ಬೆಂಗಳೂರು : ಕೊರೊನಾ ಭೀತಿಯ ನಡುವೆ ಇದೀಗ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೆ ಏಪ್ರಿಲ್ 1 ರಂದು ಒಂದು ದಿನದ ವಿರಾಮ ನೀಡಲಾಗಿದೆ ಹಾಗಾಗಿ ಅಂದು ರೋಗಿಗಳಿಗೆ ಚಿಕಿತ್ಸೆ ಸಿಗುವುದು ಅನುಮಾನವಾಗಿದೆ.
ಆರೋಗ್ಯ ಇಲಾಖೆಯಲ್ಲಿ ನೌಕರರ ಕೊರತೆ ಇದ್ದು ಖಾಯಂ ನೌಕರರ ಜೊತೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು 24 ಗಂಟೆಗಳ ಕಾಲ, ಕೊರೊನಾ ವೈರಸ್ ವಿರುದ್ಧ ಶ್ರಮಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಯಾರಿಗೂ ರಜೆ ನೀಡದೇ ಕೆಲಸ ಮಾಡಲು ಆದೇಶ ನೀಡಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಎನ್ಎಚ್ಎಂ ರಜೆ ಘೋಷಿಸಿ ಈ ಆದೇಶ ನೀಡಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೆ ಅತ್ಯಂತ ಕಡಿಮೆ ವೇತನ ಇದ್ದು, ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ, ಆದರೂ, ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗುತ್ತಿಗೆ ನೌಕರರು ಅಳಲು.
ಒಟ್ಟಿನಲ್ಲಿ ರಾಜ್ಯ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ 24 ಗಂಟೆಗಳ ಕಾಲ ಸೇವೆ ನೀಡಿದರೂ ಸಮಯ ಸಾಕಾಗುತ್ತಿಲ್ಲ. ಈ ಸಂದರ್ಭದಲ್ಲಿ ಆದೇಶ ಬೇಕಾ ಅನ್ನುವುದು ಪ್ರಶ್ನೆಯಾಗಿದೆ.