ಬೆಂಗಳೂರು: ರಾಜ್ಯದಲ್ಲಿ ನಿಧಾನಗತಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಈ ನಡುವೆ ಸರ್ಕಾರವೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ T5 ಸೂತ್ರ ಅಳವಹಿಸಿಕೊಳ್ಳಲು ಮುಂದಾಗುತ್ತಿದೆ.
ಏನಿದು T5 ಸೂತ್ರ?:
- ಟ್ರೇಸಿಂಗ್, ಟೆಸ್ಟಿಂಗ್, ಟ್ರಾಕಿಂಗ್, ಟ್ರೀಟ್ಮೆಂಟ್ ಮತ್ತು ಟೆಕ್ನಾಲಜಿ ಸೂತ್ರ ಅಳವಡಿಕೆ ಮಾಡಿಕೊಂಡು ಪೋರ್ಟಲ್ ಮೂಲಕ ವೆಬ್ ಸಿಸ್ಟಮ್ ನಿರ್ವಹಣೆ ಮಾಡಬೇಕು.
- ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿತರನ್ನು ಟ್ರೇಸ್ ಮಾಡಬೇಕು.
- ಆ್ಯಪ್ ಬಳಕೆ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾವಹಿಸಬೇಕು.
- ಖಾಸಗಿ ಆಸ್ಪತ್ರೆ ಬೆಡ್ ಗಳ ನಿರ್ವಹಣೆ ಕುರಿತು ಆನ್ ಲೈನ್ ನಲ್ಲಿ ಅಲ್ಟೆಮೆಂಟ್ ಕಾರ್ಯನಿರ್ವಹಣೆ ಮಾಡಲು ಸಮಿತಿಗೆ ಕೆಲಸ ವಹಿಸಲಾಗಿದೆ.