ದೊಡ್ಡಬಳ್ಳಾಪುರ : ಕೆಲ ದಿನಗಳ ಹಿಂದೆ ಸುರಿದ ಮಳೆಗೆ ವೃದ್ಧೆಯೊಬ್ಬರ ಮನೆ ಕುಸಿದಿತ್ತು. ಈ ಕುರಿತಂತೆ ಈಟಿವಿ ಭಾರತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ತಹಶೀಲ್ದಾರ್ ಆಶ್ರಯ ನೀಡುವ ಭರವಸೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಮಳೆಯ ಆರ್ಭಟಕ್ಕೆ ವೀರಭದ್ರನಪಾಳ್ಳದ ನಿವಾಸಿ ಅಕ್ಕಯಮ್ಮ ಎಂಬ ವೃದ್ಧೆ ವಾಸವಾಗಿದ್ದ ಸಿಮೆಂಟ್ ಮನೆ ಗೋಡೆ ಕುಸಿದು ಬಿದ್ದಿತ್ತು. ಒಂಟಿಯಾಗಿದ್ದ ವೃದ್ಧೆ ಇದೊಂದು ಸೂರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರು.
![Tahsildar helps old woman](https://etvbharatimages.akamaized.net/etvbharat/prod-images/13310300_thumbjpg.jpg)
ಈ ವೇಳೆ ವೃದ್ಧೆ ಅಕ್ಕಯಮ್ಮ ಈಟಿವಿ ಭಾತರದೊಂದಿಗೆ ತಮ್ಮ ನೋವು ತೋಡಿಕೊಂಡಿದ್ದರು. ವೃದ್ಧೆಯ ಕಣ್ಣೀರಿಗೆ ದ್ವನಿಯಾಗಿ ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ತಹಶೀಲ್ದಾರ್ ಟಿ ಎಸ್ ಶಿವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ವೃದ್ಧೆಗೆ ಧೈರ್ಯ ತುಂಬಿ ಮೊದಲ ಹಂತದಲ್ಲಿ 5,200 ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದರು.
ನಗರಸಭೆ ಕಮಿಷನರ್ ಅವರು ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ₹1.50 ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಹೆಂಡತಿ ಮನೆಯಲ್ಲಿ ವಾಸವಾಗಿದ್ದ ಮಗನಿಗೆ ಬುದ್ಧಿವಾದವನ್ನ ಅಧಿಕಾರಿಗಳು ಹೇಳಿದಾರೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಮಗನಿಗೆ ಸೂಚಿಸಿದರು.
ಇದನ್ನೂ ಓದಿ: ಭಾರಿ ಮಳೆ ; ದೊಡ್ಡಬಳ್ಳಾಪುರದಲ್ಲಿ ಮನೆ ಗೋಡೆ ಕುಸಿತ.. ಆಶ್ರಯ ಕಳೆದುಕೊಂಡು ಕಣ್ಣೀರಿಟ್ಟ ವೃದ್ಧೆ..