ಎಂದರು.

ಕರ್ನಾಟಕದಲ್ಲಿ 800 ಜನರಿಗೆ 1 ವೈದ್ಯರು ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಮತ್ತು ಉತ್ತಮ ವೈದ್ಯಕೀಯ ಸೌಲಭ್ಯ ಕೊರತೆ ಇದೆ, ಇದನ್ನು ಒಪ್ಪಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲೂ ಉತ್ತಮ ವೈದ್ಯಕೀಯ ಸೌಲಭ್ಯ ‌ನೀಡುವಲ್ಲಿ ಸರ್ಕಾರ ಕ್ರಮ ವಹಿಸುತ್ತಿದೆ ಎಂದರು.

ಮುಂಜಾಗ್ರತಾ ಕ್ರಮ ಅಗತ್ಯ: ಕೋವಿಡ್ ಮುಂಜಾಗ್ರತಾ ಕ್ರಮ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ‌. ಸೌಮ್ಯ ಸ್ವಾಮಿನಾಥನ್, ಜಗತ್ತಿನಲ್ಲಿ ಇನ್ನು ಕೋವಿಡ್ ಸಾಂಕ್ರಾಮಿಕ ದೂರವಾಗಿಲ್ಲ, ಎಲ್ಲ ದೇಶಗಳಲ್ಲೂ ನಿಯಂತ್ರಣದಲ್ಲಿದ್ದರೂ ಕೂಡ ಓಮಿಕ್ರಾನ್ ಭೀತಿ ಇದೆ, ಹಾಗಾಗಿ ಮತ್ತಷ್ಟು ದಿನಗಳ ಕಾಲ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಒಳಾಂಗಣ ಸಮಾರಂಭ, ಜನ ದಟ್ಟಣೆ ಇರುವ ಕಡೆ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಸಚಿವ ಡಾ.ಸುಧಾಕರ್ ಜನದಟ್ಟಣೆ ಮತ್ತು ಒಳಾಂಗಣ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮತ್ತಷ್ಟು ಸಮಯ ಮುಂದುವರೆಸಬೇಕು ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ‌. ಸೌಮ್ಯ ಸ್ವಾಮಿನಾಥನ್ ಹೇಳಿಕೆಯನ್ನು ಬೆಂಬಲಿಸುತ್ತೇನೆ.

ಕೋವಿಡ್ ನಿಯಂತ್ರಣದಲ್ಲಿದೆ, ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಮೈಮರೆಯುವುದು ಒಳ್ಳೆಯದಲ್ಲ, ಮತ್ತಷ್ಟು ಸಮಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸಚಿವರು ಕರೆ ನೀಡಿದರು.

ಇದನ್ನೂ ಓದಿ:ದಾಹ ಮುಕ್ತ ಕರ್ನಾಟಕ ಯೋಜನೆಗೆ ಮೋದಿ ಚಾಲನೆ : ಸಚಿವ ಭೈರತಿ ಬಸವರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.