ಬೆಂಗಳೂರು : ನಗರದ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ನಂಜಾವಧೂತ ಸ್ವಾಮೀಜಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಡಿ.ಕೆ. ಶಿವಕುಮಾರ್ ನಮ್ಮ ಕುಟುಂಬದವರಿದ್ದ ಹಾಗೆ. ದೇಶದಲ್ಲಿ ಉದ್ಯೋಗ ಸಮಸ್ಯೆ ಎದುರಾಗಿದ್ದು, ಜಿಡಿಪಿ ಕುಸಿದಿದೆ. ಅದರ ಬಗ್ಗೆ ಗಮನ ಕೊಡಬೇಕು. ಅದು ಬಿಟ್ಟು ದ್ವೇಷದ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಚಂದ್ರಯಾನ ವೀಕ್ಷಣೆಗೆ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರುತ್ತೇನೆ. ರಾಜ್ಯದಲ್ಲಿನ ನೆರೆ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಇನ್ನು ನಂಜಾವಧೂತ ಸ್ವಾಮೀಜಿ ಮಾತನಾಡಿ, ಸಹಜವಾಗಿ ನೊಂದಿರುವವರನ್ನು ಭೇಟಿ ಮಾಡುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ದೊಡ್ಡ ನಾಯಕರಾಗಿದ್ದು, ಸಹಜವಾಗಿ ಮನೆಯವರಿಗೆ ಆಘಾತವಾಗುತ್ತದೆ. ಅವರ ಪತ್ನಿ, ಮಕ್ಕಳಿಗೆ ಧೈರ್ಯ ಹೇಳಿದ್ದೇನೆ ಎಂದರು. ಇನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮತ್ತು ಅನೇಕ ಸ್ವಾಮೀಜಿಗಳು ಸಹ ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳುತ್ತಿದ್ದಾರೆ.