ETV Bharat / state

ಅನುಮಾನಾಸ್ಪದ ಸ್ಥಿತಿ‌ಯಲ್ಲಿ ನಿವೃತ್ತ ಬಿಇಎಂಎಲ್ ಉದ್ಯೋಗಿ ಶವ ಪತ್ತೆ - Etv Bharat Kannada

ನಿವೃತ್ತ ಬಿಇಎಂಎಲ್​ ಉದ್ಯೋಗಿಯೊಬ್ಬರ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ.

Kn_bng_05_
ಮೃತ ವ್ಯಕ್ತಿ
author img

By

Published : Sep 10, 2022, 5:40 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಿಇಎಂಎಲ್ ನಿವೃತ್ತ ಉದ್ಯೋಗಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಹದೇವಯ್ಯ(85) ಮೃತರು. ಆರ್.ಆರ್.ನಗರದಲ್ಲಿ ವಾಸವಾಗಿದ್ದ ಮಹದೇವಯ್ಯ ಬಿಇಎಂಎಲ್​ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡಿ ಕಳೆದ 15 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಪತ್ನಿ ಜಯಮ್ಮ ಕಾರ್ಪೋರೇಷನ್ ಬ್ಯಾಂಕ್​ನಲ್ಲಿ ಕೆಲಸ‌ ಮಾಡಿ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ದಂಪತಿಗಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.

ಇನ್ನು ಒಬ್ಬಂಟಿಯಾಗಿ ಇರುತ್ತಿದ್ದ ಮಹದೇವಯ್ಯ ಸೆ.4ರಿಂದ ಕಾಣಿಸಕೊಳ್ಳದೇ ಇರುವುದರಿಂದ ಅನುಮಾನಗೊಂಡು ನೆರೆಯ ನಿವಾಸಿ ಭಾರತಿ ಎಂಬುವರು ಅವರು ವಾಸವಿರುವ ಮನೆಗೆ ಹೋಗಿ ನೋಡಿದಾಗ ಮಹದೇವಯ್ಯ ಮೃತರಾಗಿರುವುದು ತಿಳಿದು ಬಂದಿದೆ. ಈ ಕುರಿತು ಪತ್ನಿ ಜಯಮ್ಮಗೆ ವಿಷಯ ತಿಳಿಸಿದ್ದಾರೆ. ಇದನ್ನು ಕಂಡ ಜಯಮ್ಮ ತನ್ನ ಗಂಡನನ್ನ ಅಪರಿಚಿತರು ಕೊಲೆ ಮಾಡಿದ್ದಾರೆ. ಅಲ್ಲದೇ, ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ‌‌‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

ಪ್ರಾಥಮಿಕ ತನಿಖೆ ವೇಳೆ ಮೃತರ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಕಳ್ಳತನವಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೇರಳದಲ್ಲಿ ಗುಂಪು ಗಲಾಟೆ.. ಚಾಕುವಿನಿಂದ ಇರಿದು ಓರ್ವನ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.