ETV Bharat / state

ದೈವಕ್ಕೆ ಪೂಜೆ ಸಲ್ಲಿಸಿ 'ಬೆಂಗಳೂರು ಕಂಬಳ ನಮ್ಮ ಕಂಬಳ'ಕ್ಕೆ ಸಾಂಕೇತಿಕ ಚಾಲನೆ

Bengaluru Kambala Nama Kambala: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅಶ್ವಿನ್​ ಪುನೀತ್ ​ರಾಜ್​ಕುಮಾರ್ ಅವರು ಬೆಂಗಳೂರು​ ಕಂಬಳದ ಸಾಂಕೇತಿಕ ಚಾಲನೆಗೆ ಸಾಕ್ಷಿಯಾದರು.

Symbolic inauguration of 'Bangalore Kambala Nama Kambala'
ದೈವಕ್ಕೆ ಪೂಜೆ ಸಲ್ಲಿಸಿ 'ಬೆಂಗಳೂರು ಕಂಬಳ ನಮ್ಮ ಕಂಬಳ'ಕ್ಕೆ ಸಾಂಕೇತಿಕ ಚಾಲನೆ
author img

By ETV Bharat Karnataka Team

Published : Nov 25, 2023, 1:15 PM IST

Updated : Nov 25, 2023, 3:46 PM IST

ಬೆಂಗಳೂರು ಕಂಬಳ ನಮ್ಮ ಕಂಬಳ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜಾನಪದ ಕ್ರೀಡೆ ಕಂಬಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಗಂಗಾರತಿ ಸೇರಿದಂತೆ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ದೈವಕ್ಕೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಕಂಬಳಕ್ಕೆ ಚಾಲನೆ ನೀಡಲಾಯಿತು.‌ ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ‌ ಕರಂದಾಜ್ಞೆ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಕ್ಷಿಯಾದರು.

'ಬೆಂಗಳೂರು ಕಂಬಳ‌ ನಮ್ಮ‌ ಕಂಬಳ‌' ಹೆಸರಿನಲ್ಲಿ‌ ನಡೆಯುತ್ತಿರುವ ಉತ್ಸವಕ್ಕೆ 150ಕ್ಕೂ ಹೆಚ್ಚು ಚಾಂಪಿಯನ್ ಕೋಣಗಳ ಜೋಡಿ ಹಾಗೂ ನುರಿತ‌ ಓಟಗಾರರು ಭಾಗಿಯಾಗಿದ್ದಾರೆ. ಮುಸ್ಲಿಂ ಸಮುದಾಯದ 6 ಜೋಡಿ, ಕ್ರಿಶ್ವಿಯನ್ ಸಮುದಾಯದ 4 ಜೋಡಿ ಕೋಣಗಳು ಭಾಗಿಯಾಗಿವೆ. ನಿರೀಕ್ಷೆಗೂ ಮೀರಿ ಕಂಬಳ ಕೋಣಗಳ ನೋಂದಣಿಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿ ಕರಾವಳಿ ಕಂಬಳ ಊರು ಬಿಟ್ಟು ಬೇರೆಯೂರಿಗೆ ಬಂದಿವೆ.

ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್
ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್

ಊರಿನಿಂದಲೇ ಬಂದಿರುವ ನಾಟಿ ವೈದ್ಯರು ಸೇರಿದಂತೆ ಬೆಂಗಳೂರಿನ ಪಶುವೈದ್ಯರು ಕೋಣಗಳ ಆರೋಗ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ಸದ್ಯ ಕಂಬಳಕ್ಕೆ ಸಾಂಕೇತಿಕ ಉದ್ಘಾಟನೆ ಸಿಕ್ಕಿದ್ದು, ಮಧ್ಯಾಹ್ನ 3ರ ವರೆಗೆ ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್ ನಡೆಯಲಿದೆ. 3 ಗಂಟೆಯ ಬಳಿಕವಷ್ಟೇ ಸ್ಪರ್ಧಾಕೂಟ ಪ್ರಾರಂಭವಾಗಲಿದೆ. ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕ್ರೀಡೆ ಜೊತೆ ಸಾಂಸ್ಕೃತಿಕ ಹಬ್ಬ: ಬೆಂಗಳೂರು ಕಂಬಳದಲ್ಲಿ ಕ್ರೀಡಾಕೂಟದ ಜತೆ ಜತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಂಗೋಲು ನೃತ್ಯ, ಯಕ್ಷಗಾನ, ಆಟಿಕಳಂಜ, ಹುಲಿವೇಷ, ಕಂಗೀಲು, ಮಂಕಾಳಿ ನಲಿಕೆ, ಬಾಲಿವುಡ್ ಸಮಕಾಲೀನ ನೃತ್ಯ ಸೇರಿದಂತೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು ಕೆರೆ ಅತ್ಯಂತ ಉದ್ದದ ಕೆರೆಯಾಗಿದೆ. ಹಗ್ಗದ ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ. ನೇಗಿಲು ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ. ಇನ್ನೂ ಅಡ್ಡ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸಲಾಗುತ್ತದೆ.

ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್
ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್

ಕೆನೆ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸಲಾಗುತ್ತದೆ. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯವಾಗಿರುತ್ತದೆ. ಕಂಬಳದ ಪ್ರಾರಂಭ ಹಾಗೂ ಅತ್ಯಂತದಲ್ಲಿ ಲೇಸರ್ ಬೀಮ್ ಎಲೆಕ್ಟ್ರಿಕ್ ಸೆಸ್ಸಾರ್ ಆಳವಡಿಸಲಾಗಿದೆ. ಇದರಿಂದ ಕೋಣದ ಓಟ ನಿಖರವಾದ ಸಮಯವನ್ನು ಕಂಡು ಹಿಡಿಯಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡು ದಿನಗಳ ಕಂಬಳ ಉತ್ಸವ ಸಂಭ್ರಮ.. ಬಿಗಿಭದ್ರತೆಗೆ ಪೊಲೀಸ್​ ಇಲಾಖೆ ಸಜ್ಜು

Last Updated : Nov 25, 2023, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.